Advertisement

ಶಾಲೆಗೆ ಹೊರಟಾಗಲೇ ಜ್ವರ ಬರುತ್ತಿತ್ತು!

04:19 PM Jun 19, 2018 | Harsha Rao |

ಸ್ಕೂಲ್‌ ಇರುತ್ತಿದ್ದ ದಿನಗಳಲ್ಲಿ ಬೆಳಗ್ಗೆ 9 ಗಂಟೆಯವರೆಗೂ ನಿದ್ರೆ ಬರುತ್ತಿತ್ತು. ಆದರೆ, ಭಾನುವಾರಗಳಂದು ಬೆಳಗಿನ ಜಾವಕ್ಕೇ ಎಚ್ಚರವಾಗಿಬಿಡುತ್ತಿತ್ತು…

Advertisement

ಮನೆಯ ಉದ್ದಗಲಕ್ಕೂ ಓಡಾಡಿಕೊಂಡೇ ಬೆಳೆದವಳು ನಾನು. ಹೆಚ್ಚಿನ ವೇಳೆ ಒಂದೇ ಕಡೆ ಕೂಡುವುದು ನನ್ನ ಜಾಯಮಾನ ಆಗಿರಲಿಲ್ಲ. ಅದೇ ಕಾರಣಕ್ಕೋ ಏನೋ ನನಗೆ ಶಾಲೆಗೆ ಹೋಗಲಿಕ್ಕೆ ಸ್ವಲ್ಪವೂ ಇಷ್ಟವಿರಲಿಲ್ಲ. ಆದರೆ, ಅಪ್ಪ ಅಮ್ಮ, ಒತ್ತಾಯ ಮಾಡಿ ಕೊನೆಗೂ ಶಾಲೆಗೆ ಹೊರಡಿಸಿಬಿಟ್ಟರು. ಪಕ್ಕದ ಮನೆಯ, ಬೀದಿಯ ಮಕ್ಕಳನ್ನು ತೋರಿಸಿ, “ಅವರೆÇÉಾ ಹೋಗ್ತಾ ಇ¨ªಾರೆ ತಾನೆ? ನೀನು ಕೂಡ ಹೋಗಲೇಬೇಕು’ ಎಂದು ತಾಕೀತು ಮಾಡಿದರು. ಅಷ್ಟು ಹೇಳಿದ ನಂತರವೂ ನಾನು ಹಿಂದೇಟು ಹಾಕಿದಾಗ, ಎರಡೇಟು ಕೊಟ್ಟು “ಸ್ಕೂಲ್‌ಗೆ ಹೋಗಲ್ಲ ಅಂತೀಯಾ? ಹೋಗ್ಲೆàಬೇಕು’ ಎಂದು ಗದರಿಸಿ ಕಳಿಸುತ್ತಿದ್ದರು. ಮನಸ್ಸಿಲ್ಲದ ಮನಸ್ಸಿನಿಂದಲೇ ತರಗತಿಯಲ್ಲಿ ಕೂರುತ್ತಿ¨ªೆ. ಈ ಬಂಧನದಿಂದ ಮುಕ್ತಿ ಪಡೆಯಲು ಹಲವಾರು ಉಪಾಯಗಳನ್ನು ಮಾಡಿ ನೋಡಿದೆ. ಆದರೆ ಅವೆÇÉಾ ನನಗೇ ತಿರುಗು ಬಾಣವಾಗುತ್ತಿದ್ದವು.
ನಂಬಿದ್ರೆ ನಂಬಿ, ಬಿಟ್ರೆ ಬಿಡಿ: ಶಾಲೆಗೆ ಹೋಗುವ ಸಮಯಕ್ಕೆ ಸರಿಯಾಗಿ ನನ್ನ ಮೈ ಬಿಸಿಯಾಗುತ್ತಿತ್ತು. ಕೆಲವೊಮ್ಮೆ ಜ್ವರ ಬಂದುಬಿಡುತ್ತಿತ್ತು. ಕಣ್ಣು ಕೆಂಪಾಗಿ, ಮಂಜಾಗುತ್ತಿತ್ತು. ಆ ಸಂದರ್ಭದ ನನ್ನ ವರ್ತನೆಯಿಂದ ಮನೆಯವರೆಲ್ಲ ಕಂಗಾಲಾಗುತ್ತಿದ್ದರು. ಮಗೂಗೆ ಹುಷಾರಿಲ್ಲ. ಸ್ಕೂಲ್‌ಗೆ ಕಳಿಸೋದು ಬೇಡ ಎಂದು ಅವರು ಹೇಳಿದರೆ ಸಾಕು, ನಾನು ಒಳಗೊಳಗೇ ಉಬ್ಬಿ ಹೋಗುತ್ತಿ¨ªೆ. ಆ ನಂತರದ ಒಂದೇ ಗಂಟೆಯಲ್ಲಿ ಜ್ವರ ಬಿಟ್ಟು ಹೋಗುತ್ತಿತ್ತು. 

