Advertisement

ಗ್ರಾಮಗಳ ಅಭಿವೃದ್ಧಿಗೆ ಮೊದಲ ಆದ್ಯತೆ

01:36 PM Jun 05, 2018 | Team Udayavani |

ವಡಗೇರಾ: ಗ್ರಾಮಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಹಾಗೂ ಅವುಗಳನ್ನು ಅಭಿವೃದ್ಧಿ ಪಡಿಸುವುದು ನನ್ನ ಮೊದಲ ಆದ್ಯತೆಯಾಗಿದೆ ಎಂದು ಶಾಸಕ ವೆಂಕಟರೆಡ್ಡಿ ಮುದ್ನಾಳ ಹೇಳಿದರು.

Advertisement

ತಾಲೂಕಿನ ಗುಲಸರಂ, ಹುಲಕಲ್‌, ಮಲಹಳ್ಳಿ, ಉಳ್ಳೆಸೂಗೂರು, ತೇಕರಾಳ, ಬೀರನಕಲ್‌ ತಾಂಡಾ, ಕಂಠಿ ತಾಂಡಾ, ಗೊಂದೆನೂರ, ಕೋನಹಳ್ಳಿ, ಗ್ರಾಮದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ನಾನು ಯಾದಗಿರಿ ಮತಕ್ಷೇತ್ರಕ್ಕೆ ಹೊಸಬ, ಇದಕ್ಕೂ ಮುಂಚೆ ನಾನು ಗುರಮಿಠಕಲ್‌ ಮತಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದೆ. ಪಕ್ಷದ ತೀರ್ಮಾನದ ಮೇರೆಗೆ ಯಾದಗಿರಿ ಮತಕ್ಷೇತ್ರದಿಂದ ಸ್ಪರ್ಧಿಸಿ ಕೇವಲ ಇಪ್ಪತ್ತು ದಿನ ಪ್ರಚಾರ ಮಾಡಿದಂತಾದರು ಸಹ ತಾವು ನನ್ನ ಮೇಲೆ ಭರವಸೆ ಇಟ್ಟು ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದ್ದಿರಿ. ಆದ್ದರಿಂದ ನಾನು ನಿಮಗೆ ಆಭಾರಿಯಾಗಿದ್ದೇನೆ ಎಂದರು. 

ಯಾದಗಿರಿ ತಾಲೂಕು ಶೈಕ್ಷಣಿಕವಾಗಿ ತೀರಾ ಹಿಂದುಳಿದಿದೆ. ಇದಕ್ಕೆ ಮುಖ್ಯ ಕಾರಣ ಶಾಲೆಯಲ್ಲಿ ಶಿಕ್ಷಕರ ಕೊರತೆ, ಇದನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ, ಆದಷ್ಟು ಬೇಗ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಮಲಹಳ್ಳಿ ಮತ್ತು ತೇಕರಾಳ ಗ್ರಾಮಸ್ಥರು ಪ್ರತ್ಯೇಕ ನ್ಯಾಯ ಬೆಲೆ ಅಂಗಡಿಯ ಬಗ್ಗೆ ಮನವಿಯನ್ನು ಮಾಡಿಕೊಂಡಾಗ ಅಧಿಕಾರಿಗಳ ಜೊತೆ ಚರ್ಚಿಸಿ ಎರಡು ಗ್ರಾಮಗಳಿಗೆ ಪ್ರತ್ಯೇಕ ನ್ಯಾಯಬೆಲೆ ಅಂಗಡಿಯನ್ನು ಮಂಜೂರು ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

Advertisement

ಮಾಜಿ ಜಿಪಂ ಸದಸ್ಯ ಖಂಡಪ್ಪ ದಾಸನ್‌ ಮಾತನಾಡಿ, ಸಾರ್ವಜನಿಕರ ಸಮಸ್ಯೆಗಳಿಗೆ ಸದಾ ಸ್ಪಂದಿಸುವಂತ ದಿನದ ಇಪ್ಪತ್ನಾಲ್ಕು ಗಂಟೆ ಕೆಲಸ ಮಾಡುವಂತ ಶಾಸಕರು ನಮಗೆ ಸಿಕ್ಕಿದ್ದಾರೆ. ಯಾವುದೇ ಸಮಸ್ಯೆಗಳು ಇದ್ದರು ಸಹ ನೂತನ ಶಾಸಕರು ಅದನ್ನು ಬಗೆಹರಿಸುತ್ತಾರೆ ಎಂದು ಹೇಳಿದರು.
 
ಈ ವೇಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಸಿದ್ದಣ್ಣಗೌಡ ಕಾಡಂನೋರ, ಜಿಪಂ ಮಾಜಿ ಸದಸ್ಯ ಶ್ರೀನಿವಾಸರೆಡ್ಡಿ ಚನ್ನೂರ, ದೇವರಾಜ ನಾಯಕ, ಶಂಕ್ರಣ್ಣ ಸಾಹು ಕರಣಗಿ, ನಿಂಗಯ್ಯ ಕೊಂಕಲ್‌, ಬಸರಾಜಪ್ಪ ಗೌಡ, ರಾಜಶೇಖರ ಕಾಡಂನೋರ, ಡಾ| ಮರೆಪ್ಪ ನಾಟೇಕಾರ, ಗೋವಿಂದ ಖಾನಾಪೂರ, ಶಿವಕುಮಾರ ಕೊಂಕಲ್‌, ನಾರಾಯಣ ಅಂಗಡಿ, ಸುಭಾಷ ಹೂಗಾರ, ದೇವು ಜಡಿ, ಇಮಾಮ ಪಟೇಲ್‌, ಸಾಬಣ್ಣ ಕಲ್ಲಪ್ಪನೋರ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next