Advertisement
ಆದರೆ, ಸರ್ಕಾರದಿಂದ ಇದುವರೆಗೆ ಯಾವುದೇರೀತಿಯ ಪರಿಷ್ಕೃತ ಆದೇಶ ಬಂದಿಲ್ಲ. ಮತ್ತೂಂದಡೆಜಿಲ್ಲಾಡಳಿತ ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸಲು ಜನರಲ್ಲಿ ವ್ಯಾಪಕವಾಗಿಜಾಗೃತಿ ಮೂಡಿಸುವಂತಹ ಕೆಲಸ ಮಾಡುತ್ತಿದೆ.
Related Articles
Advertisement
ಅರಿಶಿಣ ಮೂರ್ತಿ ರೂಪಿಸಿ ದಾಖಲೆ ನಿರ್ಮಿಸಲು ಸಿದ್ಧತೆ
10 ಲಕ್ಷ ಅರಿಶಿಣ ಗಣೇಶನ ಮೂರ್ತಿಯನ್ನು ರೂಪಿಸಿ, ದಾಖಲೆ ಮಾಡಲು ಈಗಾಗಲೇ ಇಲಾಖೆಯಿಂದಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೇವೆ.ಈಸಂಬಂಧ ಪರಿಸರ ಸಚಿವರು ಸಹ ಮಾಹಿತಿ ನೀಡಿದ್ದಾರೆ.ಅದಕ್ಕಾಗಿ ಒಂದುವೆಬ್ ಲಿಂಕ್ ಸಹ ನೀಡಲಾಗಿದೆ. ಹಬ್ಬದದಿನದಂದುಅದನ್ನು ಬಳಸಿ ವಿಶ್ವದಾಖಲೆ ಮಾಡಲುಯೋಜನೆ ರೂಪಿಸಿದ್ದೇವೆ ಎಂದು ಚಿಕ್ಕಬಳ್ಳಾಪುರ ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿ ವಿಜಯಲಕ್ಷ್ಮಿ ಹೇಳಿದರು.
ಜಿಲ್ಲೆಯಲ್ಲಿ ಹಾಲಿನ ಪ್ಯಾಕೇಟ್ ಮೇಲೆ ಅರಿಶಿಣ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸುವಂತೆಅರಿವು ಮೂಡಿಸುತ್ತಿದ್ದೇವೆ. ಅದರ ಜೊತೆಗೆ ನೀರಿನ ಕ್ಯಾನ್, ಬಾಟಲ್‌ಗಳ ಮೇಲೆ ಸ್ಟಿಕರ್ ಅಂಟಿಸಲು ಸೂಚನೆನೀಡಿದ್ದೇವೆ. ಹಾಗೆಯೇ, ಕರೆಂಟ್ ಬಿಲ್‌ಗಳ ಮೂಲಕ, ಜವಳಿ ಗಾರ್ಮೆಂಟ್ಸ್ ಮತ್ತು ಕಾರ್ಖಾನೆಗಳಲ್ಲಿಸೋಮವಾರದಿಂದ ಜಾಗೃತಿ ಮೂಡಿಸುವಕೆಲಸ ಮಾಡುತ್ತೇವೆ ಎಂದು ವಿವರಿಸಿದರು.
ಎಂ.ಎ.ತಮೀಮ್ ಪಾಷ