Advertisement

ನಾಲ್ವರು ಭ್ರಷ್ಟ ಅಧಿಕಾರಿಗಳಿಗೆ ಎಸಿಬಿ ಬಿಸಿ

10:32 AM Mar 10, 2017 | Harsha Rao |

ಬೆಂಗಳೂರು: ರಾಜ್ಯದ ನಾಲ್ವರು ಭ್ರಷ್ಟ ಅಧಿಕಾರಿಗಳ ನಿವಾಸ, ಕಚೇರಿ ಹಾಗೂ ಅವರ ಸಂಬಂಧಿಕರ ನಿವಾಸಗಳ ಮೇಲೆ ಗುರುವಾರ ಏಕಕಾಲದಲ್ಲಿ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ಕೋಟ್ಯಂತರ ರೂ. ಮೌಲ್ಯದ ಬೇನಾಮಿ ಆಸ್ತಿಗೆ ಸಂಬಂಧಿಸಿದಂತೆ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

Advertisement

ಸಣ್ಣನೀರಾವರಿ ಇಲಾಖೆಯ ಶಿರಾ ಉಪವಿಭಾಗದಲ್ಲಿ ಸಹಾಯಕ ಎಂಜಿನಿಯರ್‌ ಶ್ರೀ ಹರಿ, ಮುಳಬಾಗಿಲಿನಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಮಂಜುನಾಥ, ರಾಮನಗರ ಜಿಲ್ಲೆ ಮಾಯಗಾನಹಳ್ಳಿ ಗ್ರಾಪಂ ಪಿಡಿಓ ಸ್ವಾಮಿ , ಉಡುಪಿಯ ಮೂಕಾಂಬಿಕ ಅರಣ್ಯ ಪ್ರದೇಶದ ವಲಯ ಅರಣ್ಯಾಧಿಕಾರಿ ಶಿವರಾಮ ಆಚಾರಿ ಅವರ ನಿವಾಸ, ಕಚೇರಿಗಳ ಮೇಲೆ ದಾಳಿ ನಡೆಸಲಾಗಿದ್ದು, ನಾಲ್ವರು ಅಧಿಕಾರಿಗಳ ಕೋಟ್ಯಂತರ
ರೂ. ಅಕ್ರಮ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿದ್ದು ತನಿಖೆ ಮುಂದುವರಿಸಿದ್ದಾರೆ. 

1.ಶ್ರೀ ಹರಿ
ಸಣ್ಣನೀರಾವರಿ ಇಲಾಖೆಯ ಶಿರಾ ಉಪವಿಭಾಗದಲ್ಲಿ ಎಇ, ಪಾವಗಡ ಪತ್ನಿ, ಮಾವನ ಹೆಸರಿನಲ್ಲಿ ಪಾವಗಡ ತಾಲೂಕಿನಲ್ಲಿ 50 ಲಕ್ಷ. ರೂ ಮೌಲ್ಯದ 87 ಎಕರೆ ಕೃಷಿ ಭೂಮಿ ಪಾವಗಡದಲ್ಲಿ ಪತ್ನಿ ಹೆಸರಿನಲ್ಲಿ ಮನೆ, ತಾಯಿ ಹೆಸರಿನಲ್ಲಿ ಎರಡಂತಸ್ತಿನ ಮನೆ „ ವೆ.ಎನ್‌ ಹೊಸಕೋಟೆ ಸಹರಾ ಇಂಡಿಯಾ ಕಂಪೆನಿ ಬ್ರಾಂಚ್‌ನಲ್ಲಿ 11 ಲಕ್ಷ ರೂ.
ಶೇರ್‌ ಹಾಗೂ ಬಾಂಡ್‌

2.ಶಿವರಾಮ ಆಚಾರಿ
ಉಡುಪಿಯ ಮೂಕಾಂಬಿಕ ಅರಣ್ಯ ಪ್ರದೇಶದ ವಲಯ ಅರಣ್ಯಾಧಿಕಾರಿ „ ಕೊಲ್ಲೂರಿನ ವಸತಿ ಮನೆಯಲ್ಲಿ 3.7 ಲಕ್ಷ
ರೂ ನಗದು ಹಾಗೂ ವಿಮಾಪಾಲಿಸಿ ಜಪ್ತಿ „ ಕಂಬದ ಕೋಣೆಯಲ್ಲಿ 60 ಲಕ್ಷ ರೂ ಮೌಲ್ಯದ ಮನೆ, ಕಾರಿನಲ್ಲಿದ್ದ ಲಕ್ಷ ನಗದು ವಶ „ ಕುಂದಾಪುರದಲ್ಲಿ 2 ಕಮರ್ಷಿಯಲ್‌ ಕಾಂಪ್ಲೆಕ್ಸ್‌ „ ಪತ್ನಿ ಶೋಭಾ ಹೆಸರಿನಲ್ಲಿ 2 ಲಕ್ಷ ರೂ ಮೌಲ್ಯದ ನಿವೇಶನ „ ಕರಿಮಂಜೇಶ್ವರದ ಅತ್ತೆಯ ಮನೆಯಲ್ಲಿ 3 ಲಕ್ಷ ರೂ.

3. ಸಾಮಿ Ì ,
ರಾಮನಗರ ಜಿಲ್ಲೆ ಮಾಯಗಾನಹಳ್ಳಿ ಗ್ರಾಪಂ ಪಿಡಿಓ „ಪತ್ನಿ ರೇಖಾ ಹೆಸರಿನಲ್ಲಿ ಚನ್ನಪಟ್ಟಣದಲ್ಲಿ 37 ಲಕ್ಷ ರೂ ಮೌಲ್ಯದ
ಎರಡಂತಸ್ತಿನ 3 ಮನೆಗಳು „ ಮದ್ದೂರಿನಲ್ಲಿ ಎರಡೂವರೆ ಎಕರೆ ಕೃಷಿ ಭೂಮಿ ಖರೀದಿ „ 5 ಲಕ್ಷ ರೂ ಮೌಲ್ಯದ 200
ಗ್ರಾಂ ಚಿನ್ನಾಭರಣ, ಒಂದೂವರೆ ಕೆಜಿ ಬೆಳ್ಳಿ ಆಭರಣ 

Advertisement

4. ಮಂಜುನಾಥ,
ಸಹಾಯಕ ಕಾರ್ಯ ಪಾಲಕ ಎಂಜಿನಿಯರ್‌, ಮುಳಬಾಗಿಲು „ ಕೋಲಾರದ ಗಾಂಧಿನಗರದಲ್ಲಿ 2 ಕೋಟಿ ರು. ಮೌಲ್ಯದ
ಡ್ಯುಪ್ಲೆಕ್ಸ್‌ ಮನೆ „ ಸಾರಿಗೆ ನಗರದಲ್ಲಿ 30 ಲಕ್ಷ ರೂ ಮೌಲ್ಯದ ಮನೆ, ಇಟ್ಟಿಗೆ ಪ್ಯಾಕ್ಟರಿ „ ಕೋಲಾರದಲ್ಲಿ 54 ಲಕ್ಷ ರೂ.
ಬೆಲೆಬಾಳುವ 3 ಎಕರೆ ಕೃಷಿ ಜಮೀನು

Advertisement

Udayavani is now on Telegram. Click here to join our channel and stay updated with the latest news.

Next