Advertisement

“ಹಬ್ಬ ಸಂಪ್ರದಾಯಗಳಿಂದ ಸಮಾಜದಲ್ಲಿ  ಪ್ರಗತಿಯ ಬೆಳಕು’

03:37 PM Apr 11, 2017 | Team Udayavani |

ಕಾಸರಗೋಡು: ಚೈತ್ರ ಮಾಸದ ಶುಕ್ಲ ಪಕ್ಷದ ಪಾಡ್ಯ ತಿಥಿಯಂದು ಬರುವ ಚಾಂದ್ರಮಾನ ಯುಗಾದಿ ಹಬ್ಬವನ್ನು ಪರಸ್ಪರ ಬೇವು ಬೆಲ್ಲವನ್ನು ಹಂಚಿ ನೂತನ 31 ನೇ ಹೇಮಲಂಬಿ ಸಂವತ್ಸರವನ್ನು ಅತ್ಯಂತ ಸಡಗರದಿಂದ ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್‌ ಅಣಂಗೂರು ಉಪಸಂಘದಿಂದ ಸ್ವಾಗತಿಸಲಾಯಿತು. ಬೇವು ಬೆಲ್ಲದ ಹಿಂದಿನ ಮೌಲ್ಯ(ಕಷ್ಟ – ಸುಖ) ವನ್ನು ಪರಸ್ಪರ ಹಂಚಿಕೊಳ್ಳಲಾಯಿತು.

Advertisement

ಹಬ್ಬ ಸಂಪ್ರದಾಯಗಳನ್ನು ಪಾಲಿಸುವುದರಿಂದ ಸಮಾಜದಲ್ಲಿ ಪ್ರಗತಿಯ ಬೆಳಕನ್ನು ಹರಿಸಬಹುದು ಎಂದು ಹಿರಿಯ ಸದಸ್ಯ ಕಮಲಾಕ್ಷ ಅಣಂಗೂರು ಅಭಿಪ್ರಾಯಪಟ್ಟರು. ಜಿಲ್ಲಾ ಸಂಘದಿಂದ ವರ್ಷಂಪ್ರತಿ ನೀಡುವ ಹಬ್ಬದ ಉಡುಗೊರೆಯನ್ನು ಹಿರಿಯ ಮಹಿಳೆಯರಿಗೆ ವಿತರಿಸಲಾಯಿತು. ಉಪಸಂಘದ ಅಧ್ಯಕ್ಷ ಕಮಲಾಕ್ಷ ಕಲ್ಲುಗದ್ದೆ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಸಂಘದ ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾದ ಉಪಸಂಘದ ಸದಸ್ಯ ಲೋಕೇಶ್‌ ಕುಮಾರ್‌ ಮತ್ತು ಇತರ ಜಿಲ್ಲಾ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು.

ಜೋಗೇಂದ್ರನಾಥ್‌, ದಿನೇಶ್‌ ಕೆ, ಪಾಂಡುರಂಗ, ರಾಜೇಶ್‌, ಪ್ರಸನ್ನ ಕುಮಾರ್‌, ಪ್ರಸಾದ್‌ ವಿದ್ಯಾನಗರ, ರಮೇಶ್‌, ರಾಧಾಕೃಷ್ಣ, ಪಾಂಡುರಂಗ ಕೂಡ್ಲು, ನವೀನ್‌ಚಂದ್ರ, ಜಗನ್ನಾಥ, ಬಿ. ಗಂಗಾಧರ, ಧನಂಜಯ, ಬಿ. ಜಗದೀಶ್‌, ಆಶಾ ರಾಧಾಕೃಷ್ಣ, ಭಾರತಿ ಜಗದೀಶ್‌, ನಿರಂಜಿನಿ ರಮೇಶ್‌, ಸಂಧ್ಯಾರಾಣಿ ವಾಮನ ರಾವ್‌ ಮುಂತಾದವರು ಉಪಸ್ಥಿತರಿದ್ದರು. ಹರೀಶ್‌ ಕುಮಾರ್‌ ಕೆ.ಎಸ್‌¬. ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next