Advertisement
ರಾಜ್ಯಾದ್ಯಂತ ಕೊರೊನಾ ಮೂರನೇ ಅಲೆ 2021ರ ಡಿ.27ರಿಂದ ಪ್ರಾರಂಭಗೊಂಡು 2022ರಜನವರಿ ಅಂತ್ಯದ ವರೆಗೆ ಸರಾಸರಿ ನಿತ್ಯ 40,000ಕ್ಕೂ ಮಿಕ್ಕಿದ ಪ್ರಕರಣಗಳು ದಾಖಲಾಗಿತ್ತು. ಅನಂತರ ಎಷ್ಟು ಶೀಘ್ರವಾಗಿ ಸೋಂಕು ಹರಡಿತ್ತೋಅಷ್ಟೇ ವೇಗವಾಗಿ ತಗ್ಗಿದೆ. ಇದೀಗ 3ನೇ ಅಲೆಯಲ್ಲಿಸೋಂಕಿಗೆ ಒಳಗಾದವ ರಲ್ಲಿ ಅನೇಕರು ರಕ್ತದಲ್ಲಿಸಕ್ಕರೆ ಅಂಶ ಕಡಿಮೆ ಇರುವುದುಪತ್ತೆಯಾಗುತ್ತಿರುವುದು ಆತಂಕ ಮೂಡಿಸಿದೆ.
Related Articles
Advertisement
ಕಾರಣವೇನು?: ಕೋವಿಡ್ 3ನೇ ಅಲೆಯಲ್ಲಿ ಸೋಂಕಿಗೆ ಒಳಗಾದವರಲ್ಲಿ ಹೆಚ್ಚಿನವರಿಗೆ ಗಂಟಲುನೋವು ಲಕ್ಷಣ ಕಾಣಿಸಿಕೊಂಡಿದೆ. ಈ ವೇಳೆ ರೋಗಿಗಳು ಆಹಾರ ಸೇವನೆಯ ಪ್ರಮಾಣ ತೀವ್ರ ಕಡಿಮೆಮಾಡಿದ್ದಾರೆ. ಇನ್ನು ಕೆಲವರಿಗೆ ಹಸಿವಿನ ಕೊರತೆಯಿಂದ ಬಳುತ್ತಿರುವವರು ಸರಿಯಾಗಿ ಆಹಾರ ಸೇವಿಸದೆ ಇರುವುದು ರಕ್ತದಲ್ಲಿನ ಸಕ್ಕರೆ ಅಂಶಕುಸಿತಕ್ಕೆ ಕಾರಣ. ಜತೆಗೆ ರೋಗಿಯು ಒಂದೇ ಔಷಧವನ್ನು ನಿರಂತರವಾಗಿ ತೆಗೆದುಕೊಳ್ಳುವ ಸಮಯದಲ್ಲಿ ಪೌಷ್ಠಿಕಾಂಶ ಭರಿತ ಆಹಾರ ಸೇವನೆ ಮಾಡದೆ ಇರುವವರಲ್ಲಿ ಹೈಪೊಗ್ಲಿಂಸಿಯಾವರದಿಯಾಗುತ್ತಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಮುನ್ನೆಚ್ಚರಿಕೆಕ್ರಮಗಳೇನು? :
ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆ ಇರುವವರುಕಡ್ಡಾಯವಾಗಿ ಉತ್ತಮ ಹಾಗೂ ಆರೋಗ್ಯಕರ ಆಹಾರ ಸೇವಿಸ ಬೇಕು. ಇದರಲ್ಲಿ ಪ್ರೋಟಿನ್‌ಅಂಶ ಹೊಂದಿರುವ ವಿವಿಧ ಹಣ್ಣು ಹಾಗೂ ತರಕಾರಿಗಳನ್ನು ಸೇವನೆ ಮಾಡಬೇಕು. ಸೇಬು,ಒಣ ದ್ರಾಕ್ಷಿ ಸೇರಿ ಪೌಷ್ಠಿಕಾಂಶ ಭರಿತ ಆಹಾರ ಸೇವಿಸುವ ಮೂಲಕ ರಕ್ತದಲ್ಲಿನ ಸಕ್ಕರೆಅಂಶವನ್ನು ಸಮತೋಲನ ಕಾಪಾಡಿಕೊಳ್ಳಬಹುದಾಗಿದೆ.
3ನೇ ಅಲೆಯಲ್ಲಿ ಸೋಂಕಿನಿಂದ ಗುಣಮುಖರಾದ ಕೆಲ ಸೋಂಕಿತರಲ್ಲಿ ಹಸಿವಿನ ಕೊರತೆ ಹಾಗೂ ಅಪೌಷ್ಟಿಕ ಆಹಾರ ಸೇವನೆಯಿಂದ ಹಾಗೂರೋಗಿಯು ಒಂದೇ ಔಷಧವನ್ನು ನಿರಂತರವಾಗಿ ತೆಗೆದುಕೊಳ್ಳುವ ಸಮಯದಲ್ಲಿ ಪೌಷ್ಟಿಕಾಂಶ ಆಹಾರಸೇವನೆ ಮಾಡದೆ ಇರುವುದರಿಂದ ಹೈಪೊಗ್ಲಿಂಸಿಯಾ ವರದಿಯಾಗುತ್ತಿದೆ. ಕೆಲವರಲ್ಲಿವಂಶವಾಹಿನಿಯಿಂದ ಬರುವ ಸಾಧ್ಯತೆಗಳನ್ನು ತೆಗೆದು ಹಾಕುವಂತಿಲ್ಲ.–ಡಾ. ಅಭಿಜಿತ್ ಭೋಗರಾಜ್, ಅಂತಃಸ್ರಾವ ಶಾಸ್ತ್ರಜ್ಞ ಮಣಿಪಾಲ ಆಸ್ಪತ್ರೆ, ಹೆಬ್ಬಾಳ
–ತೃಪ್ತಿ ಕುಮ್ರಗೋಡು