Advertisement

ಇನ್ನೂ ಶುರುವಾಗದ ಪ್ರಥಮ ಪಿಯು ತರಗತಿ

06:41 PM Jan 23, 2021 | Team Udayavani |

ಗಂಗಾವತಿ: ಕೋವಿಡ್ ಮಹಾಮಾರಿಯಿಂದಾಗಿ ಕಳೆದ 9 ತಿಂಗಳಿಂದ ಮುಚ್ಚಲ್ಪಟ್ಟಿದ್ದ ಶಾಲಾ-ಕಾಲೇಜುಗಳು ಇದೀಗ ಆರಂಭವಾಗಿವೆ. 10ನೇ ತರಗತಿ ಮತ್ತು ಪಿಯು ದ್ವಿತೀಯ ತರಗತಿಗಳು ಸಾಮಾಜಿಕ ಅಂತರ ಹಾಗೂ ಮಾರ್ಗಸೂಚಿಯಂತೆ ಆರಂಭವಾಗಿವೆ. ಪ್ರಥಮ ಪಿಯು ತರಗತಿ ಆರಂಭ ಮಾಡಲು ಪಿಯು ಬೋರ್ಡ್‌ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಇದರಿಂದ ಪ್ರಥಮ ವರ್ಷದ ಪಿಯು ವಿದ್ಯಾರ್ಥಿಗಳು ಗೊಂದಲದಲ್ಲಿದ್ದು, ಸರ್ಕಾರ ಕೂಡಲೇ ತರಗತಿ ಆರಂಭಿಸಬೇಕು ಎಂಬ ಕೂಗು ಕೇಳಿ ಬರುತ್ತಿದೆ.

Advertisement

ಈಗಾಗಲೇ 10 ಮತ್ತು ದ್ವಿತೀಯ ಪಿಯು ತರಗತಿ ಹಾಗೂ 6-9ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮನ ಯೋಜನೆಯಂತೆ ತರಗತಿಗಳನ್ನು ಶಿಕ್ಷಣ ಇಲಾಖೆ ಆರಂಭ ಮಾಡಿದ್ದು, ತರಗತಿಗಳು ಯಶಸ್ವಿಯಾಗಿ ನಡೆಯುತ್ತಿವೆ. ಅಲ್ಲೊಂದು

ಇಲ್ಲೊಂದು ಕೋವಿಡ್ ಪ್ರಕರಣಗಳು ಕಂಡು ಬರುತ್ತಿದ್ದರೂ ಪ್ರಥಮ ಪಿಯು ತರಗತಿ ಆರಂಭಿಸಲು ಪಿಯು ಬೋರ್ಡ್‌ ಆಸಕ್ತಿ ತೋರುತ್ತಿಲ್ಲ. ಇತ್ತೀಚೆಗೆ ಬೆಂಗಳೂರಿನಲ್ಲಿ ಪಿಯು ಬೋರ್ಡ್‌ ಕಚೇರಿಯಲ್ಲಿ ರಾಜ್ಯದ ಪಿಯು ಕಾಲೇಜುಗಳ ಪ್ರಾಚಾರ್ಯ ಸಭೆಯನ್ನು ಕರೆದು ಪ್ರಥಮ ಪಿಯು ತರಗತಿ ಆರಂಭ ಮಾಡುವ ಕುರಿತು ಅಭಿಪ್ರಾಯವನ್ನು ಇಲಾಖೆ ಕೇಳಿದ್ದು, ಸಭೆಯಲ್ಲಿ ಶೇ.80ರಷ್ಟು ಪ್ರಾಚಾರ್ಯರು ತರಗತಿ ಆರಂಭ ಮಾಡುವಂತೆ ಸಲಹೆ ನೀಡಿದ್ದಾರೆ.

