Advertisement

ಮೊದಲ ಸಾಹಿತ್ಯ ಸಮ್ಮೇಳನ ಮಸ್ಕಿಯ ಹಿರಿಮೆ

12:46 PM Feb 07, 2021 | Team Udayavani |

ಮಸ್ಕಿ: ಮಸ್ಕಿ ತಾಲೂಕು ಕೇಂದ್ರದಲ್ಲಿ ಮೊದಲ ಬಾರಿಗೆ ಕನ್ನಡ ಸಾಹಿತ್ಯ ಸಮ್ಮೇಳನ ಫೆ.14ರಂದು ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಕಸಾಪ ಅಧ್ಯಕ್ಷ ಘನಮಠದಯ್ಯ ಸಾಲಿಮಠ ಹೇಳಿದರು.

Advertisement

ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕಾರ್ಯಕಾರಿ ಸಮಿತಿಯಲ್ಲಿ ಸಮ್ಮೇಳನದ ಅಧ್ಯಕ್ಷರ ಆಯ್ಕೆಗಾಗಿ 8 ಜನರ ಹೆಸರುಗಳು ಪ್ರಸ್ತಾಪವಾದವು. ಅವುಗಳನ್ನು ಚರ್ಚಿಸಿ ಬಳಗಾನೂರಿನ ವೇ.ಮೂ. ಶರಭಯ್ಯ ಸ್ವಾಮಿ ಗಣಚಾರ ಅವರನ್ನು ಸಮ್ಮೇಳನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಕಸಾಪ ಅಧ್ಯಕ್ಷರು ಪ್ರಕಟಿಸಿದರು.

ಇದು ಮಸ್ಕಿಯಲ್ಲಿ ಹಮ್ಮಿಕೊಳ್ಳುತ್ತಿರುವ ಮೊದಲ ಸಾಹಿತ್ಯ ಸಮ್ಮೇಳನವಾಗಿದ್ದರಿಂದ ಎಲ್ಲರೂ ಕೈ ಜೋಡಿಸಬೇಕು. ಇದು ಮಸ್ಕಿಯ ಹಿರಿಮೆಯೂ ಆಗಿದ್ದು, ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನುಡಿ ತೇರು ಎಳೆಯಲು ಸಹಕಾರ ನೀಡಬೇಕು ಎಂದು ಕೋರಿದರು. ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಮಹಾಂತೇಶ ಮಸ್ಕಿ, ಸಾಹಿತಿ ಗುಂಡುರಾವ್‌ ದೇಸಾಯಿ, ಲಾಂಚನ ತಯಾರಿಸಿದ ಕಲಾವಿದ ಸುಗೂರಯ್ಯ ಹಿರೇಮಠ, ಕಸಾಪ ಪದಾ ಧಿಕಾರಿಗಳಾದ ರಂಗಯ್ಯ ಶಟ್ಟಿ, ಅಮರೇಶ ಬ್ಯಾಳಿ, ಹನುಮಂತ ನಾಯಕ, ಮಲ್ಲಿಕಾರ್ಜುನ, ಶ್ರೀಧರ ಬಳ್ಳೋಳ್ಳಿ ಇದ್ದರು.

ಇದನ್ನೂ ಓದಿ:15 ಕೋ.ರೂ. ವೆಚ್ಚದ ಧರ್ಮಸ್ಥಳ ಚತುಷ್ಪಥ ರಸ್ತೆ ಲೋಕಾರ್ಪಣೆಗೊಳಿಸಿದ ಡಿಸಿಎಂ ಕಾರಜೋಳ

ಲಾಂಛನ ಬಿಡುಗಡೆ

Advertisement

ಮಸ್ಕಿ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಚನವನ್ನು ಕಸಾಪ ಗೌರವ ಅಧ್ಯಕ್ಷರು ಹಾಗೂ ಗಚ್ಚಿನ ಹಿರೇಮಠದ ಪೀಠಾ ಧಿಪತಿ ರುದ್ರಮುನಿ ಶಿವಾಚಾರ್ಯರು ಶನಿವಾರ ಬಿಡುಗಡೆ ಮಾಡಿದರು. ತಾಯಿ ಭುವನೇಶ್ವರಿ ಭಾವಚಿತ್ರದ ಜತೆಗೆ ತಾಲೂಕಿನ ಕೃಷಿಜ್ಞಾನ ಪ್ರದೀಪಿಕೆ ರಚಿಸಿದ ಸಂತೆಕೆಲ್ಲೂರಿನ ಘನಮಠ ಶಿವಯೋಗಿ, ಪ್ರಖ್ಯಾತ ಮಸ್ಕಿ ಮಲ್ಲಿಕಾರ್ಜುನ ದೇವರ ರಥ, ಕೋಮು ಸೌಹಾರ್ದದ ಸಂಕೇತ ಹಸಮಕಲ್ಲಿನ ಖಾನ್‌ ಸಾಹೇಬ ದರ್ಗಾ, ಅಶೋಕನ ಶಾಸನ, ಮೂರು ಮುಖದ ಹಂಸಪಕ್ಷಿ, ಮಸ್ಕಿ ಜಲಾಶಯ, ಭತದ ಗದ್ದೆಯ ಚಿತ್ರಗಳನ್ನೊಳಗೊಂಡ ಲಾಂಚನ ಗಮನ ಸೆಳೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next