Advertisement

ಸ್ವಾತಂತ್ರ್ಯ ಮೌಲ್ಯ ಪ್ರತಿಯೊಬ್ಬರಲ್ಲಿ ಬೆಳೆಯಲಿ

10:55 AM Aug 16, 2017 | |

ಚಿತ್ತಾಪುರ: ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವದ ತತ್ವ, ಮೌಲ್ಯಗಳನ್ನು ಪ್ರತಿಯೊಬ್ಬರು ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಿಪಿಐ ಶಂಕರಗೌಡ ಪಾಟೀಲ ಹೇಳಿದರು. ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ನಾಗಾವಿ ನಾಡು ವೇದಿಕೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯೋತ್ಸವ ಅರ್ಥಪೂರ್ಣ ಆಚರಣೆಗೆ ವಿದ್ಯಾರ್ಥಿಗಳ ಕೊಡುಗೆ ಆಪಾರವಾಗಿದೆ ಎಂದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಭೀಮಣ್ಣ ಸಾಲಿ, ತಾಪಂ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ ಮಾತನಾಡಿದರು. ತಹಶೀಲ್ದಾರ ಮಲ್ಲೇಶಾ ತಂಗಾ ಉದ್ಘಾಟಿಸಿದರು.
ಗ್ರೇಡ್‌-2 ತಹಶೀಲ್ದಾರ ರವೀಂದ್ರ ದಾಮಾ, ಜಿಪಂ ಸದಸ್ಯ ಶಿವರುದ್ರ ಭೀಣಿ, ಪುರಸಭೆ ಉಪಾಧ್ಯಕ್ಷ ಮಹ್ಮದ್‌ ರಸೂಲ ಮುಸ್ತಫಾ, ತಾಪಂ ಉಪಾಧ್ಯಕ್ಷ ಹರಿನಾಥ ಚವ್ಹಾಣ, ಸದಸ್ಯರಾದ ಭಾಗಪ್ಪ ಯಾದಗಿರಿ, ರವಿ ಪಡ್ಲಾ, ಪುರಸಭೆ ಸದಸ್ಯ ರಾಮದಾಸ ಚವ್ಹಾಣ, ಸರ್ಕಾರಿ ನೌಕರ ಸಂಘದ ತಾಲೂಕಾಧ್ಯಕ್ಷ ಬಸವರಾಜ ಬಳೂಂಡಗಿ, ತಾಲೂಕು ಅ ಧಿಕಾರಿಗಳು ಇದ್ದರು. ಬಾಬರ ಪಟೇಲ್‌ ಸ್ವಾಗತಿಸಿದರು. ನರಸಪ್ಪ ಚಿನ್ನಾಕಟ್ಟಿ ನಿರೂಪಿಸಿದರು. ಪಿಎಸ್‌ಐ ಜಗದೇವಪ್ಪ ಪಾಳಾ ಹಾಗೂ ಗೃಹ ರಕ್ಷಕ ದಳದ ವತಿಯಿಂದ ಕವಾಯತ ನಡೆಯಿತು. ವಿವಿಧ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿವಿಧೆಡೆ ಸ್ವಾತಂತ್ರ್ಯೋತ್ಸವ: ಗಂಗಾಪರಮೇಶ್ವರಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ಪ್ರಾಚಾರ್ಯ ವಿಜಯಕುಮಾರ ಬಿರಾದಾರ ದ್ವಜಾರೋಹಣ ಮಾಡಿದರು. ಪ್ರಾಚಾರ್ಯರಾದ ಪಂಕಜಾ ಸಲಗರ, ನಾಗರಾಜ ಕಾಮಾ, ಪಿ. ರಿಜೇಶ, ಡಾ| ಸುನೀತಾ ಇದ್ದರು. ಕಾಂಗ್ರೆಸ್‌: ತಾಲೂಕು ಕಾಂಗ್ರೆಸ್‌ ಕಚೇರಿಯಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಭೀಮಣ್ಣ ಸಾಲಿ ದ್ವಜಾರೋಹಣ ನೆರವೇರಿಸಿದರು. ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಹೋತಿನಮಡಿ, ಉಪಾಧ್ಯಕ್ಷ ಮಹ್ಮದ ರಸೂಲ ಮುಸ್ತಫಾ, ನಗರ ಯೊಜನಾ ಪ್ರಾಧಿಕಾರ ಅಧ್ಯಕ್ಷ ಸೂರ್ಯಕಾಂತ ಪೂಜಾರಿ ಇದ್ದರು. ಬಿಜೆಪಿ: ತಾಲೂಕು ಬಿಜೆಪಿ ಕಚೇರಿಯಲ್ಲಿ ಅದ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೋರ ದ್ವಜಾರೋಹಣ ಮಾಡಿದರು. ಗೋಪಾಲ ರಾಠೊಡ, ಬಾಲಾಜಿ ಬುರುಬುರೆ, ಪ್ರಲ್ಹಾದ ವಿಶ್ವಕರ್ಮ, ಶರಣು ಜ್ಯೋತಿ, ನಾಗರಾಜ ಹೂಗಾರ, ಕವಿತಾ ಚವ್ಹಾಣ ಇದ್ದರು. ತಾಪಂ: ಕಚೇರಿಯಲ್ಲಿ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ ದ್ವಜಾರೋಹಣ ಮಾಡಿದರು. ಉಪಾಧ್ಯಕ್ಷ ಹರಿನಾಥ ಚವ್ಹಾಣ, ಇಒ ಲಕ್ಷ್ಮಣ್ ಶೃಂಗೇರಿ, ಸದಸ್ಯರು ಇದ್ದರು. ಪುರಸಭೆ: ಕಚೇರಿಯಲ್ಲಿ ಅಧ್ಯಕ್ಷೆ ಅನ್ನಪೂರ್ಣ ಹೋತಿನಮಡಿ ಧ್ವಜಾರೋಹಣ ಮಾಡಿದರು. ಉಪಾಧ್ಯಕ್ಷ ಮಹ್ಮದ ರಸೂಲ ಮುಸ್ತಫಾ, ಮುಖ್ಯಾಧಿಕಾರಿ ವೆಂಕಟೇಶ ತೆಲಂಗ್‌ ಹಾಗೂ ಸದಸ್ಯರು ಇದ್ದರು. ಅಬಕಾರಿ: ಇಲಾಖೆ ಕಚೇರಿಯಲ್ಲಿ ಅಬಕಾರಿ ಉಪ ಅಧೀಕ್ಷಕ ಲಾಡಸನ್‌ ಸಂಜೀವಕುಮಾರ ದ್ವಜಾರೋಹಣ ಮಾಡಿದರು. ಅಬಕಾರಿ ನಿರೀಕ್ಷಕ ಕೇದಾರನಾಥ, ದೊಡ್ಡಪ್ಪ, ಮಹ್ಮದ ಇಮಾಮ ಇದ್ದರು. ಅಳ್ಳೋಳ್ಳಿ: ಗ್ರಾಪಂ ಕಚೇರಿಯಲ್ಲಿ ಅಧ್ಯಕ್ಷ ಸಾಬಣ್ಣ ಸಂಕನೂರ ಧ್ವಜಾರೋಹಣ ಮಾಡಿದರು. ಸದಸ್ಯರಾದ ರಾಜಶೇಖರ ಗೋಗಿ, ದೇವಿಂದ್ರಪ್ಪ ಹಾದಿಮನಿ, ವೀರಾರೆಡ್ಡಿ ಮುಸೇನಿ ಇದ್ದರು. ಗುಂಡಗುರ್ತಿ: ಗ್ರಾಪಂ ಕಚೇರಿಯಲ್ಲಿ ಅಧ್ಯಕ್ಷ ರೋಹಿತ ಗಂಜಗಿರಿ ಧ್ವಜಾರೋಹಣ ಮಾಡಿದರು. ಉಪಾಧ್ಯಕ್ಷೆ ನಾಗಮ್ಮ ಮಗಿ, ಸದಸ್ಯರು ಇದ್ದರು. ತೆಂಗಳಿ: ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಕೋಣಿನ ಧ್ವಜಾರೋಹಣ ಮಾಡಿದರು. ಗ್ರಾಪಂ ಅಧ್ಯಕ್ಷೆ ಶ್ರೀದೇವಿ ಸ್ಥಾವರಮಠ, ಉಪಾಧ್ಯಕ್ಷ ಹನೀಫಸಾಬ, ಮುಖ್ಯಶಿಕ್ಷಕಿ ಗಂಗಮ್ಮ ನಾಲವಾರ, ಗ್ರಾಪಂ ಸದಸ್ಯರು ಇದ್ದರು. ಆರಜಂಬಗಾ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕ ವಿಶ್ವನಾಥ ಸಾಸಟ್ಟಿ ಧ್ವಜಾರೋಹಣ ಮಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ಪೀರಪ್ಪ ಪೂಜಾರಿ, ರೌಫ ಪಟೇಲ್‌, ಸಾಬಣ್ಣ, ತುಕಾರಾಮ ಭಂಕಲಗಿಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next