Advertisement

ತಾಜ್‌ ಮೀರಿಸಲಿದೆ ಕಸ ಪರ್ವತ

11:18 PM Jun 04, 2019 | Team Udayavani |

ನವದೆಹಲಿ: ರಾಷ್ಟ್ರ ರಾಜಧಾನಿಯ ಪೂರ್ವಕ್ಕಿರುವ ಗಾಜಿಪುರ್‌ನ ಕಸ ವಿಲೇವಾರಿ ಮೈದಾನದಲ್ಲಿ 213 ಅಡಿಗಳಷ್ಟು ದೊಡ್ಡದಾದ “ತ್ಯಾಜ್ಯ ಪರ್ವತ’ ರೂಪುಗೊಂಡಿದ್ದು, ತ್ಯಾಜ್ಯ ವಿಲೇವಾರಿ ಅನಿಯಂತ್ರಿತವಾಗಿ ಹೀಗೇ ಮುಂದುವರಿದರೆ ಈ ಪರ್ವತದ ಎತ್ತರ ಮುಂದಿನ ವರ್ಷ ತಾಜ್‌ಮಹಲನ್ನು (239 ಅಡಿ) ಮೀರಿಸುತ್ತದೆ ಎಂದು ಹೇಳಲಾಗಿದೆ.

Advertisement

1984ರಲ್ಲಿ ಇಲ್ಲಿ ತ್ಯಾಜ್ಯ ಸುರಿಯುವಿಕೆ ಶುರುವಾಗಿದ್ದು, 2002ರ ಹೊತ್ತಿಗಾಗಲೇ ಗರಿಷ್ಠ ಮಟ್ಟ ಮುಟ್ಟಿತ್ತು. ಆದರೆ, ಮತ್ತಷ್ಟು ಮಗದಷ್ಟು ತ್ಯಾಜ್ಯ ಇಲ್ಲಿ ಸುರಿಯಲ್ಪಡುತ್ತಲೇ ಇದೆ. ಪ್ರತಿದಿನ 2000 ಟನ್‌ಗಳಿಗಿಂತ ಹೆಚ್ಚಿನ ತ್ಯಾಜ್ಯ ಇಲ್ಲಿ ಸುರಿಯಲಾಗುತ್ತದೆ. 2018ರಲ್ಲಿ ಇಲ್ಲಿನ ತ್ಯಾಜ್ಯ ಪರ್ವತವೊಂದು ಮಳೆಯಿಂ ದಾಗಿ ಕುಸಿದು ಅಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರನ್ನು ಬಲಿಪಡೆದಿತ್ತು. ಆಗ, ಇಲ್ಲಿ ತ್ಯಾಜ್ಯ ಸುರಿಯುವಿಕೆಗೆ ನಿಷೇಧ ಹೇರಲಾಗಿತ್ತಾದರೂ, ದೆಹಲಿ ಪಾಲಿಕೆಯು ಬದಲಿ ಜಾಗ ಹುಡುಕುವಲ್ಲಿ ವಿಫ‌ಲವಾಗಿದ್ದರಿಂದ ಇಲ್ಲಿ ತ್ಯಾಜ್ಯ ಸುರಿಯುವಿಕೆ ಪುನಃ ಮುಂದುವರಿದಿತ್ತು ಎಂದು ಹೇಳಲಾಗಿದೆ.

ದೊಡ್ಡ ಕಸದ ಪರ್ವತಗಳು ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಕಡಿಮೆ ಎತ್ತರದಲ್ಲಿ ಹಾರಾಡುವ ಜೆಟ್‌ ವಿಮಾನಗಳಿಗೆ ತೊಂದರೆಯಾಗದಂತೆ ಕಸದ ರಾಶಿಗಳ ಮೇಲೆ ಕೆಂಪು ದೀಪಗಳನ್ನು ಅಳವಡಿಸುವಂತೆ ಸುಪ್ರೀಂ ಕೋರ್ಟ್‌ ಕಳೆದ ವರ್ಷ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next