Advertisement
ಮುಂದಿನ 1 ವರ್ಷ ಕಾಲ ಈ ಅಭಿಯಾನವನ್ನು ನಿತ್ಯ ಜೀವನದ ಭಾಗವಾಗಿ ಜೋಡಿಸುವುದಕ್ಕೆ ಸಂಘ ಚಿಂತಿಸಿದ್ದು, ಪಂಚ ಪರಿವರ್ತನೆಯನ್ನು “ಶತಾಬ್ದ ಘೋಷಣೆ’ ಎಂದು ಪರಿಗಣಿಸಿದೆ.ಸರಸಂಘ ಚಾಲಕ ಮೋಹನ್ ಭಾಗವತ್ ಹಾಗೂ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ನಿರ್ದೇಶನದಂತೆ ಸಮಾಜದ ಗುಣಾತ್ಮಕ ಪರಿವರ್ತನೆ ದೃಷ್ಟಿಯಿಂದ ಈ ಕಲ್ಪನೆ ರೂಪಿಸಿದ್ದು, ವಿವಿಧ ಸ್ತರಗಳಲ್ಲಿರುವ ಕೋಟ್ಯಂತರ ಕಾರ್ಯಕರ್ತರು ಈ 5 ತಣ್ತೀಗಳನ್ನು 3 ಹಂತದಲ್ಲಿ ಪಾಲನೆ ಮಾಡುವುದರೊಂದಿಗೆ ಅಭಿಯಾನ ನಡೆಯಲಿದೆ.
Related Articles
“ಸಾಮರಸ್ಯ, ಕುಟುಂಬ ಪ್ರಬೋಧನಾ, ಪರಿಸರ ಸಂರಕ್ಷಣೆ, ಸ್ವದೇಶಿ ಜೀವನಶೈಲಿ ಹಾಗೂ ನಾಗರಿಕ ಶಿಷ್ಟಾಚಾರ ಪಾಲನೆ’ ಈ 5 ತಣ್ತೀಗಳಾಗಿವೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಕಳೆದರೂ ಸಮಾಜದಲ್ಲಿ ಇನ್ನೂ ಜಾತೀಯತೆ ತೊಲಗಿಲ್ಲ. ಈ ಹಿನ್ನೆಲೆಯಲ್ಲಿ ಸಾಮರಸ್ಯ’ ಎಂಬ ತತ್ವವನ್ನು ವ್ರತದಂತೆ ಪಾಲಿಸಬೇಕೆಂಬುದು ಸಂಘದ ನಿಲುವಾಗಿದೆ. ದೇವಸ್ಥಾನ, ಸ್ಮಶಾನ, ಜಲಮೂಲಗಳ ಬಳಕೆ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಜಾತೀ ಯ ತೆ ಸಲ್ಲ. ಜಾತಿ ಮೀರಿದ ಬಾಂಧವ್ಯ ಸಮಾಜದಲ್ಲಿ ಬೆಳೆಯಬೇಕೆಂಬುದು ಈ ಪೈಕಿ ಮೊದಲನೆಯದಾಗಿದೆ.
Advertisement
ಎರಡನೆಯದಾಗಿ “ಕುಟುಂಬ ಪ್ರಬೋಧನಾ’. ಸಮಾಜದಲ್ಲಿ ಮೌಲ್ಯಗಳು ಶಿಥಿಲಗೊಳ್ಳುತ್ತಿವೆ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ 6 ಅಂಶಗಳ ಮೂಲಕ ಭಾರತೀಯ ಕುಟುಂಬ ಸಂಸ್ಕಾರದ ಮರು ಸ್ಥಾಪನೆ ಸಂಘದ ಉದ್ದೇಶವಾಗಿದೆ. ಭಾಷಾ (ಮಾತೃ ಭಾಷೆ ಪಾಲನೆ), ಭೂಷ (ಭಾರತೀಯ ವಸ್ತ್ರ ಪದ್ಧತಿ), ಭಜನ್ (ಆರಾಧನಾ ವಿಧಾನ), ಭೋಜನ (ಭಾರತೀಯ ಆಹಾರ ಪದ್ಧತಿ), ಭ್ರಮಣ್ ( ಕೌಟುಂಬಿಕ ಪ್ರವಾಸ) ಹಾಗೂ ಭವನ ( ಭಾರತೀಯ ಕುಟುಂಬ ಕಲ್ಪನೆ) ಇದರ ಭಾಗವಾಗಿದೆ.
ಪರಿಸರ ಸಂರಕ್ಷಣೆ 3ನೇ ಅಂಶವಾಗಿದ್ದು, ಸಸ್ಯ ಪಾಲನೆ, ಜಲ ಸಂರಕ್ಷಣೆ ಹಾಗೂ ಪ್ಲಾಸ್ಟಿಕ್ ಹಠಾವೋ ಇದರಲ್ಲಿ ಸೇರುತ್ತದೆ. 4ನೇ ವಿಚಾರ ಸ್ವದೇಶಿ ಜೀವನ ಶೈಲಿಗೆ ಸಂಬಂಧಪಟ್ಟಿದ್ದು, ಇದರಲ್ಲಿ ಮಾತೃಭಾಷಾ ಶಿಕ್ಷಣವೂ ಸೇರಿದೆ. 5ನೇಯದು ಸಂಘದ ದೃಷ್ಟಿಯಲ್ಲಿ ಅತ್ಯಂತ ಮಹತ್ವಪೂರ್ಣವಾಗಿದ್ದು, ಸಂವಿಧಾನದಲ್ಲಿ ಉಲ್ಲೇಖಿತವಾದ ಮೂಲಭೂತ ಕರ್ತವ್ಯದ ಪಾಲನೆಯೂ ಸೇರಿದಂತೆ ಸಮಾಜದಲ್ಲಿ ನಾಗರಿಕ ಶಿಷ್ಟಾಚಾರ ಹಾಗೂ ನಾವೇ ಮಾಡಿದ ಕಾನೂನುಗಳ ಸ್ವಯಂ ಪಾಲನೆ ಸೇರಿದೆ.
100 ವರ್ಷದಲ್ಲಿ ಸಂಘ ತಲುಪದ ಕ್ಷೇತ್ರವೇ ಇಲ್ಲ. ಪಂಚ ಪರಿವರ್ತನೆ ಎಂಬ ಶತಾಬ್ದಿ ಘೋಷಣೆ ಸಮಾಜದ ಒಟ್ಟಾರೆ ಭವಿಷ್ಯದ ದೃಷ್ಟಿಯಿಂದ ಮಹತ್ವದ್ದಾಗಿದೆ. ಇತ್ತೀಚಿನ ದಿನಗಳಲ್ಲಿ ನಾಗರಿಕ ಕರ್ತವ್ಯ ಪಾಲನೆ ಕ್ಷೀಣಿಸುತ್ತಿದೆ. ಜವಾಬ್ದಾರಿಯುತ ಸಮಾಜ ಎಲ್ಲರ ಬಯಕೆಯಾಗಿದ್ದು, ಸಂಘದ ಈ ಉದಾತ್ತ ಕಲ್ಪನೆಯ ಅನುಷ್ಠಾನದಲ್ಲಿ ನಾವೆಲ್ಲರೂ ಮೊದಲಿಗರಾಗೋಣ.ವಿ. ಸುನಿಲ್ ಕುಮಾರ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಭಟ್