Advertisement
ಸಂಚಾಲಕ ಸ್ವಾಮಿ ಏಕಗಮ್ಯಾನಂದಜಿ, ಸಿಂಡಿಕೇಟ್ ಸದಸ್ಯ ಹರೀಶ್ ಆಚಾರ್, ಸತ್ಯನಾರಾಯಣ ಕೆ. ವಿ. ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮೊದಲಿಗೆ ಸುಮಾರು ನೂರಕ್ಕೂ ಅಧಿಕ ಕಾರ್ಯಕರ್ತರನ್ನು ನಾಲ್ಕು ಗುಂಪುಗಳನ್ನಾಗಿ, ಕಾರ್ಯವನ್ನು ಹಂಚಿಕೆ ಮಾಡಲಾಯಿತು. ಲೆಕ್ಕ ಪರಿಶೋಧಕ ಶಿವಕುಮಾರ್ ಮಾರ್ಗದರ್ಶನದಲ್ಲಿ ಕಾಸ್ಸಿಯಾ ಶಾಲೆಯ ಮುಂಭಾಗ ಹಾಗೂ ಮಂಗಳಾದೇವಿ ರಥಬೀದಿಯನ್ನು ಕಸಗುಡಿಸಿ ಶುಚಿಗೊಳಿಸಲಾಯಿತು.
ಬೆಳಗ್ಗೆ 7.30ರಿಂದ 2 ಗಂಟೆಯ ಕಾಲ ಸುಮಾರು 40 ಯುವಕರು ನಗರದ ತುಂಬೆಲ್ಲ ಹರಡಿದ್ದ ಸಾವಿರಕ್ಕೂ ಅಧಿಕ ಅನಧಿಕೃತ ಹಾಗೂ ಹಳೆಯ ಪೋಸ್ಟರ್, ಬ್ಯಾನರ್, ಬಂಟಿಂಗ್ಸ್ ಮುಂತಾದ ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸಿದರು. ಮೂರು ತಂಡವಾಗಿ ಕಾರ್ಯಕರ್ತರು ಕಾರ್ಯಾಚರಣೆ ಮಾಡಿದರು.
Related Articles
Advertisement
ಸ್ವಚ್ಛ ಎಕ್ಕೂರುಎಕ್ಕೂರಿನಲ್ಲಿಯೂ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಅಯ್ಯಪ್ಪ ಸ್ವಾಮಿ ಭಜನ ಮಂದಿರದ ಮುಂಭಾಗದಲ್ಲಿ ಕಾರ್ಯಕ್ರಮ ಆರಂಭಿಸಲಾಯಿತು. ಶ್ರೀ ಲತಾ ಅಭಿಯಾನಕ್ಕೆ ಚಾಲನೆ ನೀಡಿದರು. ಸುಮಾರು ಎರಡು ಗಂಟೆಗಳ ಕಾಲ ನಡೆದ ಶ್ರಮದಾನದಲ್ಲಿ ನಂದಾದೀಪ ಮಹಿಳಾ ಮಂಡಳಿ, ಹಿಂದೂ ಯುವಸೇನೆ, ಅಯ್ಯುಪ್ಪ ಭಜನಾ ಮಂಡಳಿಯ ಸದಸ್ಯರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಪ್ರಶಾಂತ ಕಾರ್ಯಕ್ರಮವನ್ನು ಸಂಯೋಜನೆ ಮಾಡಿದರು. ಸ್ವಚ್ಛ ಗ್ರಾಮ
ಕೋಟೆಕಾರ್, ಕೊಣಾಜೆ, ಉಳ್ಳಾಲ, ಪೆರ್ಮನ್ನೂರು, ಸೋಮೇಶ್ವರ, ಮುನ್ನೂರು, ಮಂಜನಾಡಿ, ಮತ್ತಿತರ ಕಡೆಗಳಲ್ಲಿ ಸ್ವಚ್ಛತಾ ಶ್ರಮದಾನ ಜರಗಿತು. ಬೆಳಗ್ಗೆ 7.30 ರಿಂದ 10 ಗಂಟೆಯವರೆಗೆ ಅಭಿಯಾನ ನಡೆಯಿತು. ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಈ ಅಭಿಯಾನ ನಡೆಯುತ್ತಿದ್ದು ಭಾಗವಹಿಸಿದ್ದ ಎಲ್ಲ ಕಾರ್ಯಕರ್ತರಿಗೆ ಸ್ವತ್ಛತಾ ಸಲಕರಣೆಗಳು, ಕರಪತ್ರಗಳು, ಟೀಶರ್ಟ್ ಒದಗಿಸಲಾಗಿತ್ತು. ಶ್ರಮದಾನದ ಬಳಿಕ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಮಹೇಶ್ ಕೊಲ್ಯ ಅಭಿಯಾನವನ್ನು ಸಂಯೋಜಿಸಿದರು. ಸತೀಶ್ ಕುಂಪಲ ಸಂಘಟಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಹಕಾರದಲ್ಲಿ ಸ್ವಚ್ಛ ಗ್ರಾಮ ಅಭಿಯಾನ ನಡೆಯುತ್ತಿದೆ. ಜನೋಪಯೋಗಿ ಕಾರ್ಯ
