Advertisement

ನೂತನ ಶಾಲಾ ಕಟ್ಟಡಕ್ಕೆ ಶಂಕುಸ್ಥಾಪನೆ

03:04 PM Nov 08, 2019 | Suhan S |

ದೇವನಹಳ್ಳಿ: ಕೆವಿನ್‌ ಪ್ರೈವೇಟ್‌ ಲಿಮಿಟೆಡ್‌ ವತಿಯಿಂದ ಗ್ರಾಮೀಣ ವಿಧ್ಯಾರ್ಥಿಗಳ ಶೆ„ಕ್ಷಣಿಕ ಪ್ರಗತಿಗಾಗಿ ಸಾಮಾಜಿಕ ನಿರ್ವಹಣಾ ಅನುದಾನದಲ್ಲಿ 38 ಲಕ್ಷ ರೂ.ವೆಚ್ಚದಲ್ಲಿ ಶಾಲಾ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದು ಕೆವಿನ್‌ ಪ್ರೈವೇಟ್‌ ಲಿಮಿಟೆಡ್‌ನ‌ ವ್ಯವಸ್ಥಾಪಕ ಮಸಕಿ, ಯಾಷಿಮಾ ಸಾನ್‌ ತಿಳಿಸಿದರು.

Advertisement

ತಾಲೂಕಿನ ಸುಣ್ಣಘಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಕೆವಿನ್‌ ಪ್ರೈವೇಟ್‌ ಲಿಮಿಟೆಡ್‌ ವತಿಯಿಂದ ಶಾಲಾ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರೆವೇರಿಸಿ ಮಾತನಾಡಿದರು. ಗ್ರಾಮಿಣ ಪ್ರದೇಶದ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ಸಿಗಬೇಕು. ಶಿಕ್ಷಣ ಪ್ರತಿಯೊಬ್ಬ ಮಗುವಿಗೂ ಸಿಕ್ಕಾಗ ಮಾತ್ರ, ಗ್ರಾಮಗಳು ಶೆ„ಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಎಲ್‌.ಎನ್‌ ನಾರಾ ಯಣಸ್ವಾಮಿ ಮಾತನಾಡಿ, ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಸಿಎಸ್‌ಆರ್‌ ಅನುದಾನದಲ್ಲಿ ಉತ್ತಮ ಸುಸರ್ಜಿತ ಕಟ್ಟಡ ನಿರ್ಮಾಣ ವಾಗುತ್ತಿರುವುದರಿಂದ ಶಾಲೆಯ ದಾಖಲಾತಿ ಪ್ರಮಾಣ ಹೆಚ್ಚಾಗಲಿದೆ ಎಂದರು.

ಜಿಪಂ ಸದಸ್ಯ ಕೆ.ಸಿ ಮಂಜುನಾಥ್‌ ಮಾತನಾಡಿ ಪ್ರತಿ ಮಗುವಿಗೂ ಉತ್ತಮ ಶಿಕ್ಷಣ ಅಗತ್ಯವಿದೆ. ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಸಿಗಬೇಕು ಎಂದರು. ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಬಿ.ಕೆ ನಾರಾಯಣಸ್ವಾಮಿ ಮಾತನಾಡಿದರು. ಈ ವೇಳೆ ಬಿಇಒ ಗಾಯಿತ್ರೀ ದೇವಿ, ಆಲೂರು ದುದ್ದನ ಹಳ್ಳಿ ಗ್ರಾಪಂ ಅಧ್ಯಕ್ಷೆ ಗೌರಮ್ಮ, ಉಪಾಧ್ಯಕ್ಷೆ ಪಿಳ್ಳಮ್ಮ, ಸದಸ್ಯ ಮರಿಯಪ್ಪ, ಮುಖಂಡಾದ ಚಂದ್ರೇ ಗೌಡ, ಮಂಜು ನಾಥ್‌, ನಂಜೇಗೌಡ, ಎ ದೇವರಾಜ್‌, ಮೀನಾಕ್ಷಿ, ಶಾಲಾ ಅಭಿವೃದ್ಧ ಸಮಿತಿ ಅಧ್ಯಕ್ಷರು, ಸದಸ್ಯರು ಶಾಲಾ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next