ಕತ್ತಲಿನಲ್ಲಿ ಶೈಕ್ಷಣಿಕ ಬದುಕು: ಕೊರೊನಾ ಮಹಾಮಾರಿಯಿಂದ ಕಾಲೇಜುಗಳು ಬಂದ್‌ ಆಗಿದ್ದರಿಂದ ಶೈಕ್ಷಣಿಕ ವರ್ಷ ತಡವಾಗಿದೆ. ಪಠ್ಯ ಕ್ರಮವನ್ನು ಕಡಿತಗೊಳಿಸಲು ಪಿಯು ಬೋರ್ಡ್‌ ನಿರ್ಧರಿಸಿದ್ದು, ಜನವರಿ ತಿಂಗಳು ಮುಗಿಯುತ್ತಾ ಬಂದರೂ ಸೂಕ್ತ ನಿರ್ಧಾರ ಕೈಗೊಳ್ಳದಿರುವುದು ಪ್ರಥಮ ಪಿಯು ವಿದ್ಯಾರ್ಥಿಗಳ ಶೈಕ್ಷಣಿಕ ಬದುಕು ಕತ್ತಲಿನಲ್ಲಿ ಕಳೆಯುವಂತಾಗಿದೆ. ಪಿಯು ನಂತರ ವಿದ್ಯಾಭ್ಯಾಸಕ್ಕೆ ಪ್ರಥಮ ವರ್ಷದ ಪಿಯು ಪಠ್ಯಕ್ರಮ ಅಗತ್ಯವಾಗಿದ್ದು, ಸರ್ಕಾರ ಇದುವರೆಗೂ ಯಾವುದೇ ನಿರ್ಧಾರಕ್ಕೆ ಬಾರದಿರುವುದು ವಿದ್ಯಾರ್ಥಿಗಳು ಮತ್ತು ಪಾಲಕರ ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ:ರಸ್ತೆ ಸುರಕ್ಷತಾ ಸಪ್ತಾಹ-ಜಾಥಾ

Advertisement

ಸರ್ಕಾರದಿಂದ ತಾರತಮ್ಯ ನೀತಿ: 10ನೇ ತರಗತಿ ನಡೆಸಲು ಆದೇಶ ಮಾಡಿದ ಶಿಕ್ಷಣ ಇಲಾಖೆ ವಯಸ್ಸಿನಲ್ಲಿ ಹಿರಿಯರಾದ ಪ್ರಥಮ ಪಿಯು ವಿದ್ಯಾರ್ಥಿಗಳ ತರಗತಿ ಆರಂಭಿಸಲು ಹಿಂದೇಟು ಹಾಕುತ್ತಿದೆ. ರಾಜ್ಯದಲ್ಲಿ ಈಗಾಗಲೇ ಖಾಸಗಿ ಕಾಲೇಜುಗಳು ಪ್ರಥಮ ಪಿಯು ತರಗತಿಗಳನ್ನು ಕಳೆದ ಮೂರು ವಾರಗಳಹಿಂದೆ ಆರಂಭ ಮಾಡಿವೆ. ಸರ್ಕಾರ ಪಪೂ ಕಾಲೇಜುಗಳಲ್ಲಿ ಸರಕಾರ ದ್ವಿತೀಯ ಪಿಯು ತರಗತಿ ಮಾತ್ರ ಆರಂಭಿಸಿ ಪ್ರಥಮ ಪಿಯು ತರಗತಿ ಪ್ರಾರಂಭಿಸದೇ ಇರುವುದು ತಾರತಮ್ಯ ನೀತಿಗೆ ಸಾಕ್ಷಿಯಾಗಿದೆ.

ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಅನ್ಯಾಯ: ಖಾಸಗಿ ಕಾಲೇಜಿನವರು ದ್ವಿತೀಯ ಪಿಯು ಜತೆ ಪ್ರಥಮ ಪಿಯು ತರಗತಿಗಳನ್ನು ಈಗಾಗಲೇ ಆರಂಭಿಸಿದ್ದು, ಸರಕಾರಿ ಜೂನಿಯರ್‌ ಕಾಲೇಜುಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಭಾರೀ ಅನ್ಯಾಯವಾಗುತ್ತಿದೆ. ಈಗಾಗಲೇ ರಾಜ್ಯದಲ್ಲಿ ಪದವಿ ಸ್ನಾತಕೋತ್ತರ ತರಗತಿಗಳನ್ನು ವಿಶ್ವವಿದ್ಯಾಲಯಗಳು ಕೋವಿಡ್‌-19 ಮಾರ್ಗಸೂಚಿ ಅನ್ವಯ ಆರಂಭ ಮಾಡಿವೆ.ಕೋವಿಡ್ ಪ್ರಕರಣಗಳು ರಾಜ್ಯದಲ್ಲಿ ಕಡಿಮೆಯಾಗುತ್ತಿವೆ. ಸಿನೆಮಾ ಮಂದಿರಗಳು, ಸಂತೆ, ಜಾತ್ರೆ, ಕೆಎಸ್‌ಆರ್‌ ಟಿಸಿ ಬಸ್‌ಗಳ ಸಂಚಾರ ಎಲ್ಲವೂ ನಡೆದಿದ್ದರೂ ಪ್ರಥಮ ಪಿಯು ತರಗತಿ ಆರಂಭಕ್ಕೆ ಸರಕಾರ ಎಸ್‌ಒಪಿ ಮಾರ್ಗಸೂಚಿಯಂತೆ ಅನುಮತಿ ನೀಡಬೇಕಿದೆ

ಕೆ.ನಿಂಗಜ್ಜ

Advertisement

Udayavani is now on Telegram. Click here to join our channel and stay updated with the latest news.

Next