ಕೆ.ಆರ್.ಪುರ: ಕ್ಷೇತ್ರದಲ್ಲಿ ಈ ವರೆಗೂ ಮಾಡಿರುವ ಅಭಿವೃದ್ಧಿ ಕಾರ್ಯಗಳೇ ಶ್ರೀರಕ್ಷೆಯಾಗಲಿದೆ ಎಂದು ಕೆ.ಆರ್ ಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಶಾಸಕ ಬೈರತಿ ಬಸವರಾಜು ಹೇಳಿದರು.
ವಿಜಾnನನಗರ ವಾರ್ಡ್ ಮತ್ತು ಎಚ್.ಎ.ಎಲ್ ವಾರ್ಡ್‌ಗಳ ವಿವಿಧ ಬಡಾವಣೆಗಳಿಗೆ ಪಾಲಿಕೆ ಸದಸ್ಯರೊಂದಿಗೆ ಪಾದಯಾತ್ರೆಯ ಮೂಲಕ ಮನೆ ಮನೆಗೆ ತೆರಳಿದ ಅವರು ಬಿರುಸಿನ ಪ್ರಚಾರ, ಮತಯಾಚನೆ ನಡೆಸಿದರು.
ಕ್ಷೇತ್ರದ ವಿಜಾnನನಗರ ವಾರ್ಡ್‌ನಲ್ಲಿ ಮತಯಾಚನೆ ನಡೆಸಿ ಮಾತನಾಡಿ, ಸದಾ ಕಾಲ ಜನರ ಮಧ್ಯೆಯೇ ಇದ್ದು, ಸುಲಭವಾಗಿ ಸಿಗುವ ನಾನು ಜನರ ಸೇವೆಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದು, ದಿನ 24 ಗಂಟೆ ಜನ ಸಂಪರ್ಕದಲ್ಲಿದ್ದೇನೆ, ಜನರ ಸಮಸ್ಯೆಗಳಿಗೆ ನಿತ್ಯ ಸ್ಪಂದಿಸುತ್ತ ಬಂದಿದ್ದೇನೆ. ಈ ಚುನಾವಣೆಯಲ್ಲಿ ಮತ್ತೂಮೆ ಆಶೀರ್ವಾದಿಸಬೇಕೆಂದು ಮತದಾರರಲ್ಲಿ ಮನವಿ ಮಾಡಿದರು.
ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಮಾಡಿದ್ದೇವೆ, ಟಿನ್ ಪಾಕ್ಟರಿ ಜಂಕ್ಷನಲ್ಲಿ ಉಂಟಾಗುತ್ತಿರುವ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಮಾಣಿಕ ಪ್ರಯತ್ನ ಮಾಡಿದ್ದೇನೆ. ಅದರೆ ಕಳೆದ ಬಜೆಟ್‌ನಲ್ಲಿ ತುರ್ತು ಕಾರಣಗಳಿಂದ ಅನುದಾನ ಘೋಷಣೆಯಾಗಿಲ್ಲ, ನೀಲನಕ್ಷೆ ಕೂಡ ಸಿದ್ಧವಾಗಿದೆ, ಇದರ ನಡುವೆಯೂ ವಾಹನ ದಟ್ಟನೆಗೆ ಪರ್ಯಾಯ ಕ್ರಮಗಳನ್ನು ಕೈಗೊಳ್ಳಲಾಗಿದೆ,
ರಾಮಮೂರ್ತಿನಗರ ರೈಲ್ವೆ ಮೇಲ್‌ಸೇತುವೆ ನಿರ್ಮಾಣ,ಹೊರಮಾವು ರೈಲ್ವೇ ಕೆಳಸೇತುವೆ ಕಾಮಗಾರಿ ಪೂರ್ಣ ಹಂತದಲ್ಲಿದೆ. ಕಿರಿದಾದ ರಸ್ತೆಗಳನ್ನು ಅಗಲೀಕರಣ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ರಾಘವೇಂದ್ರ ಸರ್ಕಲ್,ಎನ್.ಆರ್.ಐ ಬಡಾವಣೆ,ಕೆಆರ್ ಪುರ ಸರ್ಕಾರಿ ಆಸ್ಪತ್ರೆ, ವೆಂಗಯ್ಯ ಕೆರೆ ಬಳಿಯಿರುವ ಮುಖ್ಯರಸ್ತೆಗಳಲ್ಲಿ ಟ್ರಾಪಿಕ್ ಸಿಗ್ನಲ್‌ಗಳನ್ನು ಅಳವಡಿಸಲಾಗಿದೆ
ಹೀಗೆ ಸಾಕಷ್ಟು ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದೇನೆ ಎಂದು ತಿಳಿಸಿದರು. ಅಭಿವೃದ್ಧಿ ಕಾರ್ಯಗಳೇ ಕ್ಷೇತ್ರದ ಗೆಲವಿನ ಶ್ರೀರಕ್ಷೆಯಾಗಲಿದೆ ಎಂದರು. ಈ ವೇಳೆ ಪಾಲಿಕೆ ಸದಸ್ಯರಾದ ಎಸ್.ಜಿ.ನಾಗರಾಜು, ಮಂಜುನಾಥ, ಮುಖಂಡರಾಧ ರಾಮಲಕ್ಷ್ಮಣ, ರಮೇಶ್ ಸೇರಿದಂತೆ ಮತ್ತಿತ್ತರರು ಇದ್ದರು.