ನವದೆಹಲಿ: ಮುಂದಿನ ವರ್ಷದ ಡಿಸೆಂಬರ್‌ನಲ್ಲಿ ಮಾನವರನ್ನು ಬಾಹ್ಯಾಕಾಶಕ್ಕೆ ಹೊತ್ತೂಯ್ಯಲಿರುವ “ಗಗನಯಾನ’ ನೌಕೆಯ ಚಿತ್ರಗಳನ್ನು ಇಸ್ರೋ ಶನಿವಾರ ಬಿಡುಗಡೆ ಮಾಡಿದೆ.
ಜತೆಗೆ, ಈ ಯೋಜನೆಗೆ ಅಗತ್ಯವಿರುವ ಮಾನವರಹಿತ ಕಾರ್ಯಾಚರಣೆಯ ಪ್ರಯೋಗವನ್ನು ನಡೆಸಲು ಸಿದ್ಧತೆ ಶುರು ಮಾಡಿದ್ದೇವೆ. ಅಲ್ಲದೆ, ಬಾಹ್ಯಾಕಾಶ ನೌಕೆಯ ಸ್ಥಗಿತ ಯೋಜನೆ-1(ಟಿವಿ-ಡಿ1)ಯ ಪರೀಕ್ಷಾರ್ಥ ಪ್ರಯೋಗಕ್ಕೂ ಸಿದ್ಧತೆ ಆರಂಭಿಸಿದ್ದೇವೆ ಎಂದೂ ಇಸ್ರೋ ಹೇಳಿದೆ.
ಗಗನಯಾನ ಎನ್ನುವುದು, 2-3 ಮಂದಿಯನ್ನು ಬಾಹ್ಯಾಕಾಶಕ್ಕೆ ಹೊತ್ತೂಯ್ದು, ಅವರನ್ನು ಸುರಕ್ಷಿತವಾಗಿ ಭೂಮಿಗೆ ಮರಳಿ ಕರೆತರುವಲ್ಲಿ ಭಾರತದ ಸಾಮರ್ಥ್ಯವನ್ನು ಪ್ರದರ್ಶಿಸುವಂಥ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. 2024ರ ಡಿಸೆಂಬರ್‌ನಲ್ಲಿ ಈ ಗಗನಯಾತ್ರಿಗಳನ್ನು ಹೊತ್ತ ನೌಕೆಯು ನಭಕ್ಕೆ ಚಿಮ್ಮಲಿದೆ. ಅದಕ್ಕೂ ಮುನ್ನ ಹಲವು ಪ್ರಯೋಗಗಳು ನಡೆಯಲಿದ್ದು, ಆ ಪೈಕಿ ಮಾನವರಹಿತ ನೌಕೆಯ ಪರೀಕ್ಷೆ ಹಾಗೂ ನೌಕೆಯ ಸ್ಥಗಿತ ಯೋಜನೆಯ ಪರೀಕ್ಷೆಯೂ ಸೇರಿದೆ.
ಇಸ್ರೋ ಪ್ರಕಾರ, ಮೊದಲ ಟಿವಿ-ಡಿ1(ಡೆವಲಪ್‌ಮೆಂಟ್ ಫ್ಲೈಟ್ ಟೆಸ್ಟ್ ವೆಹಿಕಲ್) ಅಂದರೆ ಪರೀಕ್ಷಾರ್ಥ ವಾಹನವು ಅಬಾರ್ಟ್ ಮಿಷನ್‌ಗಾಗಿಯೇ(ಸ್ಥಗಿತ ಕಾರ್ಯಾಚರಣೆ) ಅಭಿವೃದ್ಧಿಪಡಿಸಲಾದ ಸಿಂಗಲ್-ಸ್ಟೇಜ್ ಲಿಕ್ವಿಡ್ ರಾಕೆಟ್ ಆಗಿದೆ. ಇದರಲ್ಲಿ ಕ್ರೂé ಮಾಡ್ನೂಲ್(ಸಿಎಂ) ಮತ್ತು ಕ್ರೂé ಎಸ್ಕೇಪ್ ಸಿಸ್ಟಂ(ಸಿಇಎಸ್), ಸಿಎಂ ಫೇರಿಂಗ್(ಸಿಎಂಎಫ್) ಮತ್ತು ಇಂಟರ್‌ಫೇಸ್ ಅಡಾಪ್ಟರ್ಸ್ ಎಂಬ ಪೇಲೋಡ್‌ಗಳಿರುತ್ತವೆ. ಪರೀಕ್ಷಾರ್ಥ ಪ್ರಯೋಗದ ವೇಳೆ ಸುಮಾರು 17 ಕಿ.ಮೀ. ಎತ್ತರಕ್ಕೆ ಹೋದಾಗ ನೌಕೆಯಿಂದ ಸಿಎಂ ಜತೆಗೆ ಸಿಇಎಸ್ ಪ್ರತ್ಯೇಕಗೊಳ್ಳುತ್ತವೆ. ಜತೆಗೆ, ಸರಣಿ ಪ್ಯಾರಾಚೂಟ್‌ಗಳು ತೆರೆಯಲ್ಪಡುತ್ತವೆ. ಕೊನೆಗೆ, ಶ್ರೀಹರಿಕೋಟ ಕರಾವಳಿಯಿಂದ ಸುಮಾರು 10 ಕಿ.ಮೀ. ದೂರದಲ್ಲಿ ಸಮುದ್ರದಲ್ಲಿ ಕ್ರೂé ಮಾಡ್ನೂಲ್(ಸಿಎಂ) ಸುರಕ್ಷಿತವಾಗಿ ಇಳಿಯುತ್ತದೆ. ಈ ಮೂಲಕ “ಸ್ಥಗಿತಗೊಳಿಸುವ ಪ್ರಯೋಗ’ ಯಶಸ್ವಿಯಾಗುತ್ತದೆ. ಎಕ್ಸ್ (ಟ್ವಿಟರ್) ಮೂಲಕ ಇಸ್ರೋ ಈ ವಿಚಾರವನ್ನು ತಿಳಿಸಿದೆ.