Advertisement

ಉಕ್ರೇನ್ ನಿಂದ ಬಂದವರ ಶಿಕ್ಷಣ ಮುಂದುವರೆಯಲು ಮೊದಲ ಆದ್ಯತೆ : ಡಾ. ಸುಧಾಕರ್

03:58 PM Mar 21, 2022 | Team Udayavani |

ವಿಧಾನಸೌಧ: ಉಕ್ರೇನ್ ನಿಂದ ವಾಪಸ್ ಬಂದ ವಿದ್ಯಾರ್ಥಿಗಳ ಜೊತೆಗೆ ಆರೋಗ್ಯ ಸಚಿವ ಡಾ.ಸುಧಾಕರ್ ಅವರೌ ಸೋಮವಾರ ಮಹತ್ವದ ಸಭೆ ನಡೆಸಿದರು.

Advertisement

ಸಭೆಯ ಬಳಿಕ ಮಾತನಾಡಿದ ಸಚಿವ ಸುಧಾಕರ್‌, ಉಕ್ರೇನ್ ನಿಂದ ವಾಪಸ್ ಬಂದ ಸಾಕಷ್ಟು ಸಾಕಷ್ಟು ವಿದ್ಯಾರ್ಥಿಗಳು ಇಂದಿನ ಸಭೆಯಲ್ಲಿ ಭಾಗವಹಿಸಿದ್ದರು. ಸಿಎಂ ಸೂಚನೆ ಮೇರೆಗೆ ಸಭೆ ನಡೆಸಲಾಗಿದ್ದು, ವಿದ್ಯಾರ್ಥಿಗಳ ಕಲಿಕೆ ಮುಂದುವರೆಯಬೇಕು, ಅದಕ್ಕೆ ನಮ್ಮ ಮೊದಲ ಆದ್ಯತೆ ಎಂದರು.

ವಿದ್ಯಾರ್ಥಿಗಳು ಶೈಕ್ಷಣಿಕ ವಿಚಾರವಾಗಿ ಚರ್ಚೆ ನಡೆದಿದ್ದು, ಕರ್ನಾಟಕದಲ್ಲಿ ಸದ್ಯಕ್ಕೆ ಇರುವ ಮೆಡಿಕಲ್ ಕಾಲೇಜು ಶಿಕ್ಷಣ ಮುಂದುವರೆಯಲಿದೆ. ಕೇಂದ್ರ ಸರಕಾರದ ಜತೆಗೆ ಚರ್ಚೆ ಮಾಡುತ್ತೇವೆ. ಈಗಾಗಲೇ ಪ್ರಧಾನಿ ಕೂಡ ಇದೇ ವಿಚಾರಕ್ಕೆ ಸಭೆ ನಡೆಸಿದ್ದಾರೆ. ಇದಕ್ಕೆ ಅಂತಹ ಒಂದು ಸಮಿತಿ ರಚನೆ ಆಗಲಿದೆ. ಉಕ್ರೇನ್ ನಿಂದ ವಾಪಸ್ ಕರೆದುಕೊಂಡು ಬರುವ ವಿಚಾರದಲ್ಲಿ ಕೇಂದ್ರ ಸರ್ಕಾರದ ನೆರವು ನೀಡಿದೆ ಎಂದರು.

ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಸಹ ಮುಖ್ಯ, ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ರಾಜ್ಯದಲ್ಲಿ ಭವಿಷ್ಯದ ರೂಪಿಸುವ ಕೆಲಸ ಆಗಲಿದೆ. ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚನೆ ಆಗಲಿದೆ. ನಾಲ್ಕು ಜನ ಡಿನ್ ಗಳು ಸಹ ಸಮಿತಿಯಲ್ಲಿ ಇರಲಿದ್ದಾರೆ. ವಿದ್ಯಾರ್ಥಿಗಳು ಈಗ ಇಟ್ಟಿರುವ ಮುಖ್ಯ ಬೇಡಿಕೆ ಅಂದರೆ ತಕ್ಷಣ ಕಲಿಕೆ ಮುಂದುವರೆಸುವ ಬಗ್ಗೆ ಹೆಚ್ಚು ಆಸಕ್ತಿ ತೋರಿಸಿದ್ದಾರೆ. ಯಾವುದೇ ಕಾರಣಕ್ಕೂ ಈಗ ವಿದ್ಯಾಭ್ಯಾಸ ನಿಲ್ಲಬಾರದು ಅಂತ ಮನವಿ ಮಾಡಿಕೊಂಡಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next