Advertisement

ತಿರುಗಿ ಬಿದ್ದ ಸಭಾಪತಿ : 8 ಎಂಎಲ್‌ಸಿಗಳಿಗೆ ಅನರ್ಹತೆಯ ಭೀತಿ !

11:17 AM Jun 01, 2017 | |

ಬೆಂಗಳೂರು : ಸದನದ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು  ವಿಧಾನಪರಿಷತ್ ಸಭಾಪತಿ ಡಿಎಚ್ ಶಂಕರಮೂರ್ತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದಾಗಿ ಕಾಂಗ್ರೆಸ್‌ ಸದಸ್ಯರು ನೋಟಿಸ್ ನೀಡಿದ ಬೆನ್ನಲ್ಲೇ ಪ್ರಯಾಣ ಭತ್ಯೆ ದುರ್ಬಳಕೆ ಆರೋಪದಲ್ಲಿ  8 ಮಂದಿ ಎಂಎಲ್‌ಸಿಗಳಿಗೆ ನೊಟೀಸ್‌ ನೀಡಿ ಶಾಕ್‌ ನೀಡಲಾಗಿದ್ದು, ಇದೀಗ 8 ಮಂದಿಗೆ ಅನರ್ಹತೆಯ ಭೀತಿ ಎದುರಾಗಿದೆ. 

Advertisement

ಸಭಾಪತಿ ಡಿಎಚ್‌ ಶಂಕರಮೂರ್ತಿ ಅವರು ಪರಿಷತ್‌ ಸದಸ್ಯರುಗಳಾದ ಅಪ್ಪಾಜಿ ಗೌಡ , ರಘು ಆಚಾರ್‌, ಎಂ.ಡಿ.ಲಕ್ಷ್ಮೀ ನಾರಾಯಣ ,ಬೋಸ್‌ರಾಜ್‌ , ಆರ್‌.ಬಿ ತಿಮ್ಮಾಪುರ, ಎಸ್‌.ರವಿ , ಅಲ್ಲಂ ವೀರಭದ್ರಪ್ಪ  ಮತ್ತು ಸಿ.ಆರ್‌ ಮನೋಹರ್‌ ಅವರಿಗೆ ನೊಟೀಸ್‌ ನೀಡಿದ್ದಾರೆ. 

ಲಕ್ಷಾಂತರ ರೂಪಾಯಿ ಪ್ರಯಾಣ ಭತ್ಯೆ ದುರ್ಬಳಕೆ ಮಾಡಲಾಗಿರುವ ಬಗ್ಗೆ ಆರೋಪ ಮಾಡಿ  ಬಿಬಿಎಂಪಿ ವಿಪಕ್ಷ ನಾಯಕ ಪದ್ಮನಾಭ ರೆಡ್ಡಿ ನೀಡಿದ ದೂರಿನ ಅನ್ವಯ ಈ ನೊಟೀಸ್‌ ನೀಡಲಾಗಿದ್ದು, ರಾಜ್ಯ ಸಭೆಯಲ್ಲಿ ಇಂತಹ ಪ್ರಕರಣಕ್ಕೆ ಕ್ರಿಮಿನಲ್‌ ಕೇಸ್‌ ಹಾಕಲಾಗುತ್ತದೆ. ನಿಮ್ಮ ಮೇಲೆ ಕ್ರಿಮಿನಲ್‌ ಕೇಸ್‌ ಏಕೆ ಹಾಕಬಾರದು ಎಂದು ಸಭಾಪತಿ ಪ್ರಶ್ನಿಸಿ ಜೂನ್‌ 3 ರ ಒಳಗೆ ಉತ್ತರ ನೀಡುವಂತೆ ಕೇಳಿದ್ದಾರೆ. 

ಇದೀಗ ನೊಟೀಸ್‌ಗೆ ಎಂಎಲ್‌ಸಿಗಳು ಯಾವ ಉತ್ತರ ನೀಡುತ್ತಾರೆ ಎಂದು ಕಾದುನೋಡಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next