Advertisement
ಪ್ರತಿಭಟನೆ ಯಾಕೆ ?ಆರೋಪಿಗಳನ್ನು ಮತ್ತು ಸಂಶಯಾಸ್ಪದ ವ್ಯಕ್ತಿಗಳನ್ನು ಚೀನಕ್ಕೆ ಗಡಿಪಾರು ಕುರಿತಾದ ವಿವಾದಾತ್ಮಕ ತಿದ್ದುಪಡಿ ವಿಧೇಯಕ ಮಂಡನೆಗೆ ಮುಂದಾಗಿರುವ ಹಾಂಕಾಂಗ್ ಸರಕಾರದ ವಿರುದ್ಧ ಅಲ್ಲಿನ ನಿವಾಸಿಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಹಾಂಕಾಂಗ್ ನ ಯಾವ ರಸ್ತೆಯಲ್ಲಿ ನೋಡಿದರೂ ಮೈಲುದ್ದದ ಜನರ ಸಾಲುಗಳೇ ಕಾಣಸಿಗುತ್ತಿದೆ. 3 ತಿಂಗಳುಗಳಿಂದ ಪ್ರಕ್ಷುಬ್ದಗೊಂಡ ಪರಿಸ್ಥಿತಿ ಅಲ್ಲಿನ ಬೀದಿಗಳಲ್ಲಿ ಸೃಷ್ಟಿಯಾಗಿದೆ.
1997ರವರೆಗೆ ಬ್ರಿಟಿಷ್ ಕಾಲೊನಿ ಎಂದು ಕರೆಯಲಾಗುತ್ತಿದ್ದ ಹಾಂಕಾಂಗ್ ನಗರ ಬಳಿಕ ಚೀನದೊಂದಿಗೆ ಗುರುತಿಸಿಕೊಂಡಿತ್ತು. ಇಲ್ಲಿ ರಾಷ್ಟ್ರ ಒಂದಾಗಿದ್ದರೂ ಎರಡು ವ್ಯವಸ್ಥೆ ಎಂಬ ಆಡಳಿತ ಸೂತ್ರದನ್ವಯ ಎಲ್ಲ ವಿಧದಲ್ಲಿ ಸ್ವಾಯತ್ತತೆಯಿರುವ ಪ್ರಾಂತ್ಯ ಎಂಬ ಸ್ಥಾನಮಾನವನ್ನು ಹಾಂಕಾಂಗ್ ಗೆ ನೀಡಲಾಗಿತ್ತು.
Related Articles
ಇಷ್ಟಕ್ಕೂ ವಿವಾದಕ್ಕೆ ಕಾರಣವಾಗಿರುವ ಅಲ್ಲಿನ ಒಂದು ಕಾನೂನು. “ಫುಜಿಟಿವ್ ಅಫೆಂಡರ್ಸ್ ಆ್ಯಂಡ್ ಮ್ಯೂಚುಯೆಲ್ ಲೀಗಲ್ ಅಸಿಸ್ಟೆನ್ಸ್ ಇನ್ ಕ್ರಿಮಿನಲ್ ಮ್ಯಾಟರ್ಸ್ ಲೆಜಿಸ್ಲೇಷನ್’ ಎಂಬ ತಿದ್ದುಪಡಿ ವಿಧೇಯಕ ಹಾಂಕಾಂಗ್ ಜನರಲ್ಲಿ ಭಯ ಮೂಡಿಸಿದೆ. ಇದರನ್ವಯ ಇಲ್ಲಿನ ಆರೋಪಿಗಳು ಯಾವುದೇ ಪ್ರಕರಣಗಳಲ್ಲಿ ಭಾಗಿಯಾಗಿ ಸಿಕ್ಕಿಹಾಕಿಕೊಂಡರೆ ಇಂತಹವರ ವಿಚಾರಣೆಯನ್ನು ಚೀನದಲ್ಲಿ ನಡೆಸಲಾಗುತ್ತದೆ. ಈ ಒಂದು ಕಾನೂನಿನ ಅಂಶ ಹಾಂಕಾಂಗ್ ನ ಕಾನೂನಿನ ಸ್ವಾಯತ್ತತೆಯನ್ನು ನಾವು ಕಳೆದುಕೊಳ್ಳುತ್ತೇವೆ ಎಂಬುದು ಅಲ್ಲಿನ ಜನರ ಆತಂಕ.
Advertisement
ಹಾಂಕಾಂಗ್ ನಿವಾಸಿಯೊಬ್ಬ ಗರ್ಭಿಣಿಯಾಗಿದ್ದ ಸ್ನೇಹಿತೆಯನ್ನು ತೈವಾನ್ ನಲ್ಲಿ ಕೊಲೆಮಾಡಿದ್ದ. ಈ ಆರೋಪಿಯನ್ನು ಬಂಧಿಸಿ ಕೊಂಡೊಯ್ಯಲು ಚೀನ ಪೊಲೀಸರು ಬೇಡಿಕೆ ಇಟ್ಟಾಗ ಹಾಂಕಾಂಗ್ ತಿರಸ್ಕರಿಸಿತು. ಈ ಹಕ್ಕನ್ನು ಹಾಂಕಾಂಗ್ ಬಳಸಿಕೊಂಡಿತು. ಈ ಒಂದು ಕಾನೂನಿನ ರಕ್ಷಣೆ ಪಡೆಯುತ್ತಿರುವ ಹಾಂಕಾಂಗ್ ಅನ್ನು ತನ್ನ ಸುಪರ್ಧಿಗೆ ಒಳಪಡಿಸಲು ಚೀನ ಆ ಕಾನೂನಿನ ಮೊರೆ ಹೋಗಿದೆ. ಹಾಂಕಾಂಗ್ ನ ವಿಪಕ್ಷ ಪ್ರತಿಭಟನೆಗೆ ಬೆಂಬಲಿಸಿದ್ದಾರೆ.