ಬೆಂಗಳೂರು: ಆಸ್ಪತ್ರೆಗಳು ಸೇವಾ ಮನೋಭಾವನೆ ಯಿಂದ ಕಾರ್ಯ ನಿರ್ವಹಿಸುವ ಮೂಲಕ ಬಡವರ ಬದುಕಿಗೆ ಆಸರೆಯಾಗಬೇಕು ಎಂದು ಬಾಳೆಹೊನ್ನೂರಿನ ಶ್ರೀ ರಂಭಾಪುರಿ ವೀರಸಿಂಹಾಸನದೇಶ್ವರ ಪ್ರಸನ್ನ ರೇಣುಕಾ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಮಾಗಡಿ ಮುಖ್ಯರಸ್ತೆಯ ಅಂಜನಾನಗರ ಬ್ಯಾಡರ ಹಳ್ಳಿಯ ಚಿಗುರು ಕಾಂಪ್ಲೆಕ್ಸ್‌ನಲ್ಲಿ ಆರಂಭಿಸಲಾಗಿರುವ ನೂತನ ಎಸ್‌ಆರ್‌ಎಸ್ ಡಯಾಗ್ನೊàಸ್ಟಿಕ್ ಸೆಂಟರ್ ಉದ್ಘಾಟಿಸಿ ಅವರು ಮಾತನಾಡಿದರು. ಕೊರೊನಾಕ್ಕೆ ತುತ್ತಾದ ಸಂದರ್ಭದಲ್ಲಿ ಚಿಕಿತ್ಸೆ ಪಡೆಯಲಾಗದೆ ಜತೆಗೆ ಆಸ್ಪತ್ರೆಗಳಲ್ಲೇ ಹಾಸಿಗೆ ಸಿಗದೆ ಹಲವು ಮಂದಿ ಪ್ರಾಣ ಕಳೆದುಕೊಂಡರು ಎಂದರು. ಇದರಿಂದಾಗಿಯೇ ಹಲವು ಸಂಸಾರಗಳು ಬೀದಿ ಪಾಲಾದವು ನೊಂದ ಮನಸುಗಳು ಆತ್ಮಹತ್ಯೆ ಮಾಡಿಕೊಂಡಂತಹ ಘಟನೆಗಳು ನಡೆದವು.
ಇಂತಹ ಕಷ್ಟದ ವೇಳೆ ನೊಂದವರ ಕಣ್ಣೀರು ಒರೆಸುವ ಕೆಲಸ ಮಾಡಬೇಕು ಎಂದು ತಿಳಿಸಿದರು. ಯಾವುದೇ ಸಂದರ್ಭ ಇರಲಿ ನೊಂದ ಮನಸ್ಸಿಗೆ ಸಮಾಧಾನ ಮಾಡುವುದರ ಜತೆಗೆ ಅವರ ಪರಿಸ್ಥಿತಿಯನ್ನು ಅರಿತು ಸಹಾಯ ಮಾಡಿದರೆ ಆ ಕುಟುಂಬದ ಮಕ್ಕಳ ಭವಿಷ್ಯಕ್ಕೆ ಮತ್ತಷ್ಟು ಅನುಕೂಲವಾಗಲಿದೆ ಎಂದರು.
ಇದನ್ನೂ ಓದಿ;- ಎರಡು ದಿನಕ್ಕೊಂದು ಕಟ್ಟಡ ಕುಸಿತ
ಭಗವಂತ ನಮಗೆ ಸಾಕಷ್ಟು ಕೊಟ್ಟಾಗ ನಾವು ಕೂಡ ದಾನ-ಧರ್ಮ ಮಾಡಿ ನಮ್ಮ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು. ಬೇರೆಯವರಿಗೆ ಸಹಾಯ ಮಾಡಿ ದಾಗ ನಮಗೆ ಸಿಗುವಂತಹ ತೃಪ್ತಿ ಬೇರೆ ಎಲ್ಲೂ ನಿಮಗೆ ಸಿಗುವುದಿಲ್ಲ ಎಂದು ತಿಳಿಸಿದರು.ಸಿದ್ದೇಶ್ವರ ಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಎಸ್‌ಆರ್‌ಎಸ್ ಡಯಾಗ್ನೊàಸ್ಟಿಕ್ ಸೆಂಟರ್‌ನ ಮಾಲೀಕ ರೂಪಶ್ರೀ ಬಿ.ಎಂ.ಸಿದ್ದಲಿಂಗಪ್ಪ ಸೇರಿದಂತೆ ಇತರರು ಹಾಜರಿದ್ದರು.