Advertisement

ಮಮತಾ ಆಕ್ಷೇಪ: ನ.22ರ ಘಟಬಂಧನ್‌ ಸಭೆ ಮುಂದಕ್ಕೆ

09:03 AM Nov 20, 2018 | Team Udayavani |

ಕೋಲ್ಕತಾ: “ಮಹಾಘಟಬಂಧನ್‌’ ಮೂಲಕ ಬಿಜೆಪಿ ನೇತೃತ್ವದ ಎನ್‌ಡಿಎ ಎದುರಿಸಲು ರಚನೆ ಮಾಡುವ ಪ್ರತಿಪಕ್ಷಗಳ ಒಕ್ಕೂಟದ ಸಭೆ ನಡೆಯುವಂತೆಯೇ ತೋರುತ್ತಿಲ್ಲ. ಈ ಹಿಂದೆ ನಿಗದಿಯಾಗಿದ್ದಂತೆ ನ.22ರ ಸಭೆ ಮುಂದೂಡಿಕೆಯಾಗಿದೆ. ಕೋಲ್ಕತಾದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾದ ಬಳಿಕ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಈ ಮಾಹಿತಿ ನೀಡಿ ದ್ದಾರೆ. ಹೊಸ ದಿನಾಂಕವನ್ನು ಇನ್ನಷ್ಟೇ ಗುರುತಿಸಬೇಕಾಗಿದೆ ಎಂದಿದ್ದಾರೆ. ಸಿಬಿಐ, ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ, ಆರ್‌ಬಿಐಗಳನ್ನು ಕೇಂದ್ರ ದುರುಪಯೋಗ ಮಾಡುತ್ತಿದೆ ಎಂದು ನಾಯ್ಡು ದೂರಿದ್ದಾರೆ. ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿಆಕ್ಷೇಪದ ಹಿನ್ನೆಲೆಯಲ್ಲಿ ಈ ಬೆಳವಣಿಗೆಯಾಗಿದೆ.

Advertisement

ಮೂಲಗಳ ಪ್ರಕಾರ ಸಭೆ ಜನವರಿಯಲ್ಲಿ ನಡೆಯಲಿದೆ. ಈ ಬೆಳವಣಿಗೆಯಿಂದಾಗಿ 2019ರ ಲೋಕಸಭಾ ಚುನಾವಣೆಗೆ ಮಹಾಮೈತ್ರಿ ಮೂಲಕ ಬಿಜೆಪಿಯನ್ನು ಹೆಡೆಮುರಿ ಕಟ್ಟಬೇಕೆನ್ನುವ ಕಾಂಗ್ರೆಸ್‌ ಮತ್ತು ಮಿತ್ರಪಕ್ಷಗಳ ಲೆಕ್ಕಾಚಾರ ಮತ್ತೆ ಬುಡಮೇಲಾದಂತಿದೆ. ಒಕ್ಕೂಟ ರಚಿಸುವ ನಿಟ್ಟಿನಲ್ಲಿ ನಾಯ್ಡು ಬೆಂಗಳೂರಿಗೂ ಬಂದು ಜೆಡಿಎಸ್‌ ನಾಯಕರಾಗಿರುವ ದೇವೇಗೌಡ, ಕುಮಾರಸ್ವಾಮಿ ಜತೆ ಚರ್ಚಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next