Advertisement

ಜಲಿಯನ್‌ವಾಲಾಬಾಗ್‌ ಸ್ಮಾರಕಕ್ಕೆ ಪುಷ್ಪ ನಮನ

02:16 AM Apr 14, 2019 | mahesh |

ಹೊಸದಿಲ್ಲಿ: ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡ ನಡೆದು ಶನಿವಾರಕ್ಕೆ 100 ವರ್ಷ ಪೂರೈಸಿದ‌ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಕೋವಿಂದ್‌, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಸೇರಿದಂತೆ ಅನೇಕ ನಾಯಕರು ಹತ್ಯಾಕಾಂಡದ ಸಂತ್ರಸ್ತರನ್ನು ಸ್ಮರಿಸಿದ್ದಾರೆ. ಈ ಹತ್ಯಾಕಾಂಡದಲ್ಲಿ ಹುತಾತ್ಮರನ್ನು ನಾವು ಎಂದಿಗೂ ಮರೆಯ ಲಾಗದು. ಇವರ ಸಾಹಸವು ದೇಶಕ್ಕಾಗಿ ದುಡಿಯಲು ನಮಗೆ ಇನ್ನಷ್ಟು ಪ್ರೋತ್ಸಾಹ ನೀಡಲಿದೆ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ. ಹತ್ಯಾಕಾಂಡಕ್ಕೆ 100 ವರ್ಷ ತುಂಬಿದ ನೆನಪಿಗಾಗಿ ಉಪರಾಷ್ಟ್ರಪತಿ ನಾಯ್ಡು ಅವರು 100 ರೂ. ಮುಖಬೆಲೆಯ ನಾಣ್ಯ ಹಾಗೂ ಅಂಚೆ ಚೀಟಿಯೊಂದನ್ನು ಬಿಡುಗಡೆ ಮಾಡಿದರು.

Advertisement

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅಮೃತಸರದಲ್ಲಿರುವ ಜಲಿಯನ್‌ ವಾಲಾಬಾಗ್‌ ಸ್ಮಾರಕಕ್ಕೆ ಭೇಟಿ ನೀಡಿ, ಸಂತ್ರಸ್ತರಿಗೆ ಪುಷ್ಪನಮನ ಸಲ್ಲಿಸಿದ್ದಾರೆ. ಇದೇ ವೇಳೆ, 100 ವರ್ಷಗಳ ಹಿಂದೆ ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಜಲಿಯನ್‌ ವಾಲಾಬಾಗ್‌ನಲ್ಲಿ ವೀರ ಮರಣವನ್ನಪ್ಪಿದ್ದಾರೆ. ಇದೊಂದು ಭೀಕರ ಹತ್ಯಾಕಾಂಡ ವಾಗಿದ್ದು, ನಾಗರಿಕತೆಯ ಇತಿಹಾಸದಲ್ಲೇ ಕಪ್ಪುಚುಕ್ಕೆಯಾಗಿದೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಟ್ವೀಟ್‌ ಮಾಡಿದ್ದಾರೆ.

ಕ್ಷಮೆ ಕೇಳಿ: ಈ ಮಧ್ಯೆಯೇ ಹತ್ಯಾಕಾಂಡದ ಬಗ್ಗೆ ಕ್ಷಮೆ ಕೇಳು ವಂತೆ ಇಂಗ್ಲೆಂಡ್‌ ಸರಕಾರಕ್ಕೆ ಇಂಗ್ಲೆಂಡ್‌ನ‌ಲ್ಲಿ ಭಾರತೀಯ ಮೂಲದ ನಾಗರಿಕರ ಒತ್ತಡ ಹೆಚ್ಚಾಗಿದೆ. ಕಳೆದ ಕೆಲವು ದಿನಗಳಿಂದ ಇಂಗ್ಲೆಂಡ್‌ನ‌ ಉಭಯ ಸದನಗಳಲ್ಲೂ ಸುದೀರ್ಘ‌ ಚರ್ಚೆ ಈ ಬಗ್ಗೆ ನಡೆದಿದ್ದು, ಕೆಲವೇ ದಿನಗಳ ಹಿಂದೆ ಬ್ರಿಟನ್‌ ಪ್ರಧಾನಿ ಥೆರೆಸಾ ಮೇ, ಈ ಘಟನೆಗೆ ವಿಷಾದಿಸುತ್ತೇವೆ ಎಂದಷ್ಟೇ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next