Advertisement
ಗಾಂಧಿಭವನದ ಮಹದೇವ ದೇಸಾಯಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಿಎಂ “ಶಾಲಿನಿ-ಐಎಎಸ್’ಗೆ ಕ್ಲಾéಪ್ ಮಾಡಿದರು. ಮುರಘಾಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸಚಿವರಾದ ಕೆ.ಆರ್. ರಮೇಶ್‌ಕುಮಾರ್, ಆರ್. ರೋಷನ್‌ಬೇಗ್, ವಿಧಾನಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಎಚ್.ಎಂ. ರೇವಣ್ಣ, ಬೆಂಗಳೂರು ವಿವಿ ಕುಲಸಚಿವ ಪ್ರೊ. ಬಿ.ಕೆ. ರವಿ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ. ರಾಜೇಂದ್ರಸಿಂಗ್ ಬಾಬು, ಶಾಲಿನಿ ರಜನೀಶ್, ರಜನೀಶ್ ಗೋಯೆಲ್ ಮತ್ತಿತರರು ಇದಕ್ಕೆ ಸಾಕ್ಷಿಯಾದರು.
Related Articles
Advertisement
ಜನಮುಖೀ ಧೋರಣೆಯೊಂದಿಗೆ ತಳಸಮುದಾಯ, ಅವಕಾಶ ವಂಚಿತ ವರ್ಗಗಳ ಬಗ್ಗೆ ಅಧಿಕಾರಿಗಳಿಗೆ ಕಾಳಜಿ ಮತ್ತು ಬದ್ಧತೆ ಇದ್ದರೆ ಸರ್ಕಾರದ ಯೋಜನೆಗಳು ಯಶಸ್ವಿಯಾಗುತ್ತವೆ. 26 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶಾಲಿನಿ ಅನೇಕ ಇಲಾಖೆಗಳ ಜವಾಬ್ದಾರಿ ನಿರ್ವಹಿಸಿದ್ದಾರೆ. ಸಕರಾತ್ಮಕ ಐಎಎಸ್ ಅಧಿಕಾರಿಗಳಲ್ಲಿ ಶಾಲಿನಿ ರಜನೀಶ್ ಒಬ್ಬರು.– ಸಿದ್ದರಾಮಯ್ಯ, ಮುಖ್ಯಮಂತ್ರಿ ಮರುಘಾಶ್ರೀಗಳಿಂದ ಅಂಗಾಂಗದಾನದ ಪ್ರತಿಜ್ಞೆ
ಬೆಂಗಳೂರು: ಚಿತ್ರದುರ್ಗ ಮುರಘಾ ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಕಾರ್ಯಕ್ರಮದಲ್ಲಿ ನೆರೆದಿದ್ದವರಿಗೆ ಅಂಗಾಂಗದಾನದ ಪ್ರತಿಜ್ಞಾವಿಧಿ ಬೋಧಿಸಿದರು. ಅಲ್ಲದೇ ತಮ್ಮ ಅಂಗಾಂಗ ದಾನದ ಬಗ್ಗೆ ಪ್ರತಿಜ್ಞಾ ಪತ್ರಿಕೆಗೆ ಆನ್‌ಲೈನ್ ಮೂಲಕ ಸಹಮತಿ ಸೂಚಿಸಿದರು. ಬಳಿಕ ಮಾತನಾಡಿದ ಅವರು, “ನಾನು 15 ವರ್ಷಗಳ ಹಿಂದೆಯೇ ನೇತ್ರ ದಾನದ ಘೋಷಣೆ ಮಾಡಿದ್ದೆ. ಅಂಗಾಂಗ ದಾನಕ್ಕೆ ಇಂದು ಪ್ರತಿಜ್ಞೆ ಮಾಡಿದ್ದೇನೆ. ಈಗ ಅಂಗಾಂಗದಾನದ ಅವಶ್ಯಕತೆ ಹೆಚ್ಚಾಗಿದೆ. ಸಾವಿನ ನಂತರ ನಮ್ಮ ಅಂಗಾಂಗಗಳನ್ನು ಇನ್ನೊಬ್ಬರಿಗೆ ದಾನ ಮಾಡುವ ಮೂಲಕ ಸಾರ್ಥಕತೆ ಕಾಣಬೇಕಾಗಿದೆ. ಪುನರ್ಜನ್ಮ ಬಯಸುವವರು ಅಂಗಾಂಗ ದಾನ ಮಾಡಿ ಸಾವಿನ ನಂತರವೂ ಇನ್ನೊಂದು ದೇಹದ ಮೂಲಕ ಜೀವಂತವಾಗಿರಬಹುದು,’ ಎಂದರು.