Advertisement

ಭತ್ತದ ಗದ್ದೆಯಲ್ಲಿ ತ್ರಿವರ್ಣ ಧ್ವಜಾರೋಹಣ

04:36 PM Aug 16, 2021 | Team Udayavani |

ಬಂಗಾರಪೇಟೆ: ಗೋಮಾಳದಲ್ಲಿ ಸಾಗುವಳಿಮಾಡುತ್ತಿರುವ ಗಡಿಭಾಗದ ರೈತರಮೇಲೆ ಅರಣ್ಯ ಇಲಾಖೆಅಧಿಕಾರಿಗಳ ದಬ್ಟಾಳಿಕೆ,ಕಾಡಾನೆಗಳ ಹಾವಳಿಗೆ ಶಾಶ್ವತಪರಿಹಾರ ಒದಗಿಸುವಲ್ಲಿವಿಫ‌ಲವಾಗಿರುವ ಸರ್ಕಾರದವಿರುದ್ಧ ರೈತರು ದಂಗೆಹೇಳಬೇಕಾಗಿದೆ ಎಂದು ರೈತಸಂಘದ ಜಿಲ್ಲಾಧ್ಯಕ್ಷ ಐತಾಂಡಹಳ್ಳಿಮಂಜುನಾಥ್‌ ಸಲಹೆ ನೀಡಿದರು.

Advertisement

ಕಾಡಾನೆ ದಾಳಿಗೆ ನಾಶವಾದ ಕದರಿನತ್ತ ಗ್ರಾಮದರೈತರ ಭತ್ತದ ಗದ್ದೆಯಲ್ಲಿ ಧ್ವಜಾರೋಹಣ ಮಾಡಿಆಕ್ರೋಶ ವ್ಯಕ್ತಪಡಿಸಿದ ಅವರು, ದೇಶಕ್ಕೆ ಸ್ವಾತಂತ್ರÂಬಂದು ದಶಕಗಳೇ ಕಳೆದರೂ ಗಡಿಭಾಗದ ರೈತರಿಗೆಸ್ವಾತಂತ್ರÂ ಸಿಕ್ಕಲ್ಲ. ಒಂದು ಕಡೆ ಜನ ಪ್ರತಿನಿಧಿಗಳನಿರ್ಲಕ್ಷ್ಯ, ಮತ್ತೂಂದೆಡೆ ಕಾಡುಪ್ರಾಣಿಗಳಹಾವಳಿಗೆ ಶಾಶ್ವತ ಪರಿಹಾರ ಸಿಗದೆ ಜೀವಅಂಗೈಯಲ್ಲಿಟ್ಟುಕೊಂಡು ಜೀವನಮಾಡಬೇಕಾದ ಪರಿಸ್ಥಿತಿ ರೈತರದ್ದಾಗಿದೆಎಂದು ಹೇಳಿದರು.
ನೊಂದ ರೈತ ಗುಲ್ಲಟ್ಟಿಮಾತನಾಡಿ, ಬ್ರಿಟೀಷರ ಆಳ್ವಿಕೆಯಲ್ಲಿಬೆವರಿಗೆ ತಕ್ಕ ಪ್ರತಿಫ‌ಲ ಸಿಗುತ್ತಿತ್ತು. ಆದರೆ,ಸ್ವಾತಂತ್ರ್ಯ ಬಂದರೂ ಗಡಿಭಾಗಗಳಲ್ಲಿಸಮರ್ಪಕ ರಸ್ತೆ ಇಲ್ಲ, ಕುಡಿಯುವ ನೀರಿಲ್ಲ,ಶೌಚಾಲಯಗಳ ವ್ಯವಸ್ಥೆಯಿಲ್ಲ, ಶಿಕ್ಷಣವ್ಯವಸ್ಥೆಯಂತೂ ಕೇಳುವಂತಿಲ್ಲ. ಆರೋಗ್ಯ ಬೇಕಾದರೆ15 ಕಿ.ಮೀ ಕಾಡಿನಲ್ಲಿ ನಡೆದು ಹೋಗಬೇಕು ಎಂದುಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next