Advertisement

ಸಂಗೀತ ದಿಗ್ಗಜ ಡಾ.ರಾ.ಸತ್ಯನಾರಾಯಣ ಅಂತ್ಯಕ್ರಿಯೆ

11:20 PM Jan 17, 2020 | Lakshmi GovindaRaj |

ಮೈಸೂರು/ರಾಮನಗರ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಹಾಮಹೋಪಾಧ್ಯಾಯ ಡಾ.ರಾ.ಸತ್ಯನಾರಾಯಣ (93) ಅವರು ಗುರುವಾರ ರಾತ್ರಿ ಮೈಸೂರಿನ ಜಯನಗರದಲ್ಲಿರುವ ಸ್ವಗೃಹದಲ್ಲಿ ನಿಧನರಾದರು. ಅವರಿಗೆ ಪುತ್ರ ಆರ್‌.ಎಸ್‌.ನಂದಕುಮಾರ್‌, ಸೊಸೆ ಡಾ.ರಾಧಿಕಾ ನಂದಕುಮಾರ್‌, ಪುತ್ರಿ ರೋಹಿಣಿ ಸುಬ್ಬರತ್ನಂ ಇದ್ದಾರೆ.

Advertisement

ಶುಕ್ರವಾರ ಮಧ್ಯಾಹ್ನ 1.30ರವರೆಗೆ ಜಯನಗರ ದಲ್ಲಿರುವ ತ್ತೈಲಕ್ಷ್ಮೀ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ, ಮೂರು ಸುತ್ತು ಗುಂಡು ಹಾರಿಸಿ ಸರ್ಕಾರಿ ಗೌರವ ಸಲ್ಲಿಸಲಾಯಿತು. ನಂತರ, ಸಂಜೆಯ ವೇಳೆಗೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕು ಕಣ್ವ ಜಲಾಶಯದ ಬಳಿ ಶ್ರೀ ಸಾಧನ ಶಾಲೆಯ ಬಳಿ ಇರುವ ರಸ ಋಷಿ ಸಂಶೋಧನಾ ಕೇಂದ್ರ ಮತ್ತು ಪ್ರತಿಷ್ಠಾನದ ಬಳಿ ಅಂತ್ಯಕ್ರಿಯೆ ನೆರವೇರಿತು.

ಬ್ರಾಹ್ಮಣ ಪದ್ಧತಿಯ ವಿಧಿ-ವಿಧಾನಗಳ ಮೂಲಕ ಅಂತ್ಯಕ್ರಿಯೆ ನೆರವೇರಿಸಲಾಯಿತು. ಶ್ರೀರಂಗಪಟ್ಟಣದ ಭಾನು ಪ್ರಕಾಶ್‌ ಶರ್ಮ ಮತ್ತು ತಂಡದ ಮಂತ್ರೋ ಚ್ಚಾರದ ನಡುವೆ ದಿವಂಗತರ ಪುತ್ರ ನಂದಕುಮಾರ್‌ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.

ಸಂಶೋಧಕ, ಶಿಕ್ಷಕ: ಸದ್ಗುರು ತ್ಯಾಗರಾಜರ ಸಮಕಾಲೀನ ರಾಗಿದ್ದ ಅವರು, 1927ರ ಮೇ 9 ರಂದು ರಾಮನಗರದಲ್ಲಿ ಜನಿಸಿದರು. ರಸಾಯನಯ ಶಾಸ್ತ್ರದಲ್ಲಿ ಪಿಎಚ್‌.ಡಿ ಪಡೆದು ಶಿಕ್ಷಕರಾಗಿ, ಸಂಶೋಧಕ ರಾಗಿ, ಆಡಳಿತಾಧಿಕಾರಿಯಾಗಿ, ಲೇಖಕರಾಗಿ ಗುರುತಿಸಿಕೊಂಡಿದ್ದರು. ಅವರ ಬರಹಗಳು ಇತರ ಭಾಷೆಗಳಿಗೂ ತರ್ಜುಮೆಯಾಗಿವೆ.

1949 ರಿಂದ 1984ರ ಅವಧಿಯಲ್ಲಿ ಶಾರದಾ ವಿಲಾಸ ಕಾಲೇಜಿನಲ್ಲಿ ರಸಾಯನಶಾಸ್ತ್ರ ಅಧ್ಯಾಪಕರಾಗಿ ಮತ್ತು ಕರ್ನಾಟಕ ಸಂಗೀತ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಸತ್ಯನಾರಾಯಣ ಅವರು ಸಂಸ್ಕೃತದಲ್ಲಿ ರಚಿಸಿರುವ “ಪುಂಡರೀಕಮಲ’, “ಸೃಷ್ಟಿ- ದಿ ಸ್ಕಾಲಿಕ್‌ ಫೌಂಡೇಷನ್‌’, “ಕರ್ನಾಟಕ ಸಂಗೀತ ಸುಳಾದಿಗಳು ಮತ್ತು ಊಗಭೋಗಾದಿಗಳು’, “ಕರ್ನಾಟಕ ಸಂಗೀತ ವಾಹಿನಿ’ ಮತ್ತಿತರ ಕೃತಿಗಳು ಮಹತ್ವ ಪಡೆದಿವೆ.

Advertisement

ಪ್ರಶಸ್ತಿ-ಪುರಸ್ಕಾರ: ಹಿರಿಯ ಸಂಗೀತ ವಿದ್ವಾಂಸರಾಗಿದ್ದ ಅವರಿಗೆ 2014ರಲ್ಲಿ ವೀಣೆ ರಾಜಾರಾವ್‌ ರಾಷ್ಟ್ರೀಯ ಪ್ರಶಸ್ತಿ ದೊರಕಿತ್ತು. 2018ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಪುರಸ್ಕೃತರಾಗಿದ್ದರು. ಜತೆಗೆ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ, ದಸರಾ ಮಹೋತ್ಸವದಲ್ಲಿ ನೀಡುವ ರಾಜ್ಯ ಸಂಗೀತ ವಿದ್ವಾನ್‌, ಚೆನ್ನೆನ ಮದ್ರಾಸ್‌ ಸಂಗೀತ ಅಕಾಡೆಮಿ ಸೇರಿದಂತೆ ಹಲವು ಪ್ರಶಸ್ತಿಗಳು ಇವರ ಸಾಧನೆಯನ್ನು ಅರಸಿ ಬಂದಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next