Advertisement

Bengaluru: ಶಾಸಕರಿಗೆ ಶುಭ ಕೋರಿ ಹಾಕಿದ್ದ ಫ್ಲೆಕ್ಸ್‌ ಬಿದ್ದು ವೃದ್ಧ ಕೋಮಾಕ್ಕೆೆ

11:07 AM Jul 08, 2024 | Team Udayavani |

ಬೆಂಗಳೂರು: ಫ್ಲೆಕ್ಸ್‌ ಬಿದ್ದು ವೃದ್ಧರೊಬ್ಬರು ಗಾಯಗೊಂಡಿ ರುವ ಘಟನೆ ಯಲಹಂಕದ ಸಿಂಗನಾಯಕನಹಳ್ಳಿಯಲ್ಲಿ ನಡೆದಿದೆ.

Advertisement

ರಾಜಾನುಕುಂಟೆ ನಿವಾಸಿ ಭಕ್ತ ವತ್ಸಲ(70) ಗಾಯ ಗೊಂಡವರು. ಶನಿವಾರ ಮೊಮ್ಮಗಳನ್ನು ಶಾಲೆಯಿಂದ ಕರೆದುಕೊಂಡು ಬೈಕ್‌ನಲ್ಲಿ ಹೋಗುತ್ತಿದ್ದರು. ಅದೇ ವೇಳೆ ಫ್ಲೆಕ್ಸ್‌ ಬಿದ್ದಿದ್ದು, ಅವರ ತಲೆಗೆ ಪೆಟ್ಟಾಗಿ, ತೀವ್ರ ರಕ್ತಸ್ರಾವವಾಗಿದೆ. ಪರಿಣಾಮ ಕೋಮಾ ಸ್ಥಿತಿಗೆ ತಲುಪಿದ್ದಾರೆ. ಸ್ಥಳೀಯ ಶಾಸಕರ ಹುಟ್ಟುಹಬ್ಬಕ್ಕೆ ಹಾಕಿದಂತಹ ಫ್ಲೆಕ್ಸ್‌ ಬಿದ್ದು ಘಟನೆ ನಡೆದಿದೆ ಎಂದು ಹೇಳಲಾಗಿದೆ.

ಘಟನೆ ನಡೆದ ಸ್ಥಳ ಪಾಲಿಕೆಗೆ ಸೇರಿಲ್ಲ: ಫ್ಲೆಕ್ಸ್‌ ಬಿದ್ದ ಸಿಂಗನಾಯ ಕನಹಳ್ಳಿಬಿಬಿಎಂಪಿ ವ್ಯಾಪ್ತಿಗೆ ಸೇರುವುದಿಲ್ಲ ಎಂದು ಪಾಲಿಕೆ ಸ್ಪಷ್ಟಪಡಿಸಿದೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಪಾಲಿಕೆ, ಸಿಂಗನಾಯಕನಹಳ್ಳಿ ಯಲಹಂಕ ತಾಲೂಕು ವ್ಯಾಪ್ತಿಗೆ ಸೇರಲಿ ದೆ. ಕೆಲ ಮಾಧ್ಯಮಗಳಲ್ಲಿ ಬಿಬಿಎಂಪಿಗೆ ಸೇರಿದ್ದು ಎಂಬ ತಪ್ಪು ಮಾಹಿತಿ ಬಿತ್ತರವಾಗುತ್ತಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ ಅನಧಿಕೃತ ಫ್ಲೆಕ್ಸ್‌, ಬ್ಯಾನರ್‌ ತೆರವುಗೊಳಿಸುತ್ತಿದ್ದು, ಬ್ಯಾನರ್‌ ಅಳವಡಿಕೆ ಮಾಡಿರುವವ ಮೇಲೆ ಕೇಸು ದಾಖಲಿಸುವ ಜೊತೆಗೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸ್ಪಷ್ಟಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next