Advertisement

ದಸರಾ ಆನೆಗಳ ಮೊದಲ ತಂಡ ನಾಳೆ ಮೈಸೂರಿಗೆ 

06:20 AM Aug 10, 2017 | |

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಆಚರಣೆಗೆ ಸಿದ್ಧತೆ ಆರಂಭವಾಗಿದೆ. ದಸರೆಯ ಪ್ರಮುಖ ಆಕರ್ಷಣೆ ಜಂಬೂ ಸವಾರಿ ಮೆರವಣಿಗೆಯಲ್ಲಿ ಈ ಬಾರಿ ಪಾಲ್ಗೊಳ್ಳುವ 15 ಆನೆಗಳ ಪೈಕಿ, ಚಿನ್ನದ ಅಂಬಾರಿ ಹೊರುವ ಅರ್ಜುನ ನೇತೃತ್ವದ ಎಂಟು ಆನೆಗಳ ಮೊದಲ ತಂಡ ಶನಿವಾರ ಮೈಸೂರಿಗೆ ಆಗಮಿಸಲಿದೆ.

Advertisement

ದಸರಾ ಸಂದರ್ಭದಲ್ಲಿ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ದೃಷ್ಟಿಯಿಂದ ಈ ಬಾರಿ ಗಜಪಯಣವನ್ನು ಅದೂಟಛಿರಿಯಾಗಿ ಆಚರಿಸಲಾಗುವುದು. ದಸರಾ ಗಜಪಡೆ ಕುರಿತ ಸಾಕ್ಷ್ಯಚಿತ್ರವನ್ನೂ ತಯಾರಿಸಲಾಗಿದೆ. ಅದರಂತೆ ಹುಣಸೂರು ತಾಲೂಕಿನ ನಾಗಾಪುರ ಗಿರಿಜನ ಆಶ್ರಮ ಶಾಲೆ ಆವರಣದಲ್ಲಿ ಶನಿವಾರ ಬೆಳಗ್ಗೆ 11 ಗಂಟೆಗೆ ಗಜಪಯಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್‌.ಸಿ.ಮಹದೇವಪ್ಪ ಚಾಲನೆ ನೀಡಲಿದ್ದಾರೆ.

ಮೊದಲ ತಂಡದಲ್ಲಿ ಅರ್ಜುನ, ಅಭಿಮನ್ಯು, ಗಜೇಂದ್ರ, ಬಲರಾಮ, ವರಲಕ್ಷ್ಮೀ, ವಿಜಯ, ಕಾವೇರಿ ಹಾಗೂ ಭೀಮಾ ಆನೆಗಳು ಮೈಸೂರಿಗೆ ಬರಲಿವೆ. ಇಲವಾಲದ ಅಲೋಕ ದಲ್ಲಿ ಐದು ದಿನಗಳ ಕಾಲ ಬೀಡು ಬಿಡಲಿವೆ. 17ರಂದು ಅರಮನೆ ಜಯ ಮಾರ್ತಾಂಡ ದ್ವಾರದ ಮೂಲಕ ಜಿಲ್ಲಾಡಳಿತ ಗಜಪಡೆಯನ್ನು ಶಾಸೊOಉ ಕ್ತವಾಗಿ ಬರಮಾಡಿಕೊಳ್ಳಲಿದೆ.

ಆನೆಗೆ ಮೈಕ್ರೋ ಚಿಪ್‌: ಉತ್ತರ ಭಾರತ ಮತ್ತು ಕೇರಳದಲ್ಲಿ ಆನೆಗಳ ಅಕ್ರಮ ಮಾರಾಟ ನಡೆಯುವ ಹಿನ್ನೆಲೆಯಲ್ಲಿ ಈ ಅಕ್ರಮ ತಡೆಗಟ್ಟುವ ಉದ್ದೇಶದಿಂದ 2014ರಲ್ಲಿ ಶಿಬಿರಗಳಲ್ಲಿರುವ ಆನೆಗಳು, ದೇವಾಲಯ,ಅರಮನೆಯಲ್ಲಿರುವ ಆನೆಗಳಿಗೆ ಮೈಕ್ರೋಚಿಪ್‌ ಅಳವಡಿಸಲಾಗಿದೆ. ಚಿಪ್‌ ಅಳವಡಿಸಿರುವ ಆನೆಗಳ ಮೇಲೆ ಮೈಕ್ರೋಚಿಪ್‌ ರೀಡರ್‌ ಹಿಡಿದರೆ ಆ ಆನೆಗಳ ಸಂಖ್ಯೆಯನ್ನು ತೋರಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next