Advertisement

12 ವರ್ಷದ ಬಳಿಕ ಭೀಮಾ ನದಿಯಲ್ಲಿ ಪುಷ್ಕರ ಸಂಭ್ರಮ

10:11 AM Oct 13, 2018 | Team Udayavani |

ಯಾದಗಿರಿ: ಪುಷ್ಕರ ವೇಳೆ ನದಿಯಲ್ಲಿ ಪುಣ್ಯ ಸ್ನಾನದಿಂದ ಸಕಲ ಇಷ್ಟಾರ್ಥಗಳು ಈಡೇರುತ್ತವೆ ಎಂದು ಅಬ್ಬೆ ತುಮಕೂರಿನ ಸಿದ್ಧ ಸಂಸ್ಥಾನದ ಪೀಠಾಧಿಪತಿ ಡಾ| ಗಂಗಾಧರ ಸ್ವಾಮೀಜಿ ಹೇಳಿದರು.

Advertisement

ಶುಕ್ರವಾರ ಜಿಲ್ಲಾ ಕಮ್ಮ ಜನಸೇವಾ ಸಮಿತಿ ನಗರದ ಹೊರವಲಯದ ಭೀಮಾನದಿಯ ಗುಲಸರಂ ಸೇತುವೆ ಬಳಿ ಹಮ್ಮಿಕೊಂಡ ಪುಷ್ಕರಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದ ಅವರು, 12 ವರ್ಷಗಳಿಗೊಮ್ಮೆ ಬರುವ ಪುಷ್ಕರ ಈ ಬಾರಿ ಭೀಮಾನದಿಗೆ ಪ್ರವೇಶವಾಗಿರುವುದು ನಮ್ಮೆಲ್ಲರ ಸುದೈವ. ನೆರೆಯ ತೆಲಂಗಾಣ ಹಾಗೂ ಆಂಧ್ರಪ್ರದೇಶದ ಕಮ್ಮ ಹಾಗೂ ರಡ್ಡಿ ಬಳಗದ ರೈತರು ನದಿ ತೀರದ ಭಾಗಗಳಿಗೆ ವಲಸೆ ಬಂದು ಇಲ್ಲಿರುವ ಭೂಮಿಯಲ್ಲಿ ಪರಿಶ್ರಮದಿಂದ ಕಾಯಕ ಮಾಡಿ ಕೃಷಿಯಲ್ಲಿ ಅಪಾರ ಬದಲಾವಣೆ ತರುವುದನ್ನು ತೋರಿಸಿಕೊಟ್ಟಿದ್ದಾರೆ. ಇದರಿಂದ ದೇಶದ ಆಹಾರ ಉತ್ಪನ್ನ ಕೂಡ ಹೆಚ್ಚಾಗಿದೆ ಎಂದರು.

ಪುಷ್ಕರ ವೇಳೆ ಪ್ರತಿನಿತ್ಯ ನಾರಾಯಣ, ಸೂರ್ಯ, ಭೀಮಾ ಪೂಜೆ ಸೇರಿದಂತೆ ಸಕಲ ದೈವ ಪೂಜೆಗಳನ್ನು ನೆರವೇರಿಸುವುದರ ಜೊತೆಗೆ ಪುಣ್ಯ ಸ್ನಾನದ ಬಳಿಕ ಹೋಮ ಹವನ ಮಾಡುವುದುಲ್ಲದೇ ಹಿರಿಯರ ಆತ್ಮ ಶಾಂತಿಗಾಗಿ ಪಿಂಡ ಪ್ರದಾನದಂತಹ ಹಲವು ಕಾರ್ಯಗಳು ನೆರವೇರಲಿದೆ ಎಂದು ಪುರೋಹಿತ ಸತ್ಯನಾರಾಯಣ ಶರ್ಮಾ ವಿವರಿಸಿದರು.

ಪ್ರಭಾಕರ ಸ್ವಾಮೀಜಿ, ಸಂಸದ ಬಿ.ವಿ. ನಾಯಕ್‌, ಶಾಸಕ ಶರಣಬಸಪ್ಪಗೌಡ ದರ್ಶನಾಪುರ, ಶಾಸಕ ವೆಂಕಟರೆಡ್ಡಿ
ಮುದ್ನಾಳ, ಡಾ.ವೀರಬಸಂತರಡ್ಡಿ ಮುದ್ನಾಳ, ಭೀಮರಡ್ಡಿ ಕೂಡೂರ, ಶಾಂತರಡ್ಡಿ ದೇಸಾಯಿ, ಲೀಲಾಕೃಷ್ಣ, ಪೂರ್ಣಬಾಬು, ಪ್ರಸಾದ, ಶರಣಗೌಡ ಕಾಳೆಬೆಳಗುಂದಿ, ಉಮಾರಡ್ಡಿ ನಾಯ್ಕಲ್‌, ಪರಮಶ್ವರ, ಕೋಟೇಶ್ವರರಾವ್‌, ಆರ್‌. ಮಹಾದೇವಪ್ಪ ಅಬ್ಬೆತುಮಕೂರ, ಎಸ್‌.ಎನ್‌. ಮಿಂಚಿನಾಳ. ಲಲಿತಾ ಅನಪುರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next