Advertisement

ಐದು ಕ್ಷೇತ್ರಗಳ ಭವಿಷ್ಯ ಇಂದು ನಿರ್ಧಾರ

06:00 AM Nov 03, 2018 | Team Udayavani |

ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿರುವ ಐದು ಕ್ಷೇತ್ರಗಳ ಉಪ ಚುನಾವಣೆಗೆ ಶನಿವಾರ ಮತದಾನ ನಡೆಯಲಿದೆ. ರಾಜ್ಯ ರಾಜಕಾರಣದಲ್ಲಿ ಮತ್ತೂಂದು ಹಂತದ ಧ್ರುವೀಕರಣ ತರಲಿದೆ ಎಂದೇ ಬಿಂಬಿತವಾಗಿರುವ ಚುನಾವಣೆಯ ಫ‌ಲಿತಾಂಶವನ್ನು ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟ ಹಾಗೂ ಬಿಜೆಪಿ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಮತದಾನದ ಬಗ್ಗೆ ಕುತೂಹಲ ಹೆಚ್ಚಿಸಿದೆ. ಹೀಗಾಗಿ, ಬಹಿರಂಗ ಪ್ರಚಾರ ಅಂತ್ಯಗೊಂಡ ನಂತರವೂ ಶುಕ್ರವಾರ ಅಭ್ಯರ್ಥಿಗಳು ಹಾಗೂ ಸ್ಥಳೀಯ ನಾಯಕರು ಮನೆ, ಮನೆಗೆ ತೆರಳಿ ಮತದಾರರ ಕೃಪೆಗಾಗಿ ಅಂತಿಮ ಹಂತದ ಕಸರತ್ತು ನಡೆಸಿದರು.

Advertisement

ಐದು ಕ್ಷೇತ್ರಗಳಲ್ಲಿ ಒಟ್ಟು 30 ಮಂದಿ ಕಣದಲ್ಲಿದ್ದಾರೆ. ಪ್ರಮುಖವಾಗಿ ಶಿವಮೊಗ್ಗ ಹಾಗೂ ಬಳ್ಳಾರಿ ಲೋಕಸಭೆ, ಜಮಖಂಡಿ ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟ ಹಾಗೂ ಬಿಜೆಪಿ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ. ಶಿವಮೊಗ್ಗದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ, ದಿ.ಎಸ್‌. ಬಂಗಾರಪ್ಪ ಪುತ್ರ ಮಧು ಬಂಗಾರಪ್ಪ, ಬಳ್ಳಾರಿಯಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ವಿ.ಎಸ್‌.ಉಗ್ರಪ್ಪ, ಶಾಸಕ ಶ್ರೀರಾಮುಲು ಸಹೋದರಿ ಶಾಂತಾ, ಜಮಖಂಡಿಯಲ್ಲಿ ಮಾಜಿ ಸಚಿವ ದಿ.ಸಿದ್ದು ನ್ಯಾಮಗೌಡ ಪುತ್ರ ಆನಂದ್‌ ನ್ಯಾಮಗೌಡ, ಬಿಜೆಪಿಯ ಶ್ರೀಕಾಂತ ಕುಲಕರ್ಣಿ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ. 

ಈ ಮಧ್ಯೆ, ಯುದ್ಧ ಭೂಮಿಯಲ್ಲಿ ಶಸ್ತ್ರ ಉತ್ಯಾಗ ಎಂಬಂತೆ ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಚಂದ್ರಶೇಖರ್‌ ಅವರು ನಿವೃತ್ತಿ ಘೋಷಿಸಿದ್ದರಿಂದ ಬಿಜೆಪಿಗೆ ಹಿನ್ನಡೆಯುಂಟಾಗಿದೆ. ಅಲ್ಲಿ ಮತದಾನ “ಒನ್‌ ಸೈಡೆಡ್‌’ ಎಂಬಂತಾಗಿದೆ. ಇನ್ನು, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದಿಂದ ಎಲ್‌.ಆರ್‌. ಶಿವರಾಮೇಗೌಡ ಹಾಗೂ ಬಿಜೆಪಿಯ ಸಿದ್ದರಾಮಯ್ಯ ನಡುವೆ ನೇರ ಹಣಾಹಣಿಯಿದೆ.

