Advertisement

ಪ್ರಥಮ ಚಿಕಿತ್ಸಕರ ಸೇವೆ ಸಕ್ರಮಕ್ಕೆ ಆಗ್ರಹಿಸಿ ಧರಣಿ

03:15 PM Jul 27, 2017 | |

ಕಲಬುರಗಿ: ಕರ್ನಾಟಕ ರಾಜ್ಯ ವೈದ್ಯಕೀಯ ಪ್ರಥಮ ಚಿಕಿತ್ಸಾ ಪರಿಣಿತರ ಕುರಿತು ರಾಜ್ಯ ಸರ್ಕಾರ ಹೊರಡಿಸಿದ ಸುತ್ತೋಲೆ ಹಿಂದಕ್ಕೆ ಪಡೆದಿರುವುದನ್ನು ವಿರೋಧಿಸಿ ಹಾಗೂ ಪ್ರಥಮ ಚಿಕಿತ್ಸಕರ ಸೇವೆ ಸಕ್ರಮಗೊಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ವೈದ್ಯಕೀಯ ಪ್ರಥಮ ಚಿಕಿತ್ಸಾ ಪರಿಣಿತರ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬುಧವಾರ ಧರಣಿ ಸತ್ಯಾಗ್ರಹ ನಡೆಯಿತು.

Advertisement

ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳ ಮೂಲಕ ಕರ್ನಾಟಕ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶಕುಮಾರ ಅವರಿಗೆ ಮನವಿ ಪತ್ರ ಸಲ್ಲಿಸಿ, ನಿರಂತರ ಹೋರಾಟದ ಫಲವಾಗಿ ಪ್ರಥಮ ಚಿಕಿತ್ಸಕರ ಸೇವೆ ಸಕ್ರಮದ ಕುರಿತು ಸುತ್ತೋಲೆ ಹೊರಡಿಸಲಾಗಿತ್ತು. ಆದಾಗ್ಯೂ, ಪಟ್ಟಭದ್ರ ಹಿತಾಸಕ್ತಿಗಳಿಂದಾಗಿ ಸುತ್ತೋಲೆಯನ್ನು ಆರೋಗ್ಯ ಇಲಾಖೆಯ ಆಯುಕ್ತ ಸುಭೋದ್‌ ಯಾದವ್‌ ಅವರು ಹಿಂಪಡೆಯಲು ಆದೇಶಿಸಿದ್ದು ಆಘಾತ ತಂದಿದೆ ಎಂದು ಕಳವಳ ವ್ಯಕ್ತಪಡಿಸಿದರು.

ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎನ್ನುವಂತಹ ಸ್ಥಿತಿ ಬಂದಿದೆ. ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾ 20 ವರ್ಷಗಳ ಹಿಂದೆಯೇ ಪ್ರಥಮ ಚಿಕಿತ್ಸಕರ ಸೇವೆಗೆ ಮಾನ್ಯತೆ ನೀಡಿದೆ. ದೇಶದ ಆಂಧ್ರ, ತಮಿಳ್ನಾಡು, ತೆಲಂಗಾಣ, ಗುಜರಾತ ಮುಂತಾದ ರಾಜ್ಯಗಳಲ್ಲಿ ಪ್ರಥಮ ಚಿಕಿತ್ಸಕರಿಗೆ ತರಬೇತಿ ನೀಡಿ ಆದ್ಯತೆ ನೀಡಲಾಗಿದೆ. ಕರ್ನಾಟಕದಲ್ಲಿ ಮಾತ್ರ ನಿರ್ಲಕ್ಷಿಸಲಾಗುತ್ತಿದೆ. ಪ್ರಥಮ ಚಿಕಿತ್ಸಕರ ಕುಟುಂಬಗಳು ಬೀದಿಪಾಲಾಗುವ ಮುನ್ನ ಗ್ರಾಮೀಣ ಮತ್ತು ಕೊಳಚೆ ಪ್ರದೇಶದ ನಿವಾಸಿಗಳಿಗೆ ಜೀವನಾಡಿ ಆಗಿರುವ ಪ್ರಥಮ ಚಿಕಿತ್ಸಕರಿಗೆ ಅಧಿಕೃತ ತರಬೇತಿ ನೀಡಿ ಮಾನ್ಯತೆ ಕೊಡಬೇಕೆಂದು ಒತ್ತಾಯಿಸಿದರು.

ಪಿ.ಕೆ. ಕುಮಾರ್‌, ಎಸ್‌.ಜಿ. ಮಡಿಕೇಶ್ವರ ಹಾಗೂ ಮತ್ತಿತರ ವೈದ್ಯಕೀಯ ಪ್ರಥಮ ಚಿಕಿತ್ಸಾ ಪರಿಣಿತರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next