ಕುಂಬಳೆ : ಕುಂಬಳೆ ಗ್ರಾಮ ಪಂಚಾಯತಿನ ಕಳೆದ 2008-2009 ನೇ ವರ್ಷದ ಆಡಳಿತ ಕಾಲದಲ್ಲಿ ಬಡವರಾದ ಬೆಸ್ತರಿಗೆ ಮನೆ ನಿರ್ಮಿಸಲು ನೀಡಿದ ಸ್ಥಳ ಮನೆ ಕಟ್ಟಲು ಯೋಗ್ಯವಾಗಿರದೆ ಇದರಲ್ಲಿ ಭಾರಿ ವಂಚನೆ ನಡೆದಿರುವುದಾಗಿ ಸಿ.ಪಿ.ಎಂ.ಆರೋಪಿಸಿದೆ.
ಕುಂಬಳೆ ಕೊಯಿಪ್ಪಾಡಿ ಪೆರ್ವಾಡು ಎಂಬಲ್ಲಿನ 9 ಮಂದಿ ಬಡ ಮೀನು ಕಾರ್ಮಿಕರಿಗೆ ಮನೆ ನಿರ್ಮಿಸಲು ಪಂಚಾಯತ್ ವತಿಯಿಂದ ಸ್ಥಳ ನೀಡಲಾಗಿದೆ.
ಬಳಿಕ ಮನೆ ನಿರ್ಮಿಸಲು ಗ್ರಾಮ ಪಂಚಾಯತ್ ವತಿಯಿಂದ ನಿಧಿ ಮಂಜೂರಾಗಿದೆ.ಇದರಂತೆ ಇಬ್ಬರು ತಮ್ಮ ಸ್ಥಳವೆಂಬುದಾಗಿ ತಮ್ಮ ಸ್ಥಳದಲ್ಲಿ ಅಡಿಪಾಯ ಹಾಕಿರುವರು. ಆದರೆ ಬಳಿಕ ಈ ಸ್ಥಳ ಇವರಿಗೆ ಮಂಜೂರಾದು ದಲ್ಲವೆ ಂಬುದಾಗಿ ತಿಳಿದು ಸಂಕಷ್ಟಕ್ಕೊಳಗಾಗಿದ್ದಾರೆ.
ಈ ಬೆಸ್ತರಿಗೆ ರೈಲು ಹಳಿಯ ಪಕ್ಕದಲ್ಲಿ ಸ್ಥಳ ಗೊತ್ತುಪಡಿಸಿರುವುದಾಗಿ ಬಳಿಕ ಇವರ ಗಮನಕ್ಕೆ ಬಂದಿದೆ. ಆದರೆ ಈ ಸ್ಥಳದಲ್ಲಿ ಮನೆ ನಿರ್ಮಿಸುವಂತಿಲ್ಲ. ಹಳಿಯಿಂದ ನಿರ್ದಿಷ್ಟ ಮೀಟರ್ ದೂರದಲ್ಲಿ ಕಟ್ಟಡ ನಿರ್ಮಿಸಬೇಕೆಂಬ ನಿಬಂಧನೆ ಇರುವುದರಿಂದ ಇಲ್ಲಿ ಸ್ಥಳ ಸಿಕ್ಕಿಯೂ ಪ್ರಯೋಜನವಿಲ್ಲದಾಗಿದೆ.
ಈ ವಂಚನೆಯಲ್ಲಿ ಅಂದಿನ ಆಡಳಿತ ಮತ್ತು ಸ್ಥಳೀಯ ಗ್ರಾಮ ಪಂಚಾ ಯತ್ ಸದಸ್ಯರು ಶಾಮೀಲಾಗಿರುವರೆಂಬ ಆರೋಪ ಫಲಾನುಭವಿಗಳದು. ಈ ಅವ್ಯವಹಾರದ ಪ್ರಕರಣವನ್ನು ವಿಜಿಲೆನ್ಸ್ ಇಲಾಖೆ ತನಿಖೆ ನಡೆಸಬೇಕೆಂಬುದಾಗಿ ಸಿ.ಪಿ.ಎಂ.ಒತ್ತಾಯಿಸಿದೆ.
ಚುನಾವಣಾ ಸಂದರ್ಭದಲ್ಲಿ ರಾಜಕೀಯ ಪೇÅರಿತ ಆರೋಪ
ಕಳೆದ ಐಕ್ಯರಂಗದ ಆಡಳಿತ ಕಾಲದಲ್ಲಿ ಆತ್ಯಂತ ಬೆಲೆ ಕಡಮೆ ದರದಲ್ಲಿ ಸ್ಥಳವನ್ನು ಖರೀದಿಸಿ ಜಿಲ್ಲಾಧಿಕಾರಿಯವರ ಒಪ್ಪಿಗೆ ಪಡೆದು ಫಲಾನುಭವಿಗಳಿಗೆ ವಿತರಿಸಲಾಗಿದೆ.ಆಂದಿನ ಕಾಲದಲ್ಲಿ ಕಟ್ಟಡ ಕಟ್ಟಲು ಯಾವುದೇ ಕಾಯಿದೆಯ ನಿರ್ಬಂಧವಿಲ್ಲವಾಯಿತು.ಆದರೆ ಕೆಲವರು ಪಂಚಾಯತ್ ವತಿಯಿಂದ ನಿಧಿ ಪಡೆದು ಮನೆ ಕಟ್ಟದೆ ದುರಪಯೋಗಪಡಿಸಿರುವ ಆರೋಪವಿದೆ.ಪ್ರಕೃತ ಚುನಾವಣಾ ಕಾಲದಲ್ಲಿ ರಾಜಕೀಯ ಪೇÅರಿತ ಆರೋಪವನ್ನು ಸಿ.ಪಿ.ಎಂ.ಮಾಡಿದೆ.
-ಬಿ.ಎನ್.ಮಹಮ್ಮದಾಲಿ
ಅಧ್ಯಕ್ಷರು ಅಭಿವೃದ್ಧಿ ಸ್ಥಾಯಿ ಸಮಿತಿ ಕುಂಬಳೆ ಗ್ರಾ.ಪಂ.