ಹೀಗೇ ದಿನವೂ ಆದಾಗ, ಇದೆÇÉಾ ನಾಟಕ ಎಂದು ಅಮ್ಮನಿಗೆ ಗೊತ್ತಾಗಿಹೋಯಿತು. ನಂತರ ಅಮ್ಮನೂ ಬೇರೆಯ ದಾರಿ ಹುಡುಕಿದಳು. ಮೈ ಬಿಸಿಯಾದ ತಕ್ಷಣ, ಸ್ಕೂಲ್‌ಗೆ ಹೋಗುವುದು ಬೇಡ ಅಂದವಳು, ಜ್ವರ ಬಿಟ್ಟ ತಕ್ಷಣ ತಾನೇ ಮುಂದಾಗಿ ನನ್ನನ್ನು ಶಾಲೆಗೆ ಕರೆದೊಯ್ಯುತ್ತಿದ್ದಳು. ಏನೇ ತಿಪ್ಪರಲಾಗ ಹಾಕಿದರೂ, ಅಮ್ಮನಿಂದ ತಪ್ಪಿಸಿಕೊಳ್ಳುವುದು ಸಾಧ್ಯವೇ ಇರಲಿಲ್ಲ.

ಕೆಲವೊಮ್ಮೆ ನನಗೆ ನಿ¨ªೆಯಲ್ಲಿ ಭಯಾನಕ ಕನಸು ಬೀಳುತ್ತಿತ್ತು. ಶಾಲೆಯ ಆವರಣ, ತರಗತಿ, ಶಿಕ್ಷಕರೆಲ್ಲರೂ ಭಯಾನಕವಾಗಿ ಕಾಣುತ್ತಿದ್ದರು. ತರಗತಿಯಲ್ಲಿ ಹಾವು ಇದೆ. ನಾನು ಶಾಲೆಗೆ ಹೋಗುವುದಿಲ್ಲ ಎಂದು ಜೋರಾಗಿ ಕಿರುಚುತ್ತಿ¨ªೆ. ಆಗ ಅಪ್ಪ-ಅಮ್ಮ ನಿ¨ªೆಯಿಂದೆದ್ದು ಸಮಾಧಾನ ಮಾಡುತ್ತಿದ್ದರು. ಸ್ಕೂಲ್‌ ಇರುತ್ತಿದ್ದ ದಿನಗಳಲ್ಲಿ ದಿನಾ ಬೆಳಗ್ಗೆ 9 ಗಂಟೆಯವರೆಗೂ ನಿದ್ರೆ ಮಾಡುತ್ತಿದ್ದೆ. ಆದ್ರೆ ಭಾನುವಾರ ಮಾತ್ರ ಬೆಳಗ್ಗೆ 6 ಗಂಟೆಗೆಲ್ಲಾ ಎಚ್ಚರವಾಗುತ್ತಿತ್ತು. ಚಕ್ಕರ್‌ ಹೊಡೆಯಲಿಕ್ಕೆಂದೇ ನಾನು ಈ ಬಗೆಯ ಆಟ ಆಡುತ್ತಿದ್ದೇನೆ ಎಂದು ಅಮ್ಮನಿಗೆ ಗೊತ್ತಾಗಿ ಹೋಗಿತ್ತು. ನನ್ನ ಪ್ರತಿಯೊಂದು ಪ್ಲಾನನ್ನೂ ಅಮ್ಮ ವಿಫ‌ಲಗೊಳಿಸುತ್ತಿದ್ದಳು. ಪರಿಣಾಮ, ಅದೇ ಸಪ್ಪಗಿನ ಮುಖ ಹೊತ್ತು ಶಾಲೆಗೆ ಹೋಗುತ್ತಿ¨ªೆ.

-ಶುಭಾ ಮಲ್ಲೇಶ್, ಹತ್ತಳ್ಳಿ

Advertisement
Advertisement

Udayavani is now on Telegram. Click here to join our channel and stay updated with the latest news.

Next