ಕಾಸರಗೋಡು: ಹಲವು ವರ್ಷ ಗಳಿಂದ ಎದುರು ನೋಡುತ್ತಿದ್ದ ನೀರ್ಚಾ ಲಿನಲ್ಲಿ ಅಗ್ನಿಶಾಮಕ ದಳ ಸ್ಥಾಪನೆ ಸಾಕಾರ ಗೊಂಡಿತೇ ಎಂಬ ಕುತೂಹಲಕ್ಕೆ ಕಾರಣವಾಗಿದೆ. ದಿನಗಳ ಹಿಂದೆ ವಿತ್ತ ಸಚಿವ ಥೋಮಸ್ ಐಸಾಕ್ ಮಂಡಿಸಿದ 2020-21ನೇ ಹಣಕಾಸು ವರ್ಷದ ಮುಂಗಡ ಪತ್ರದಲ್ಲಿ ನೀರ್ಚಾಲು ಅಗ್ನಿಶಾಮಕ ದಳ ಸ್ಥಾಪನೆಗೆ ಒಂದು ಕೋಟಿ ರೂ. ಕಾದಿರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳದ ಬಗ್ಗೆ ಆಶಾಭಾವನೆ ಮೂಡಿದೆ.
2020-21ರ ಕೇರಳ ಬಜೆಟ್‌ನಲ್ಲಿ ನೀರ್ಚಾಲು ಅಗ್ನಿಶಾಮಕ ದಳ ಕೇಂದ್ರ ಕಟ್ಟಡ ನಿರ್ಮಾಣಕ್ಕೆ 1 ಕೋಟಿ ರೂಪಾಯಿ ಟೋಕನ್ ಫಂಡ್ ಮಂಜೂರಾತಿ ದೊರೆತಿದೆ. 10 ವರ್ಷಗಳಿಂದ ವಿವಿಧ ಸಂಘಟನೆಗಳು ನೀರ್ಚಾಲು ಅಗ್ನಿಶಾಮಕ ದಳ ಕೇಂದ್ರ ನಿರ್ಮಾಣಕ್ಕೆ ಬೇಡಿಕೆ ನೀಡುತ್ತಲೇ ಬಂದಿದ್ದರೂ ಈ ವರೆಗೂ ಸಾಧ್ಯವಾಗಿರಲಿಲ್ಲ. ಇದೀಗ ಹಲವು ಇಲಾಖೆಗಳಿಗೆ ಸರಿಯಾದ ಸಮಯಕ್ಕೆ ದಾಖಲೆಗಳನ್ನು ನೀಡಿದುದರ ಫಲವಾಗಿ ಬದಿಯಡ್ಕ ಪಂಚಾಯತ್ ಪ್ರದೇಶಗಳಲ್ಲಿ ಅಗ್ನಿ ದುರಂತ, ಮಳೆಗಾಲದಲ್ಲಿ ಜಲ ದುರಂತಗಳ ನಿವಾರಣೆಗೆ ಆದ್ಯತೆ ನೀಡಿ ಮುಖ್ಯಮಂತ್ರಿಯವರ ಪ್ರತ್ಯೇಕ ಪರಿಗಣನೆಯು ನೀರ್ಚಾಲು ಅಗ್ನಿ ಶಾಮಕ ದಳ ಕೇಂದ್ರ ನಿರ್ಮಾಣಕ್ಕೆ ಅಂಗೀಕಾರವು ಲಭಿಸಿದ್ದು ಶ್ಲಾಘನೀಯವಾಗಿದೆ.