ಕಾಸ್ಸಿಯಾ ಶಾಲೆಯ ಮುಂಭಾಗದಲ್ಲಿರುವ ಕಾಲುದಾರಿಯಲ್ಲಿ ಅಪಾರ ಪ್ರಮಾಣದ ತ್ಯಾಜ್ಯ ಬಿಸಾಡಲಾಗುತ್ತಿತ್ತು. ಶಾಲಾ ಮಕ್ಕಳು ಕಾಲುದಾರಿಯನ್ನು ಉಪಯೋಗಿಸದೇ ಮೂಗು ಮುಚ್ಚಿಕೊಂಡು ಶಾಲೆಗೆ ತೆರಳುವ ದೃಶ್ಯ ಸಾಮಾನ್ಯವಾಗಿತ್ತು. ಅಭಿಯಾನದ ಮುಖ್ಯ ಸಂಯೋಜಕ ದಿಲ್‌ರಾಜ್ ಆಳ್ವ, ಉಮಾನಾಥ್ ಕೋಟೆಕಾರ್ ಹಾಗೂ ದಿನೇಶ್ ಕರ್ಕೇರ ನೇತೃತ್ವದಲ್ಲಿ ಕಳೆದೆರಡು ವಾರಗಳಿಂದ ಸ್ವಚ್ಛ ಮಂಗಳೂರು ಕಾರ್ಯಕರ್ತರು ಮನೆಮನೆಗಳಿಗೆ ತೆರಳಿ ತ್ಯಾಜ್ಯವನ್ನು ಮಾರ್ಗದಲ್ಲಿ ಬಿಸಾಡದಂತೆ ಮನವೊಲಿಸಲು ಯಶಸ್ವಿಯಾದರು. ಬಳಿಕ ಅನೇಕ ದಿನಗಳಿಂದ ಅಚ್ಚುಕಟ್ಟಾಗಿ ಹೊಸತಾಗಿ ಕಾಲುದಾರಿ ರಚಿಸಿ ಇಂಟರ್‌ಲಾಕ್ ಬಳಸಿ ವ್ಯವಸ್ಥಿತವಾಗಿ ಫುಟ್‌ಪಾತ್ ಮಾಡಲಾಗಿದೆ. ಅದೇ ಕಾಲುದಾರಿಯ ಮಧ್ಯದಲ್ಲಿದ್ದ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಅನೇಕ ದಾರಿಹೋಕರಿಗೆ ಕಾಣಿಸದೇ ಅನೇಕರ ಮುಖ ಕೈಗಳಿಗೆ ತಾಗಿ ಅಪಘಾತವಾಗುತ್ತಿತ್ತು. ಅದನ್ನು ತಡೆಯಬೇಕೆನ್ನುವ ಉದ್ದೇಶದಿಂದ ಅಲ್ಲಿ ನೂತನವಾಗಿ ರೇಲಿಂಗ್ ಅಳವಡಿಸಲಾಗಿದೆ. ಸ್ವಚ್ಛ ಮನಸ್ಸು
ಡಿಸೆಂಬರ್ ತಿಂಗಳಲ್ಲಿ ಮಂಗಳೂರು ಸುತ್ತಮುತ್ತಲಿನ 87 ಪ್ರೌಢಶಾಲೆಗಳಲ್ಲಿ ಸ್ವಚ್ಛತಾ ಜಾಗೃತಿ ಕಾರ್ಯಕ್ರಮಗಳು ಜರಗಿದವು. ಸ್ವಚ್ಛತಾ ಸ್ಪರ್ಧಾ ಎನ್ನುವ ಶೀರ್ಶಿಕೆಯಡಿಯಲ್ಲಿ 8,825 ವಿದ್ಯಾರ್ಥಿಗಳು ಭಾಗವಹಿಸಿದರು. ಪ್ರಬಂಧ ಸ್ಪರ್ಧೆಯಲ್ಲಿ 3,177, ಚಿತ್ರಕಲಾ ಸ್ಪರ್ಧೆಯಲ್ಲಿ 4,148 ಹಾಗೂ ಭಾಷಣ ಸ್ಪರ್ಧೆಯಲ್ಲಿ 1,500 ವಿದ್ಯಾರ್ಥಿಗಳು ಭಾಗವಹಿಸಿದರು. ಎಂ.ಆರ್. ವಾಸುದೇವ್, ಸದಾನಂದ ಉಪಾಧ್ಯಾಯ, ಭಾರತೀ ಭಟ್, ರಾಜಮಣಿ ರಾಮಕುಂಜ, ಸುಭದ್ರಾ ಭಟ್, ಸಂತೋಷ ಡಿ’ಸೋಜಾ ಸೇರಿದಂತೆ 50 ಕ್ಕೂ ಅಧಿಕ ಸಂಪನ್ಮೂಲ ವ್ಯಕ್ತಿಗಳು ಸ್ವಚ್ಛ ಮನಸ್ಸು ಅಭಿಯಾನದ ನೇತೃತ್ವ ವಹಿಸಿದ್ದರು. ರಂಜನ್ ಬೆಳ್ಳರಪಾಡಿ ಸ್ವಚ್ಛ ಮನಸ್ಸು ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿದ್ದರು.