Advertisement
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತಯಂತ್ರ (ಇವಿಎಂ) ಗಳನ್ನು ಸಂಗ್ರಹಿಸಿಡಲಾದ ಉಡುಪಿ ಅಜ್ಜರಕಾಡಿನ ಸೈಂಟ್ ಸಿಸಿಲೀಸ್ ಶಿಕ್ಷಣ ಸಂಸ್ಥೆಯೊಳಗಿನ ಪ್ರಾಂಗಣದಲ್ಲಿ ಮತದಾನ ಮುಗಿದ ಬಳಿಕ ಕಂಡುಬಂದ ದೃಶ್ಯವಿದು.
ಉಡುಪಿ ಜಿಲ್ಲೆಯ ಕುಂದಾಪುರ, ಕಾರ್ಕಳ ಸಹಿತ ಜಿಲ್ಲಾ ಕೇಂದ್ರದಿಂದ ದೂರ ಇದ್ದ ಮತಗಟ್ಟೆಗಳ ಮತಯಂತ್ರಗಳು ಸೇರಿದಂತೆ ಎಲ್ಲ ಮತಯಂತ್ರಗಳು ಶುಕ್ರವಾರ ಬೆಳಗ್ಗೆ 6 ಗಂಟೆಯ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಉಡುಪಿಯ ಸ್ಟ್ರಾಂಗ್ ರೂಂ ತಲುಪಿದ್ದವು. ಉಡುಪಿ ನಗರದ ಹನುಮಂತನಗರ ಮತಗಟ್ಟೆಯ ಮತಯಂತ್ರ ಮೊದಲು ಸ್ಟ್ರಾಂಗ್ ರೂಂ ತಲುಪಿತ್ತು. ಅನಂತರ ಒಂದೊಂದೇ ಮತಗಟ್ಟೆಗಳಿಂದ ಮತಯಂತ್ರಗಳು ಬರುತ್ತಲೇ ಇದ್ದವು. ಮತಯಂತ್ರಗಳಿಗೆ ಸಂಬಂಧಿಸಿ ದಾಖಲೆ ಪರಿಶೀಲಿಸುವ ಪ್ರಕ್ರಿಯೆಯನ್ನು ಡಿಮಸ್ಟರಿಂಗ್ ಕೇಂದ್ರದಲ್ಲಿದ್ದ ಅಧಿಕಾರಿಗಳು ನಿರಂತರವಾಗಿ ನಡೆಸುತ್ತಲೇ ಇದ್ದರು.
Related Articles
Advertisement
ತಹಶೀಲ್ದಾರ್, ಸಹಾಯಕ ಚುನಾವಣಾಧಿಕಾರಿ, ಪೊಲೀಸರ ಬೆಂಗಾವಲು ವಾಹನದೊಂದಿಗೆ ಚಿಕ್ಕಮಗಳೂರಿನ ಮತಯಂತ್ರಗಳನ್ನು ತರಲಾಯಿತು. ವಾಹನಕ್ಕೆ ಅಳವಡಿಸಲಾಗಿದ್ದ ಜಿಪಿಎಸ್‌ನ ಮುಖಾಂತರ ಕೇಂದ್ರದಿಂದಲೇ ಹಿರಿಯ ಅಧಿಕಾರಿಗಳು ಗಮನವಿರಿಸಿದ್ದರು.
ಅಣಕು ಸ್ಲಿಪ್‌ಗ್ಳೂ ಸ್ಟ್ರಾಂಗ್ ರೂಮ್ಗೆಮತದಾನದ ಮೊದಲು ನಡೆದಿದ್ದ ಅಣಕು ಮತದಾನದ ಸ್ಲಿಪ್‌ಗ್ಳನ್ನು ಕೂಡ ಈ ಬಾರಿ ಸ್ಟ್ರಾಂಗ್ ರೂಮ್‌ನಲ್ಲಿಯೇ ಇಡಲಾಗುತ್ತದೆ. ಈ ಹಿಂದೆ ಇವುಗಳನ್ನು ಪ್ರತ್ಯೇಕವಾಗಿ ಇಡಲಾಗುತ್ತಿತ್ತು. ವಿದ್ಯುತ್ ಸಂಪರ್ಕ ಕಡಿತ
ಸ್ಟ್ರಾಂಗ್ ರೂಮ್‌ನೊಳಗೆ ಜನರೇಟರ್ ಸೇರಿದಂತೆ ಯಾವುದೇ ರೀತಿಯ
ವಿದ್ಯುತ್ಛಕ್ತಿ ಇರದಂತೆ ನೋಡಿಕೊಳ್ಳಲಾಗಿದೆ. ವಿದ್ಯುತ್ ಇಲಾಖೆಯ ಅಧಿಕಾರಿಗಳೇ ಖುದ್ದಾಗಿ ಆಗಮಿಸಿ ಕೊಠಡಿಯ ಎಲ್ಲ ರೀತಿಯ ವಿದ್ಯುತ್ ಸಂಪರ್ಕಗಳನ್ನು ಕಡಿದು ಹಾಕಿರುವ ಬಗ್ಗೆ ದೃಢೀಕರಣ ಪತ್ರ ನೀಡಿದರು. ಯಾವುದೇ ರೀತಿಯ ವಿದ್ಯುತ್ ಇದ್ದರೂ ಶಾರ್ಟ್ ಸರ್ಕ್ನೂಟ್ ಆಗಿ ಮತಯಂತ್ರಗಳಿಗೆ ಹಾನಿಯಾಗುವ ಅಪಾಯ ಇರುವುದರಿಂದ ಈ ರೀತಿಯ ಎಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗುತ್ತದೆ. 2 ಗಂಟೆ ನಿದ್ದೆ
“ರಾತ್ರಿ ಇಡೀ ಜಾಗರಣೆಯಲ್ಲಿದ್ದೆ. ಕೆಲವು ಮಹಿಳಾ ಸಿಬಂದಿಯನ್ನು ಮನೆಗೆ ಕಳುಹಿಸಿಕೊಟ್ಟಿದ್ದೆವು. ನಾನು ಬೆಳಗ್ಗೆ 5 ಗಂಟೆಗೆ ಮನೆಗೆ ತೆರಳಿದೆ. ಸ್ವಲ್ಪ ನಿದ್ದೆ ಮಾಡಿದೆ. 7 ಗಂಟೆಗೆ ವಾಪಸಾದೆ’ ಎಂದು ಓರ್ವ ಮಹಿಳಾ ನೋಡಲ್ ಅಧಿಕಾರಿ ಹೇಳಿದರು. – ಸಂತೋಷ್ ಬೊಳ್ಳೆಟ್ಟು