ನೀರ್ಚಾಲು ಅಗ್ನಿಶಾಮಕ ದಳ ಕೇಂದ್ರ ನಿರ್ಮಾಣಕ್ಕೆ ಸ್ಥಳ ಹಾಗೂ ಫಂಡ್ ಮಂಜೂರಾತಿ ಮಾಡಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕಂದಾಯ ಇಲಾಖೆಯ ಸಚಿವ ಇ.ಚಂದ್ರಶೇಖರನ್, ಆರೋಗ್ಯ ಸಚಿವೆ ಕೆ.ಕೆ.ಶೈಲಜಾ, ಹಣಕಾಸು ಸಚಿವಥೋಮಸ್ ಐಸಾಕ್, ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕುನ್ನು, ಅಗ್ನಿಶಾಮಕ ದಳದ ಡಿ.ಜಿ.ಪಿ. ಹೇಮಚಂದ್ರನ್, ಡಿ.ಜಿ.ಪಿ. ಟೋಮಿನ್ ತಚ್ಚಂಗೇರಿ ಮೊದಲಾದವರಿಗೆ ಬದಿಯಡ್ಕ ಗ್ರಾಮ ಪಂಚಾಯತ್ ಯೋಜನಾ ಸಮಿತಿ ಸದಸ್ಯ ಎಂ.ಎಚ್. ಜನಾದìನ ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ಉಕ್ಕಿನಡ್ಕ ಮೆಡಿಕಲ್ ಕಾಲೇಜು ಅಕಾಡೆಮಿಕ್ ಕಟ್ಟಡ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರಿಗೆ ಬದಿಯಡ್ಕ ಗ್ರಾಮ ಪಂಚಾಯತ್ ಯೋಜನಾ ಸಮಿತಿ ಸದಸ್ಯ ಎಂ.ಎಚ್. ಜನಾರ್ದನ ಅವರು ನೀರ್ಚಾಲು ಅಗ್ನಿಶಾಮಕ ದಳ ಯೋಜನೆಗೆ ಮಂಜೂರಾತಿ ನೀಡಲು ವಿಳಂಬವಾಗುವ ಬಗ್ಗೆ ಮರು ಮನವಿ ಮಾಡಿರುವುದು ಸ್ಮರಣೀಯವಾಗಿದೆ.
ಆರು ತಿಂಗಳ ಹಿಂದೆ ಕಂದಾಯ ಸಚಿವರಾದ ಇ. ಚಂದ್ರಶೇಖರನ್ ಅವರ ಪೆರುಂಬಳ ವಸತಿಯಲ್ಲಿ ಬದಿಯಡ್ಕ ಪಂಚಾಯತ್ ಅಧ್ಯಕ್ಷ ಕೆ.ಎನ್. ಕೃಷ್ಣ ಭಟ್ ಜತೆಯಾಗಿ ಗಂಟೆಗಳ ಕಾಲ ಚರ್ಚಿಸಿದಾಗ ಸಚಿವರು ನೀರ್ಚಾಲು ಅಗ್ನಿಶಾಮಕ ದಳ ಕೇಂದ್ರ ಸ್ಥಾಪಿಸಲು 2 ಎಕ್ರೆ ಸ್ಥಳ ಹಾಗೂ ಫಂಡ್ ನೀಡುವ ಭರವಸೆ ಇತ್ತಿದ್ದರು.
2 ಎಕ್ರೆ ಸ್ಥಳ
ನಿರ್ದಿಷ್ಟ ಅಗ್ನಿಶಾಮಕ ದಳ ಕೇಂದ್ರದ 2 ಎಕ್ರೆ ಸ್ಥಳದಲ್ಲಿ 3 ಅಗ್ನಿ ಶಮನ ವಾಹನ ಸಮುತ್ಛಯ, ಸುಸಜ್ಜಿತ ಕಚೇರಿ ಕಟ್ಟಡ, ಸಿಬಂದಿಗೆ ವಸತಿ ಕೇಂದ್ರ, ನಾಗರಿಕರಿಗೆ ದುರಂತ ಗಳಿಂದ ಪಾರಾಗುವ ತರಬೇತಿ ಕೇಂದ್ರ, ವಿಶಾಲವಾದ ಪೆರೇಡ್ ಗ್ರೌಂಡ್, ಜಲ ಸಂಗ್ರಹಕ್ಕೆ ಬೃಹತ್ ಟ್ಯಾಂಕ್, ಸುರಕ್ಷಿತ ಸುತ್ತುಗೋಡೆ, ಇತರ ಅನುಬಂಧ ನಿರ್ಮಾಣ ಕಾರ್ಯಗಳು ಅಗ್ನಿಶಾಮಕ ದಳ ಕೇಂದ್ರ ನಿರ್ಮಾಣದಲ್ಲಿ ಒಳಗೊಂಡಿದೆ.