ಮತದಾನ ಸಮಯ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆ.

ಲೋಕಸಭಾ ಕ್ಷೇತ್ರಗಳು

Advertisement

ಬಳ್ಳಾರಿ
ಅಭ್ಯರ್ಥಿಗಳು
ಜೆ.ಶಾಂತಾ (ಬಿಜೆಪಿ).
ವಿ.ಎಸ್‌.ಉಗ್ರಪ್ಪ (ಕಾಂಗ್ರೆಸ್‌)
ಡಾ| ಟಿ.ಆರ್‌.ಶ್ರೀನಿವಾಸ್‌,
ಪಂಪಾಪತಿ. (ಪಕ್ಷೇತರ )

ಮತದಾರರು
ಪುರುಷರು: 8,45,561
ಮಹಿಳೆಯರು: 8,54,561
ಇತರರು: 215
ಒಟ್ಟು: 1708266

ಕ್ಷೇತ್ರವ್ಯಾಪ್ತಿ
ಬಳ್ಳಾರಿ ನಗರ, ಬಳ್ಳಾರಿ
ಗ್ರಾಮಾಂತರ, ವಿಜಯನಗರ, ಕಂಪ್ಲಿ,
ಸಂಡೂರು, ಕೂಡ್ಲಿಗಿ, ಹಗರಿ
ಬೊಮ್ಮನಹಳ್ಳಿ, ಹೂವಿನಹಡಗಲಿ
ವಿಧಾನಸಭಾ ಕ್ಷೇತ್ರಗಳು

ಶಿವಮೊಗ್ಗ
ಅಭ್ಯರ್ಥಿಗಳು
ಬಿ.ವೈ.ರಾಘವೇಂದ್ರ (ಬಿಜೆಪಿ),
ಮಧು ಬಂಗಾರಪ್ಪ (ಜೆಡಿಎಸ್‌),
ಮಹಿಮಾ ಪಟೇಲ್‌ (ಜೆಡಿಯು).

ಮತದಾರರು
ಪುರುಷರು: 8,17,942
ಮಹಿಳೆಯರು: 8,27,109
ಇತರರು: 460
ಒಟ್ಟು: 16,45,511

ಕ್ಷೇತ್ರವ್ಯಾಪ್ತಿ
ಶಿವಮೊಗ್ಗ ನಗರ, ಗ್ರಾಮಾಂತರ,
ಭದ್ರಾವತಿ, ತೀರ್ಥಹಳ್ಳಿ, ಸಾಗರ,
ಸೊರಬ, ಶಿಕಾರಿಪುರ ಮತ್ತು
ಉಡುಪಿ ಜಿಲ್ಲೆಯ ಬೈಂದೂರು
ವಿಧಾನಸಭೆ ಕ್ಷೇತ್ರ.

ಮಂಡ್ಯ
ಅಭ್ಯರ್ಥಿಗಳು
ಶಿವರಾಮೇಗೌಡ- (ಜೆಡಿಎಸ್‌)
ಡಾ.ಸಿದ್ದರಾಮಯ್ಯ- (ಬಿಜೆಪಿ)
ಏಳು ಪಕ್ಷೇತರರು

ಮತದಾರರು
ಪುರುಷರು: 8,43,335
ಮಹಿಳೆಯರು: 8,40,971
ಸೇವಾ ಮತದಾರರು: 676
ಇತರರು: 140
ಒಟ್ಟು: 16,84,446

ಕ್ಷೇತ್ರವ್ಯಾಪ್ತಿ
ಮಳವಳ್ಳಿ, ಮದ್ದೂರು, ಮಂಡ್ಯ,
ನಾಗಮಂಗಲ, ಶ್ರೀರಂಗಪಟ್ಟಣ,
ಕೆ.ಆರ್‌.ಪೇಟೆ, ಮೇಲುಕೋಟೆ
ಹಾಗೂ ಕೆ.ಆರ್‌.ನಗರ ವಿಧಾನಸಭಾ

Advertisement

Udayavani is now on Telegram. Click here to join our channel and stay updated with the latest news.

Next