Advertisement

ಮೊದಲ ಪ್ಲಾಸ್ಮಾ ಚಿಕಿತ್ಸೆ ಯಶಸ್ವಿ : ಕೋವಿಡ್ ಯುದ್ಧ ಗೆದ್ದ ದಿಲ್ಲಿ ಮೂಲದ ವ್ಯಕ್ತಿ

01:00 PM Apr 27, 2020 | sudhir |

ದೇಶದಲ್ಲೇ ಮೊದಲ ಬಾರಿಗೆ ಪ್ಲಾಸ್ಮಾ ಚಿಕಿತ್ಸೆಯನ್ನು ಪಡೆದಿದ್ದ ದಿಲ್ಲಿಯ 49 ವರ್ಷದ ಕೋವಿಡ್ ರೋಗಿ, ಕಾಯಿಲೆಯಿಂದ ಸಂಪೂರ್ಣ ಗುಣ ಮುಖರಾಗಿ ಮನೆಗೆ ಮರಳಿದ್ದಾರೆ. ಏ. 4ರಂದು ಪೂರ್ವ ದಿಲ್ಲಿಯಲ್ಲಿರುವ ಮ್ಯಾಕ್ಸ್‌ ಆಸ್ಪತ್ರೆಗೆ ಕೋವಿಡ್ ಗುಣಲಕ್ಷಣಗಳನ್ನು ಹೊಂದಿದ್ದ ಈ ವ್ಯಕ್ತಿ ದಾಖಲಾಗಿದ್ದರು. ಆದರೆ, ದಿನ ಕಳೆದಂತೆ ಅವರ ಆರೋಗ್ಯ ಹದಗೆಟ್ಟು ನ್ಯುಮೋನಿಯಾಕ್ಕೆ ತುತ್ತಾದರು. ನಂತರ, ಇವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು.

Advertisement

ಕುಟುಂಬದ ಮನವಿ: ವ್ಯಕ್ತಿಯ ಕುಟುಂಬವು ಆಸ್ಪತ್ರೆಯ ವೈದ್ಯರ ಬಳಿ, “ಸಹಾನುಭೂತಿ’ ಆಧಾರದಲ್ಲಿ ಪ್ಲಾಸ್ಮಾ ಚಿಕಿತ್ಸೆಯನ್ನು ನೀಡುವಂತೆ ಮನವಿ ಮಾಡಿದರು. ಹಾಗಾಗಿ, ಮೂರು ವಾರಗಳ ಹಿಂದೆ ಕೋವಿಡ್ ದಿಂದ ಗುಣಮುಖರಾಗಿದ್ದ ಮಹಿಳಾ ದಾನಿಯೊಬ್ಬರಿಂದ ರಕ್ತವನ್ನು ಪಡೆದು ಅದರಿಂದ ಪ್ಲಾಸ್ಮಾವನ್ನು ಬೇರ್ಪಡಿಸಿ ನೀಡಲಾಗಿತ್ತು. ಪ್ಲಾಸ್ಮಾ ವನ್ನು ಪಡೆದು ದಿನಗಳೆದಂತೆ ಚೇತರಿಸಿಕೊಂಡರು.

ವೈದ್ಯರ ಶ್ಲಾಘನೀಯ ಕೆಲಸ
ಲಕ್ನೋದ ಕಿಂಗ್‌ ಜಾಜ್‌Õì ಮೆಡಿಕಲ್‌ ಯುನಿವರ್ಸಿಟಿಯ ವೈದ್ಯ ತೌಸೀಫ್ ಖಾನ್‌ ಸೋಂಕಿತರಿಗೆ ಪ್ಲಾಸ್ಮಾ ದಾನ ಮಾಡಲು ಮುಂದಾಗಿದ್ದಾರೆ. ಮಾ.17ರಂದು ಅವರಿಗೆ ಸೋಂಕು ದೃಢಪಟ್ಟಿತ್ತು. ಅವರು ಚಿಕಿತ್ಸೆ ಪಡೆದು ಏ.7ರಂದು ಡಿಸಾcರ್ಜ್‌ ಆಗಿದ್ದರು. ಹೀಗಾಗಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಗುಣಮುಖರಾದವರ ಪ್ಲಾಸ್ಮಾ ಕಣಗಳು ಕೋವಿಡ್ ಸೋಂಕಿತರ ಚಿಕಿತ್ಸೆಗೆ ಪರಿಣಾಮಕಾರಿಯಾಗಿ ಬಳಕೆಯಾಗುತ್ತಿವೆ. ಅವರನ್ನು ತಪಾಸಣೆಗೆ ಒಳಪಡಿಸಿದಾಗ ಅವರ ಪ್ಲಾಸ್ಮಾ ಕಣಗಳಲ್ಲಿ ಜೀವ ನಿರೋಧಕಗಳು ಉತ್ತಮ ಮಟ್ಟದಲ್ಲಿ ಇರುವುದು ಖಚಿತಪಟ್ಟಿದೆ. ಅವರ ದೇಹದಿಂದ ಪ್ಲಾಸ್ಮಾ ಪಡೆದು ಇಬ್ಬರು ರೋಗಿಗಳಿಗೆ ನೀಡಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next