Advertisement

ರಾಜ್ಯದ ರೈತರಿಗೆ ಮೊದಲ ಆದ್ಯತೆ: ಬೋಡೆ

01:33 PM Aug 10, 2019 | Team Udayavani |

ಮುಂಬಯಿ, ಆ. 9: ಮಹಾಬೀಜ ಬೀಜೋತ್ಪಾದನಾ ಯೋಜನೆಯ ಅಡಿಯಲ್ಲಿ ರಾಜ್ಯದ ರೈತ ಉತ್ಪಾದನಾ ಕಂಪೆನಿಗಳಿಗೆ ಆದ್ಯತೆ ನೀಡಬೇಕು. ಬೀಜಗಳ ಗುಣ ಮಟ್ಟವನ್ನು ಕಾಪಾಡಿಕೊಂಡು ರೈತರ ಉತ್ಪಾದನಾ ಕಂಪೆನಿ ಗಳ ಭಾಗವಹಿಸುವಿಕೆಗಾಗಿ ಮತ್ತೂಮ್ಮೆ ಜಾಹೀರಾತು ಪ್ರಕಟಿಸಿ ಅರ್ಜಿಸಲ್ಲಿಸುವಂತೆ ಆಹ್ವಾನ ಮಾಡಬೇಕು ಎಂದು ಸಚಿವ ಅನಿಲ್ ಬೊಂಡೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Advertisement

ಮಹಾರಾಷ್ಟ್ರ ರಾಜ್ಯ ಬೀಜ ನಿಗಮದ ಪರಿಶೀಲನಾ ಸಭೆ ಸಚಿವಾಲಯದಲ್ಲಿ ಆಯೋಜಿಸಲಾಯಿತು. ರಾಜ್ಯದ 40,000 ರೈತರ ಮೂಲಕ ಸುಮಾರು 3.03 ಲಕ್ಷ ಎಕರೆ ಭೂಮಿಯಲ್ಲಿ ಬೀಜ ಉತ್ಪಾದನೆ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ. ಸರಿಯಾದ ಸಮಯದಲ್ಲಿ ರೈತರಿಗೆ ಉತ್ತಮ ಗುಣಮಟ್ಟದ ಬೀಜಗಳನ್ನು ಸಮಂಜಸವಾದ ದರದಲ್ಲಿ ಒದಗಿಸುವುದು ಮಹಾಬೀಜದ ಉದ್ದೇಶವಾಗಿದೆ. ಹೊಲದಿಂದ ಬೀಜಗಳನ್ನು ಉತ್ಪಾದನೆ ಆಗದೆ ನಷ್ಟ ಉಂಟಾದರೆ ಅಂತಹ ರೈತರಿಗೂ ಪರಿಹಾರ ಸಿಗುತ್ತದೆ.

ರೈತರಿಗೆ ಗುಣಮಟ್ಟದ ಬೀಜಗಳನ್ನು ಒದಗಿಸಲು ಮತ್ತು ರೈತರಿಗೆ ಆಗುತ್ತಿರುವ ವಂಚನೆಯನ್ನು ತಡೆಯಲು ಬೀಜ ಉತ್ಪಾದಿಸಬೇಕು. ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಉತ್ಪನ್ನಗಳನ್ನು ಪಡೆಯಲು ವಿಶಾಲ ನೀರಾವರಿ ವ್ಯವಸ್ಥೆ (ಬಿಬಿಎಫ್‌) ನಂತಹ ಉತ್ತಮ ಕೃಷಿ ಪದ್ಧತಿಗಳ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕು ಎಂದರು.

ಬೀಜ ಬಳಸುವಾಗ ಇದರಲ್ಲಿ ಉತ್ತಮ ಬೆಳೆ ಪಡೆಯುವ ಕುರಿತು ಬೀಜಗಳ ಪ್ಯಾಕೇಟುಗಳ ಮೇಲೆ ಮಾರ್ಗದರ್ಶಿ ಸೂತ್ರಗಳನ್ನು ಹಾಗೆಯೇ ಪ್ರಮಾಣಿತ ಉತ್ಪಾದನೆ ಪದ್ಧತಿ ಇದರ ಬಳಕೆ ಮಾಡುವ ಕುರಿತು, ಇದರ ಜತೆಗೆ ರೈತರಿಗೆ ನೂತನ ಬೀಜ ಬಳಸಲು ಪ್ರೋತ್ಸಾಹ ಹಾಗೂ ಸವಲತ್ತು ನೀಡವ ಬಗ್ಗೆ ಪ್ರಸ್ತಾವ ಸಲ್ಲಿಸಬೇಕು ಎಂದರು.

ರೈತರನ್ನು ಉತ್ತೇಜಿಸುವ ಪ್ರಸ್ತಾವಗಳನ್ನು ಉಲ್ಲೇಖೀಸಲಾಯಿತು. ಮಹಾಬೀಸ್‌ ಷೇರುದಾರರಿಗೆ ಪಾವತಿಸುವ ಲಾಭಾಂಶದ ಬಗ್ಗೆಯೂ ಚರ್ಚಿಸಲಾಯಿತು. ಬಂಡವಾಳ ಹೊಂದಿರುವವರಿಗೆ ಗರಿಷ್ಠ ಲಾಭ ನೀಡಲು ಕ್ರಮ ಕೈಗೊಳ್ಳಬೇಕು ಎಂದರು.

Advertisement

ಸಭೆಯಲ್ಲಿ ಮಹಾಬೀಜದ ವ್ಯವಸ್ಥಾಪಕ ನಿರ್ದೇಶಕ ಅನಿಲ್ ಭಂಡಾರಿ, ಮಹಾಬೀಜ ಜನರಲ್ ಮ್ಯಾನೇಜರ್‌ ಎಸ್‌ಎಂ ಪುಂಡ್ಕರ್‌, ಮಹಾಬೀಜ ಗುಣಮಟ್ಟದ ನಿಯಂತ್ರಣ ವಿಭಾಗದ ಪ್ರಧಾನ ವ್ಯವಸ್ಥಾಪಕ ಪ್ರಫುಲ್ ಲಹಾನೆ, ಕೃಷಿ ಸಹಾಯಕ ಕಾರ್ಯದರ್ಶಿ ಗಣೇಶ್‌ ಪಾಟೀಲ್ ಮತ್ತು ಮಹಾಬೀಜ ಮತ್ತು ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next