Advertisement

ಕ್ಷೇತ್ರದಲ್ಲಿರದ ಸಚಿವರಿಗೆ ಜನರ ಕಷ್ಟ ತಿಳಿಯದು

12:42 PM Apr 25, 2018 | |

ಬನ್ನೂರು: ಕ್ಷೇತ್ರದ ಶಾಸಕರಾಗಿ ಹಾಗೂ ಲೋಕೋಪಯೋಗಿ ಸಚಿವರಾಗಿರುವ ಡಾ.ಎಚ್‌.ಸಿ.ಮಹದೇವಪ್ಪ ಇದುವರೆಗೂ ಕ್ಷೇತ್ರದಲ್ಲಿ ಮನೆ ಮಾಡದೇ, ಜನರ ನಡುವೆ ಬೆರೆಯದೆ ಜನರ ಕಷ್ಟ ಹೇಗೆ ತಿಳಿಯುತ್ತದೆ ಎಂದು ಬಿಜೆಪಿ ಅಭ್ಯರ್ಥಿ ಶಂಕರ್‌ ಪ್ರಶ್ನಿಸಿದರು. 

Advertisement

ಪಟ್ಟಣದಲ್ಲಿ ಬಿಜೆಪಿ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಚುನಾವಣೆ ಸಮೀಪವಾದಂತೆ ಜನರಿಗೆ ಅವರ ದರ್ಶನ ಭಾಗ್ಯ ಸಿಗುತ್ತಿದೆ. ಇಂದು ಬದಲಾವಣೆ ತೀರಾ ಅಗತ್ಯವಾಗಿದೆ. ಸುಮಾರು 10 ವರ್ಷಗಳಿಂದ ಆಳ್ವಿಕೆ ಮಾಡುತ್ತ ಕ್ಷೇತ್ರದ ಜನರ ಸಂಪರ್ಕಕ್ಕೆ ಸಿಗದೆ ದೂರದಲ್ಲೆಲ್ಲೋ ಐಷಾರಾಮಿ ಜೀವನದಲ್ಲಿ ತೊಡಗಿರುವ ಮಹದೇವಪ್ಪನವರಿಗೆ ಈ ಭಾರಿ ಚುನಾವಣೆಯಲ್ಲಿ ಸೋಲಿನ ಪಾಠ ಕಲಿಸಬೇಕೆಂದು ತಿಳಿಸಿದರು. 

ಮಾಜಿ ಶಾಸಕಿ ಸುನೀತಾ ಮಾತನಾಡಿ, 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಶಂಕರ್‌ಗೆ ಪ್ರಚಂಡ ಗೆಲುವು ನೀಡುವ ಮೂಲಕ ನರಸೀಪುರ ಕ್ಷೇತ್ರದಲ್ಲಿ ಬಿಜೆಪಿ ಇದೆ ಎನ್ನುವುದನ್ನು ಕ್ಷೇತ್ರದ ಮತದಾರರು ತಿಳಿಸುತ್ತಾರೆಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ನಾಯಕ ಸಮುದಾಯದವರು ಶಂಕರ್‌ರನ್ನು ಅಭಿನಂದಿಸಿದರು. ಬಿಜೆಪಿ ಮುಖಂಡ ರಂಗರಾಜು, ಗೋಪಾಲ್‌, ಮೂಗೂರು ಪ್ರಕಾಶ್‌, ರಾಮಲಿಂಗೇಗೌಡ, ಮೂಗೂರು ಸಿದ್ದರಾಜು, ಅತ್ತಹಳ್ಳಿ ಕೃಷ್ಣೇಗೌಡ, ರಘು, ಶ್ರೀನಿವಾಸ್‌, ಸುರೇಶ್‌, ಕುಳ್ಳಪ್ಪ, ಗುರುಸ್ವಾಮಿ, ಗೋಪಿನಾಥ್‌, ರಂಗರಾಜು, ಕಾರ್‌ ಮಹೇಶ್‌, ಶಾಂತರಾಜು, ಕಂಬುನಾಯಕ್‌, ಸಿದ್ದೇಗೌಡ ಬಿಜೆಪಿ ಕಾರ್ಯಕರ್ತರು, ಮುಖಂಡರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next