Advertisement

ಅಗ್ನಿ ಅವಘಡಕ್ಕೀಡಾಗಿದ್ದ ಹಡಗು ಸುರಕ್ಷಿತ ಪ್ರದೇಶಕ್ಕೆ

12:50 AM Sep 06, 2020 | mahesh |

ಹೊಸದಿಲ್ಲಿ: ಶ್ರೀಲಂಕಾದ ಕರಾವಳಿ ಯಲ್ಲಿ ಬೆಂಕಿಗೆ ಆಹುತಿಯಾಗಿದ್ದ ಭಾರತದ ಕಚ್ಚಾತೈಲ ಸಾಗಣೆ ಹಡಗನ್ನು ಸಮುದ್ರದಲ್ಲೇ ಸುರಕ್ಷಿತ ಪ್ರದೇಶಕ್ಕೆ ಎಳೆದು ತರಲಾಗಿದೆ. ಭಾರತೀಯ ಕರಾವಳಿ ಭದ್ರತಾ ಪಡೆಗಳು (ಐಸಿಜಿ) ಹಾಗೂ ಶ್ರೀಲಂಕಾ ನೌಕಾಪಡೆ ಜಂಟಿ ಯಾಗಿ ರಕ್ಷಣಾ ಕಾರ್ಯ ಕೈಗೊಂಡಿದ್ದು, “ನ್ಯೂ ಡೈಮಂಡ್‌’ ಹಡಗಿನಲ್ಲಿದ್ದ 23 ಸಿಬಂದಿ ಪೈಕಿ 22 ಮಂದಿಯನ್ನು ರಕ್ಷಿಸಲಾಗಿದೆ. ಬೆಂಕಿಯ ಪ್ರಮಾಣ ತಗ್ಗಿದ್ದು, ಸದ್ಯಕ್ಕೆ ತೈಲದ ಸೋರಿಕೆ ನಿಂತಿದೆ. ಬೆಂಕಿ ಆರಿಸುವ ಕಾರ್ಯಾಚರಣೆ ಮುಂದು ವರಿದಿದೆ ಎಂದು ಐಸಿಜಿ ಟ್ವೀಟ್‌ ಮಾಡಿದೆ.

Advertisement

ಭಾರತೀಯ ತೈಲ ನಿಗಮಕ್ಕೆ (ಐಒಸಿ) ಸೇರಿದ ಇಂಧನ ಸಾಗಣೆ ಹಡಗಿನಲ್ಲಿ ಶ್ರೀಲಂಕಾದ ಪೂರ್ವ ಕರಾವಳಿಯಲ್ಲಿ ಗುರುವಾರ ಬೆಂಕಿ ಕಾಣಿಸಿಕೊಂಡಿತು.

2.70 ಲಕ್ಷ ಟನ್‌ ಕಚ್ಚಾತೈಲ ತುಂಬಿದ್ದ ಈ ಹಡಗು ಕುವೈಟ್‌ನ ಮಿನಾ ಅಲ್‌ ಅಹ್ಮಾದಿಯಿಂದ ಭಾರತದ ಪಾರಾದೀಪ್‌ ಬಂದರಿಗೆ ಬರುವಾಗ ಅಗ್ನಿ ಅವಘಡ ಸಂಭವಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next