Advertisement

ವಿಜಯಪುರ : ಕರ್ಫ್ಯೂ ನಿಯಮ ಮೀರಿ ರಸ್ತೆಗೆ ಇಳಿದ ವಾಹನಗಳ ಜಪ್ತಿ

02:57 PM Apr 28, 2021 | Girisha |

ವಿಜಯಪುರ : ಕೋವಿಡ್ ನಿಗ್ರಹಕ್ಕಾಗಿ ರಾಜ್ಯಾದ್ಯಂತ 14 ದಿನಗಳ ಲಾಕ್ ಡೌನ್ ಮಾಡಲಾಗಿದೆ. ಜಿಲ್ಲೆಯಲ್ಲಿ ಕೋವಿಡ್ ಕರ್ಫ್ಯೂ ಹಿನ್ನೆಲೆ ನಿಯಮ ಮೀರಿ ರಸ್ತೆಗೆ ಇಳಿದ ವಾಹನಗಳನ್ನು ಜಪ್ತಿ ಮಾಡಿ, ಪ್ರಕರಣ ದಾಖಲಿಸುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

Advertisement

ಕರ್ಫ್ಯೂ ಜಾರಿಯಾದರೂ ನಿತ್ಯ ಬೆಳಿಗ್ಗೆ 6 ರಿಂದ 10 ರ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಕರ್ಫ್ಯೂ ಸಡಿಲಿಕೆ ಇತ್ತು. ಇದರ ಹೊರತಾಗಿ ಬೇಕಾಬಿಟ್ಟಿ ರಸ್ತೆಗಳಲ್ಲಿ ಓಡಾಟ ನಡೆಸಿದವರಿಗೆ ಪೊಲೀಸರು ಬೆತ್ತದ ರುಚಿ ತೋರಿಸಲು ಮುಂದಾಗಿದ್ದಾರೆ. ನಗರದ ಪ್ರಮುಖ ಮಾರ್ಗಮಾದ ಮಹಾತ್ಮಾ ಗಾಂಧೀಜಿ ವೃತ್ತದ ಸುತ್ತಲೂ ಎಲ್ಲ ರಸ್ತೆಗಳನ್ನು ಬ್ಯಾರಿಕೇಡ್ ಹಾಕಿ, ನಿರ್ಬಂಧಿಸಿರುವ ಪೊಲೀಸರು ಭದ್ರತೆ ಬಿಗಿಗೊಳಿಸಿದ್ದಾರೆ.

ತುರ್ತು ಕೆಲಸಕ್ಕೆ ಮಾತ್ರ ಅವಕಾಶ ನೀಡುತ್ತಿರುವ ಪೊಲೀಸರು ಪ್ರತಿ ವಾಹನಗಳನ್ನು ತಡೆದು ಪರಿಶೀಲನೆ ನಡೆಸಿದ್ದಾರೆ. ಕರ್ಫ್ಯೂ ನಿಯಮ ಮೀರಿ ರಸ್ತೆಗೆ ಇಳಿದ ಬೈಕ್, ಆಟೋ, ಕಾರುಗಳನ್ನು ವಶಕ್ಕೆ ಪಡೆಯುತ್ತಿದ್ದಾರೆ. ನೆಪಗಳನ್ನು ಹೇಳಲು ಮುಂದಾದವರಿಗೆ ಲಾಠಿ ರುಚಿಯನ್ನೂ ತೋರಿಸುತ್ತಿರುವ ಪೊಲೀಸರು, ಹಲವರಿಗೆ ಎಚ್ಚರಿಕೆ ನೀಡಿದ್ದಾರೆ. ಇದಲ್ಲದೇ ಸುಖಾಸುಮ್ಮನೇ ಬೀದಿಗೆ ಇಳಿದವರ ವಾಹನಗಳನ್ನು ವಶಕ್ಕೆ ಪಡೆಯುತ್ತಿದ್ದಾರೆ.

Advertisement

ಎಎಸ್ಪಿ ರಾಮ್ ಅರಸಿದ್ಧಿ ಅವರೇ ಸ್ವತಃ ಕಾರ್ಯಾಚರಣೆಗೆ ಇಳಿದಿದ್ದಾರೆ. ಪರಿಣಾಮ ಕರ್ಫ್ಯೂ ಮೊದಲ ದಿನವೇ ಸುಮಾರು 50 ಕ್ಕೂ ಹೆಚ್ಚು ಆಟೋಗಳು, 100 ಕ್ಕೂ ಹೆಚ್ಚು ಬೈಕ್, ಹಲವು ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next