Advertisement

ಮೊದಲ ಏಕದಿನ: ಆಫ್ರಿಕಾಕ್ಕೆ 8 ವಿಕೆಟ್‌ ಜಯ

03:45 AM Jan 30, 2017 | Team Udayavani |

ಪೋರ್ಟ್‌ ಎಲಿಜಬೆತ್‌: ಎಡಗೈ ವೇಗಿ ವೇಯ್ನ ಪಾರ್ನೆಲ್‌ ಹಾಗೂ ಸ್ಪಿನ್ನರ್‌ ಇಮ್ರಾನ್‌ ತಾಹಿರ್‌ ದಾಳಿಗೆ ಕುಸಿದ ಶ್ರೀಲಂಕಾ ಪೋರ್ಟ್‌ ಎಲಿಜಬೆತ್‌ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಕ್ಕೆ 8 ವಿಕೆಟ್‌ಗಳ ಭಾರೀ ಅಂತರದಿಂದ ಶರಣಾಗಿದೆ.

Advertisement

ಶನಿವಾರ ಇಲ್ಲಿನ “ಸೇಂಟ್‌ ಜಾರ್ಜ್‌ಸ್‌ ಪಾರ್ಕ್‌ ಸ್ಟೇಡಿಯಂ’ನಲ್ಲಿ ಬ್ಯಾಟಿಂಗಿಗೆ ಇಳಿಸಲ್ಪಟ್ಟ ಶ್ರೀಲಂಕಾ 48.3 ಓವರ್‌ಗಳಲ್ಲಿ 181ಕ್ಕೆ ಕುಸಿದರೆ, ದಕ್ಷಿಣ ಆಫ್ರಿಕಾ 34.2 ಓವರ್‌ಗಳಲ್ಲಿ ಎರಡೇ ವಿಕೆಟಿಗೆ 185 ರನ್‌ ಬಾರಿಸಿ ಜಯ ಸಾಧಿಸಿತು.

ಪಾರ್ನೆಲ್‌ ಮತ್ತು ತಾಹಿರ್‌ ತಲಾ 3 ವಿಕೆಟ್‌ ಹಾರಿಸಿದರು. ಚೇಸಿಂಗ್‌ ವೇಳೆ ಹಾಶಿಮ್‌ ಆಮ್ಲ 57, ಫಾ ಡು ಪ್ಲೆಸಿಸ್‌ ಔಟಾಗದೆ 55, ಕ್ವಿಂಟನ್‌ ಡಿ ಕಾಕ್‌ 34, ನಾಯಕ ಎಬಿ ಡಿ ವಿಲಿಯರ್ ಔಟಾಗದೆ 30 ರನ್‌ ಮಾಡಿದರು. ಸರಣಿಯ 2ನೇ ಪಂದ್ಯ ಬುಧವಾರ ಡರ್ಬನ್‌ನಲ್ಲಿ ನಡೆಯಲಿದೆ.

ಸಂಕ್ಷಿಪ್ತ ಸ್ಕೋರ್‌: ಶ್ರೀಲಂಕಾ-48.3 ಓವರ್‌ಗಳಲ್ಲಿ 181 (ಕುಸಲ್‌ ಮೆಂಡಿಸ್‌ 62, ಧನಂಜಯ ಡಿ’ಸಿಲ್ವ 28, ತಾಹಿರ್‌ 26ಕ್ಕೆ 3). ದಕ್ಷಿಣ ಆಫ್ರಿಕಾ 34.2 ಓವರ್‌ಗಳಲ್ಲಿ 185/2 (ಆಮ್ಲ 57, ಡು ಪ್ಲೆಸಿಸ್‌ ಔಟಾಗದೆ 55). ಪಂದ್ಯಶ್ರೇಷ್ಠ: ಇಮ್ರಾನ್‌ ತಾಹಿರ್‌.

Advertisement

Udayavani is now on Telegram. Click here to join our channel and stay updated with the latest news.

Next