Advertisement
ಅವರು ಅಜೆಕಾರು ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ವತಿಯಿಂದ ಗಣಿತನಗರದ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ನಡೆದ ಸಂಸ್ಥಾಪಕ ದಿ| ಗೋಪ ಶೆಟ್ಟಿಯವರ 103ನೇ ಜನ್ಮದಿನಾಚರಣೆ ಹಾಗೂ ಸಾಮಾಜಿಕ ನೆರವಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
Related Articles
Advertisement
23.70 ಲ. ರೂ. ನೆರವು ಗಣಿತನಗರದ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಜರಗಿದ ಸಂಸ್ಥಾಪಕ ದಿ| ಗೋಪ ಶೆಟ್ಟಿಯವರ 103ನೇ ಜನ್ಮದಿನಾಚರಣೆಯ ಸಂದರ್ಭ ವಿವಿಧ ಸಾಮಾಜಿಕ ನೆರವಿನ ಕಾರ್ಯ ಕ್ರಮದಲ್ಲಿ ಟ್ರಸ್ಟ್ ವತಿಯಿಂದ 23.70 ಲಕ್ಷ ರೂ. ನೆರವು ನೀಡಲಾಯಿತು. ಸಾಮಾಜಿಕ ನೆರವು
ಟ್ರಸ್ಟಿನ ವತಿಯಿಂದ ಸ್ಥಳೀಯ ಡಾ| ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆಯ ಕಣ್ಣಿನ ವಿಭಾಗಕ್ಕೆ 20 ಲ. ರೂ. ಅನ್ನು ವಿಭಾಗದ ಮುಖ್ಯಸ್ಥ ಡಾ| ಚಿದಾನಂದ ಕುಲಕರ್ಣಿಯವರಿಗೆ ಹಸ್ತಂತರಿಸಲಾಯಿತು. ಮಂಗಳೂರಿನ ಶಕ್ತಿ ಎಜುಕೇಶನ್ ಟ್ರಸ್ಟ್‌ಗೆ 1 ಲಕ್ಷ ರೂ.ಗಳ ವಿದ್ಯಾರ್ಥಿ ವೇತನವನ್ನು ಆಡಳಿತಾಧಿಕಾರಿ ರಮೇಶ್ ಹಾಗೂ ಪ್ರಾಂಶುಪಾಲ ವೆಂಕಟೇಶ್ ಅವರಿಗೆ ಹಸ್ತಾಂತರಿಸಲಾಯಿತು. ಬೆಂಗಳೂರಿನ ಪರಿವರ್ತನ್ ಟ್ರಸ್ಟ್‌ಗೆ 1 ಲ. ರೂ. ಅನ್ನು ಟ್ರಸ್ಟಿನ ರವಿರಾಜ್ ಅವರಿಗೆ ನೀಡಲಾಯಿತು. ಮಣಿಪಾಲದ ಮೇಘಾ ಇವರಿಗೆ ಮನೆ ನಿರ್ಮಾಣದ ಪ್ರಯುಕ್ತ 10 ಸಾ. ರೂ., ಸ್ವತ್ಛಪಾಲಕ ದಿವ್ಯಚೇತನ ನೀಲಾಧರ್ ಶೆಟ್ಟಿಗಾರ್‌ಗೆ 10 ಸಾ.ರೂ., ಸ.ಪ್ರೌ.ಶಾಲೆ ತೊರೆಹಡ್ಲಿಗೆ 10 ಸಾ. ರೂ. ನೆರವು ಹಸ್ತಂತರಿಸಲಾಯಿತು. ಸಮ್ಮಾನ ಕಾರ್ಯಕ್ರಮ
ಖ್ಯಾತ ಮುಳುಗು ತಜ್ಞ ಈಶ್ವರ ಮಲ್ಪೆ ಅವರಿಗೆ 10 ಸಾ.ರೂ. ನೀಡಿ ಗೌರವಿಸಲಾಯಿತು. ಹಾಗೂ ಕಾರ್ಕಳ ಮೆಸ್ಕಾಂನ ಎ ಮತ್ತು ಬಿ ವಿಭಾಗದ 26 ಪವರ್ ಮೆನ್‌ಗಳಿಗೆ ತಲಾ 5 ಸಾವಿರದಂತೆ 1.30 ಲಕ್ಷ ರೂ. ನೀಡಿ ಗೌರವಿಸಲಾಯಿತು. ರಕ್ತದಾನ ಶಿಬಿರ
ಕೆ.ಎಂ.ಸಿ. ಬ್ಲಿಡ್ ಸೆಂಟರ್ ಹಾಗೂ ಜ್ಞಾನಸುಧಾ ಹಳೆ ವಿದ್ಯಾರ್ಥಿ ಸಂಘ ಮತ್ತು ಎನ್ನೆಸೆಸ್ ನೆರವಿನೊಂದಿಗೆ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಬ್ಲಿಡ್ ಸೆಂಟರ್ – ಕೆ.ಎಂ.ಸಿ.ಯ ನಿರ್ದೇಶಕರಾದ ಡಾ| ಶಮೀ ಶಾಸ್ತ್ರಿ ಉದ್ಘಾಟಿಸಿದರು. ಶಿಬಿರದಿಂದ 103 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು.ಟ್ರಸ್ಟಿಗಳಾದ ವಿದ್ಯಾವತಿ ಎಸ್. ಶೆಟ್ಟಿ, ಅನಿಲ್ ಕುಮಾರ್ ಜೈನ್, ಸಿ.ಎ. ನಿತ್ಯಾನಂದ ಪ್ರಭು, ಆಡಳಿತ ಮಂಡಳಿ ಸದಸ್ಯರಾದ ಶಾಂತಿರಾಜ್ ಹೆಗ್ಡೆ, ಕಾರ್ಕಳ ಜ್ಞಾನಸುಧಾ ಕ್ಯಾಂಪಸ್‌ನ ಸಿ.ಇ.ಒ ಹಾಗೂ ಪ್ರಾಂಶುಪಾಲ ದಿನೇಶ್ ಎಂ. ಕೊಡವೂರು ಪಿ.ಆರ್.ಒ. ಜ್ಯೋತಿ ಪದ್ಮನಾಭ ಭಂಡಿ, ಕಾರ್ಕಳ ಮೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳಾದ ಶಿಲ್ಪಾ ಹಾಗೂ ರೂಪಕಲಾ ಕಾಮತ್ ಮತ್ತು ಜ್ಞಾನಸುಧಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನ್ಯಾಯವಾದಿ ಭವಿಷ್ ಸಹಿತ ಪ್ರಮುಖರು ಉಪಸ್ಥಿತರಿದ್ದರು.