Advertisement

ಮಗನನ್ನು ಕೊಂದಿದ್ದ ತಂದೆ ಜೈಲಿಗೆ

01:19 AM Jun 04, 2019 | Lakshmi GovindaRaj |

ಬೆಂಗಳೂರು: ಸಾಲಗಾರರ ಕಿರುಕುಳಕ್ಕೆ ಬೇಸತ್ತು ಮಗನನ್ನು ಕೊಲೆ ಮಾಡಿದ ವ್ಯಕ್ತಿ, ಆತ್ಮಹತ್ಯೆಗೆ ಯತ್ನಿಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಸಂಬಂಧ ಐವರು ಆರೋಪಿಗಳನ್ನು ಎಚ್‌ಎಎಲ್‌ ಪೊಲೀಸರು ಬಂಧಿಸಿದ್ದಾರೆ.

Advertisement

ವಿಭೂತಿಪುರದ ನಿವಾಸಿ ಸುರೇಶ್‌ ಬಾಬು ಎಂಬಾತ ಸಾಲಗಾರರ ಕಿರುಕುಳಕ್ಕೆ ಬೇಸತ್ತು ತನ್ನ ಮಗ ವರುಣ್‌ (12)ಗೆ ನೇಣು ಬಿಗಿದು ಕೊಲೆಮಾಡಿದ್ದ. ಇದನ್ನು ನೋಡಿದ ಆತನ ಪತ್ನಿ ಗೀತಾಬಾಯಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮಗಳ ಮಾತಿನಿಂದ ಸುರೇಶ್‌ಬಾಬು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರದಿಂದ ಹಿಂದೆ ಸರಿದಿದ್ದ.

ಈ ಘಟನೆ ಸಂಬಂಧ ಆತ್ಮಹತ್ಯೆ ಪ್ರಚೋದನೆ ಆರೋಪ ಸಂಬಂಧ ಸುಧಾ, ಪ್ರಭಾವತಿ, ಡೈಸಿ, ರಾಮ್‌ ಬಹುದ್ದೂರ್‌, ಮಂಜು ಎಂಬವರನ್ನು ಬಂಧಿಸಲಾಗಿದೆ. ಮಗ ವರುಣ್‌ನನ್ನು ಕೊಲೆಮಾಡಿದ ಆರೋಪ ಸಂಬಂಧ ಸುರೇಶ್‌ಬಾಬುನನ್ನು ಬಂಧಿಸಲಾಗಿದೆ ಎಂದು ಎಚ್‌ಎಎಲ್‌ ಠಾಣೆ ಪೊಲೀಸರು ತಿಳಿಸಿದ್ದಾರೆ.

ಸಾಲ ತಂದ ಶೂಲ: ಖಾಸಗಿ ಕಂಪನಿಯೊಂದರ ಉದ್ಯೋಗಿ ಆಗಿದ್ದ ಸುರೇಶ್‌ಬಾಬು ಈ ಹಿಂದೆ ಚೀಟಿ ವ್ಯವಹಾರ ನಡೆಸುತ್ತಿದ್ದ. ಸುಧಾ, ಡೈಸಿ ಸೇರಿದಂತೆ ಹಲವರು ಹಣ ಕಟ್ಟಿದ್ದರು. ಹಣಕಾಸು ವ್ಯವಹಾರದಲ್ಲಿ ನಷ್ಟವುಂಟಾಗಿದ್ದರಿಂದ ಸುರೇಶ್‌ಬಾಬು ಹಲವರಿಗೆ ಹಣ ಹಿಂತಿರುಗಿಸಿರಲಿಲ್ಲ.

ಹೀಗಾಗಿ ಮನೆ ಬಳಿ ಬಂದು ಆರೋಪಿಗಳು ಗಲಾಟೆ ಮಾಡುತ್ತಿದ್ದರು. ಜತೆಗೆ ಹಣ ನೀಡದಿದ್ದರೆ ಜೈಲಿಗೆ ಕಳಿಸುತ್ತೇವೆ ಎಂದು ಬೆದರಿಸುತ್ತಿದ್ದರು. ಈ ಕಾರಣಕ್ಕೆ ಬೇಸತ್ತ ಸುರೇಶ್‌ಬಾಬು, ಗೀತಾಬಾಯಿ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದರು.

Advertisement

ಅದರಂತೆ ಭಾನುವಾರ ಮಗ ವರುಣ್‌ನನ್ನು ಸುರೇಶ್‌ಬಾಬು ನೇಣುಬಿಗಿದು ಕೊಲೆಮಾಡಿದ್ದ. ಪತ್ನಿ ಗೀತಾಬಾಯಿ ಕೂಡ ಮತ್ತೂಂದು ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆ ಕಂಡ ಮಗಳು ಆತ್ಮಹತ್ಯೆ ಮಾಡಿಕೊಳ್ಳದಂತೆ ಸುರೇಶ್‌ಬಾಬುನನ್ನು ತಡೆದಿದ್ದಳು ಎಂಬುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದರು.

ಮಕ್ಕಳನ್ನು ಕೊಲ್ಲಬೇಡಿ; ಸರ್ಕಾರಕ್ಕೆ ಒಪ್ಪಿಸಿ: “ಕಷ್ಟಗಳು ಯಾರಿಗೂ ಬರಬಾರದು. ಸಾಲ ಸೇರಿ ಇನ್ನಿತರೆ ಕಷ್ಟಗಳು ಎದುರಾದಾಗ ಮಕ್ಕಳನ್ನು ಕೊಲೆಮಾಡಬೇಡಿ. ನಿಮಗೆ ಕಷ್ಟ ಂದೆನಿಸಿದರೆ ಮಕ್ಕಳನ್ನು ಸರ್ಕಾರಕ್ಕೆ ಒಪ್ಪಿಸಿ. ಸರ್ಕಾರಿ ಹಾಗೂ ಖಾಸಗಿ ಆಶ್ರಮಗಳು ಅವರನ್ನು ಪೋಷಿಸುತ್ತವೆ’ ಎಂದು ವೈಟ್‌ಫೀಲ್ಡ್‌ ವಿಭಾಗದ ಡಿಸಿಪಿ ಅಬ್ದುಲ್‌ ಅಹದ್‌ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next