Advertisement

ಚಾಮುಂಡಿ ಬೆಟ್ಟದಿಂದ ಅರಮನೆಗೆ ಉತ್ಸವ ಮೂರ್ತಿ ಆಗಮನ , ಶಮಿ ವೃಕ್ಷಕ್ಕೆ ಯದುವೀರ್ ವಿಶೇಷ ಪೂಜೆ

10:28 AM Oct 09, 2019 | Nagendra Trasi |

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಐತಿಹಾಸಿಕ ಜಂಬೂ ಸವಾರಿ ಮಂಗಳವಾರ ಮಧ್ಯಾಹ್ನ ನಡೆಯಲಿದ್ದು, ಅದಕ್ಕೂ ಮುನ್ನ ರಾಜವಂಶಸ್ಥ ಯದುವೀರ್ ಅವರು ಅರಮನೆ ಆವರಣದಲ್ಲಿರುವ ಬನ್ನಿ ಮರಕ್ಕೆ ವಿಶೇಷ ಪೂಜೆ ಸಲ್ಲಿಸಿದರು.

Advertisement

ಮತ್ತೊಂದೆಡೆ ಮೈಸೂರು ಅರಮನೆ ಆವರಣದಲ್ಲಿ  ಜಟ್ಟಿಗಳ ಸಾಂಪ್ರದಾಯಿಕ ವಜ್ರಮಷ್ಠಿ ಕಾಳಗಕ್ಕೆ ಚಾಲನೆ ನೀಡಲಾಯಿತು. ಮಂಗಳವಾರ ಬೆಳಗ್ಗೆ ಚಾಮುಂಡಿ ಬೆಟ್ಟದಿಂದ ಅರಮನೆಗೆ ಚಾಮುಂಡಿ ಉತ್ಸವ ಮೂರ್ತಿಯನ್ನು ತರಲಾಯಿತು.

ಅರಮನೆ ಆವರಣದಲ್ಲಿರುವ ಭುವನೇಶ್ವರಿ ದೇವಾಲಯದ ಸಮೀಪ ಇರುವ ಶಮಿ(ಬನ್ನಿ) ವೃಕ್ಷಕ್ಕೆ ಯದುವೀರ್ ರಾಜಮನೆತನದ ಪುರೋಹಿತರ ಸಮ್ಮುಖದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುವಿನೊಂದಿಗೆ ಮೆರವಣಿಗೆ ನಡೆಸಿ ಅರಮನೆಯ ಆಯುಧಗಳಿಗೆ ಯಧುವೀರ್ ಪೂಜೆ ಸಲ್ಲಿಸಿದರು.

ನವರಾತ್ರಿಯ ವಿಜಯದಶಮಿ ಅಂಗವಾಗಿ ಮೈಸೂರು ಅರಮನೆಯಲ್ಲಿ ದಸರಾ ಸಂಭ್ರಮ, ಜಂಬೂ ಸವಾರಿ ಕಣ್ತುಂಬಿಕೊಳ್ಳಲು, ದೇಶ, ವಿದೇಶದಿಂದ ಸಾವಿರಾರು ಪ್ರವಾಸಿಗರು ಸಾಂಸ್ಕೃತಿಕ ನಗರಿಯಲ್ಲಿ ಬೀಡು ಬಿಟ್ಟಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸುಮಾರು ಎಂಟು ಸಾವಿರಕ್ಕೂ ಅಧಿಕ ಮಂದಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next