Advertisement

ಕೃಷಿ ಸೌಲಭ್ಯ ಸದ್ಬಳಕೆಯಾಗಲಿ

04:24 PM Aug 04, 2018 | |

ಮಾಯಕೊಂಡ: ಕೃಷಿ ಇಲಾಖೆಯ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಕಡಿಮೆ ಖರ್ಚಿನಲ್ಲಿ ಅಧಿಕ ಲಾಭಗಳಿಸಿರಿ ಎಂದು ಶಾಸಕ ಪ್ರೊ| ಲಿಂಗಣ್ಣ ರೈತರಿಗೆ ಕರೆಕೊಟ್ಟರು. ಸಮೀಪದ ಮಳಲ್ಕೆರೆ ಗ್ರಾಮದಲ್ಲಿ ಕೃಷಿ ಇಲಾಖೆ
ಹಮ್ಮಿಕೊಂಡಿದ್ದ ಕೃಷಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶೇ. 70 ರಷ್ಟು ರೈತರು ಕೃಷಿಯನ್ನೇ ಅವಲಂಬಿಸಿ ಕಷ್ಟದ ಜೀವನ ನಡೆಸುತ್ತಿದಾರೆ. ರೈತರ ಅಭ್ಯುದಯಕ್ಕಾಗಿ ಇಲಾಖೆ ವಿವಿಧ ಯೋಜನೆ ಜಾರಿಗೆ
ತಂದಿದೆ. ರೈತರು ತಾಂತ್ರಿಕತೆ ಅಳವಡಿಕೆಯೊಂದಿಗೆ ಕೃಷಿ ಪದ್ಧತಿಯಲ್ಲಿ ಬದಲಾವಣೆ ತಂದಾಗ ಮಾತ್ರ ಪ್ರಗತಿ ಸಾಧ್ಯ.
ಎರೆಹುಳು ಗೊಬ್ಬರ ಬಳಕೆ ಹೆಚ್ಚಿಸಿ ಭೂಮಿಯ ಆರೋಗ್ಯ ಕಾಪಾಡಿಕೊಳ್ಳಿ. ಬೆಳೆ ಪರಿವರ್ತನೆ ಪದ್ಧತಿಯಿಂದ ಮಣ್ಣು
ಫಲವತ್ತಾಗುತ್ತದೆ ಎಂದರು.

Advertisement

ಬೆಳೆಗಳಿಗೆ ಬೆಂಬಲ ಬೆಲೆ ಇಲ್ಲದೇ ದೇಶದಲ್ಲಿ ರೈತರು ಅತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ 3 ಸಾವಿರಕ್ಕೂ
ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ದುರ್ದೈವ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು. ಕೃಷಿ ಇಲಾಖೆಯ ಉಪ ಕೃಷಿ ನಿರ್ದೇಶಕಿ ಹಂಸವೇಣಿ ಮಾತನಾಡಿ, ರೈತರು ಕೃಷಿಯೊಂದಿಗೆ ಉಪ ಕಸುಬಾಗಿ ಕುರಿ, ಕೋಳಿ, ಪಶು ಸಾಕಾಣಿಕೆ ಮಾಡಿದರೆ ಅರ್ಥಿಕವಾಗಿ ಬಲಾಡ್ಯರಾಗಬಹುದು ಎಂದರು.

ಬಾಡ ಜಿಪಂ ಸದಸ್ಯೆ ಶೈಲಜಾ ಮಾತನಾಡಿ, ಕೃಷಿಯನ್ನು ಶ್ರಮವಹಿಸಿ ಮಾಡಿದ್ದಾದರೆ ಉತ್ತಮ ಬೆಳೆ ಪಡೆಯಬಹುದು
ಎಂದರು. ಲೋಕಿಕೆರೆ ಜಿಪಂ ಸದಸ್ಯ ಓಬಳೇಶಪ್ಪ, ತಾಪಂ ಸದಸ್ಯರಾದ ಪರಮೇಶ್ವರಪ್ಪ, ಮುರುಗೇಶ್‌, ವಿಜ್ಞಾನಿಗಳಾದ ದೇವರಾಜು, ಮಲ್ಲಿಕಾರ್ಜುನ, ನಿವೃತ್ತ ಅಧಿಕಾರಿ ರಾಜಶೇಖರಪ್ಪ, ಧರ್ಮಸ್ಥಳ ಸಂಸ್ಥೆಯ ಯೋಜನಾಧಿ ಕಾರಿ ಪದ್ಮಯ್ಯ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಚಂದ್ರಮ್ಮ, ಕೃಷಿ ತೋಟಗಾರಿಕೆ ಇಲಾಖೆ ಅಧಿ ಕಾರಿಗಳಾದ ಯತಿರಾಜು, ಅರುಣ್‌ ಕುಮಾರ್‌, ಶ್ರೀಧರಮೂರ್ತಿ ಇದ್ದರು. ಕೆ ಸಿರಿಯಣ್ಣ ಸ್ವಾಗತಿಸಿ, ಧನಂಜಯ ಮಳಲ್ಕೆರೆ ನಿರೂಪಿಸಿದರು. ರೈತರಿಗೆ ಮಣ್ಣು ಪರೀಕ್ಷೆ ಕಾರ್ಡ್‌ ವಿತರಿಸಲಾಯಿತು. ಕೃಷಿ ಸಲಕರಣೆಗಳು ಮತ್ತು ಔಷಧಿ, ಬೀಜಗಳ ಪ್ರಾತ್ಯಕ್ಷಿಕೆ ಆಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next