Advertisement

ಹಬ್ಬಕ್ಕೆ ಹೊಸದೂಟ ಕುಂದ

03:40 PM Jun 10, 2019 | mahesh |
ಹಬ್ಬ ಬಂತೆಂದರೆ ಮನೆಯಲ್ಲಿ ಇರುವ ಸಾಮಗ್ರಿಗಳನ್ನು ಬಳಸಿ ಯಾವ ಅಡುಗೆ ಮಾಡಬಹುದು ಎಂದು ಯೋಚಿಸುತ್ತೇವೆ. ಕಡಿಮೆ ಸಾಮಗ್ರಿ ಬಳಸಿ ಕಡಿಮೆ ಸಮಯದಲ್ಲಿ ತಯಾರಾಗುವ ಅಡುಗೆಯನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟ ಪಡುತ್ತಾರೆ. ಅದಕ್ಕಾಗಿಯೇ ಮನೆಯಲ್ಲಿ ಸರಳವಾಗಿ ಮಾಡಿಕೊಳ್ಳುವ ಕುಂದ ನಿಮ್ಮ ಮನೆಯವರಿಗೆಲ್ಲ ಇಷ್ಟವಾಗಬಹುದು.
ಮಾಡುವ ವಿಧಾನ
ಒಂದು ಬಾಣಲೆಗೆ ಹಾಲನ್ನು ಹಾಕಿ ದೊಡ್ಡ ಉರಿಯಲ್ಲಿ ಕುದಿಸಿಕೊಳ್ಳಬೇಕು. ಅನಂತರ ಅದು ಸ್ವಲ್ಪ ದಪ್ಪ ಹದ ಬರುವ ವರೆಗೆ ಕುದಿಸಿಕೊಳ್ಳಬೇಕು (ಸುಮಾರು ಅರ್ಧ ಲೀ ಆಗುವ ವರೆಗೆ). ಅನಂತರ ಹದವಾದ ಹಾಲಿಗೆ 1 ಕಪ್‌ ಮೊಸರು ಸೇರಿಸಿ ಇದಕ್ಕೆ ಅರ್ಧ ಕಪ್‌ ಸಕ್ಕರೆ ಹಾಕಿ ಸಕ್ಕರೆ ಕರಗುವ ವರೆಗೆ ಕೈಯಾಡಿಸಬೇಕು. ಹಾಲಿಗೆ ಮೊಸರನ್ನು ಹಾಕಿರುವುದರಿಂದ ಹಾಲು ಒಡೆಯುತ್ತದೆ ಹಾಗಾಗಿ ಅದನ್ನು ಬೀಡದಂತೆ ದೊಡ್ಡ ಉರಿಯಲ್ಲಿ ಕಲಕುತ್ತಾ ಇರಬೇಕು. ಮತ್ತೂಂದು ಬಾಣಲೆಗೆ ಒಂದು ಕಪ್‌ ಸಕ್ಕರೆ ಸೇರಿಸಿ ಸಣ್ಣ ಉರಿಯಲ್ಲಿ ನೀರನ್ನು ಹಾಕದೆ ಅದನ್ನು ಕರಗಿಸಿಕೊಳ್ಳಬೇಕು. ಸಕ್ಕರೆ ಹದವಾಗಿ ಕರಗಿದ ಬಳಿಕ ಅದನ್ನು ಕುದಿಯುತ್ತಿರುವ ಹಾಲಿನ ಮಿಶ್ರಣಕ್ಕೆ ಸೇರಿಸಿ ಹದವಾಗಿ ಇನ್ನೊಮ್ಮೆ ಕುದಿಸಿಕೊಳ್ಳಬೇಕು. ನಂತರ ಅದರಲ್ಲಿರುವ ನೀರು ಆವಿಯಾಗುವ ವರೆಗೆ ಕಲಕಬೇಕು. ಇದು ಸ್ವಲ್ಲ ಮಟ್ಟಿನ ಗಟ್ಟಿ ಮಿಶ್ರಣ ಬಂದ ನಂತರ ಅದಕ್ಕೆ ಏಲಕ್ಕಿ ಪುಡಿಯನ್ನು ಸೇರಿಸಬೇಕು ಈಗ ಸಿಹಿ ಸಿಹಿಯಾದ ಕುಂದ ಸವಿಯಲು ಸಿದ್ಧವಾಗಿರುತ್ತದೆ. ಅದರ ಮೇಲೆ ಗೋಡಂಬಿ ದ್ರಾಕ್ಷಿ ಗಳಿಂದ ಸಿಂಗರಿ ಸಿದರೆ ಸಿಹಿ ಸಿಹಿ ಯಾದ ಕುಂದ ಸಿದ್ಧ.

ಬೇಕಾಗುವ ಸಾಮಗ್ರಿl
ಹಾಲು-1ಲೀ.
ಮೊಸರು -1 ಕಪ್‌
ಸಕ್ಕರೆ-1 ಕಪ್‌
ಏಲಕ್ಕಿ ಪುಡಿ- ಸ್ವಲ್ಪ (ಎರಡರಿಂದ ಮೂರು)
ಗೋಡಂಬಿ -2ರಿಂದ 3
ದ್ರಾಕ್ಷಿ- 4ರಿಂದ 5

Advertisement

-  ಪ್ರೀತಿ ಭಟ್‌ ಗುಣವಂತೆ

Advertisement

Udayavani is now on Telegram. Click here to join our channel and stay updated with the latest news.

Next