Advertisement

ಜಾಣತನದಿಂದ ಚಿರತೆ ಸೆರೆ ಹಿಡಿದ ರೈತ

10:36 PM Oct 20, 2019 | Lakshmi GovindaRaju |

ರಾಣೆಬೆನ್ನೂರು: ಆಕಳ ಕರು ತಿನ್ನಲು ಬಂದಿದ್ದ ಚಿರತೆ, ರೈತನ ಜಾಣತನದಿಂದ ಬಲೆಗೆ ಬಿದ್ದ ಘಟನೆ ತಾಲೂಕಿನ ವಡೇರಾಯನಹಳ್ಳಿ ಗ್ರಾಮದಲ್ಲಿ ಶನಿವಾರ ತಡರಾತ್ರಿ ಸಂಭವಿಸಿದೆ. ಸಿದ್ದಪ್ಪ ಬಣಕಾರ ಎಂಬುವರ ರೇಷ್ಮೆ ಸಾಕಾಣಿಕೆ ಮನೆಯಲ್ಲಿ ಕಟ್ಟಿದ್ದ ಆಕಳು ಕರುವಿನ ಕೊರಳಿಗೆ ಚಿರತೆ ಬಾಯಿ ಹಾಕಿದ ಕ್ಷಣ ಮಾತ್ರದಲ್ಲೇ ಬಂದ ಸಿದ್ದಪ್ಪ, ಚಾಣಾಕ್ಷತನದಿಂದ ಜೀವದ ಹಂಗು ತೊರೆದು ಚಿರತೆ ಬಾಯಿಯಿಂದ ಕರುವನ್ನು ರಕ್ಷಿಸಿ, ರೇಷ್ಮೆ ಸಾಕಾಣಿಕೆ ಮನೆಯ ಬಾಗಿಲು ಮುಚ್ಚಿದರು.

Advertisement

ಬಳಿಕ ಆಗಮಿಸಿದ ಅರಣ್ಯ ಅಧಿಕಾರಿಗಳ ತಂಡ, ಬೋನು ಇಟ್ಟು, ಸುತ್ತಲೂ ಬಲೆ ಹೆಣೆದು, ಬೋನಿನಲ್ಲಿ ನಾಯಿ ಮರಿ ಕಟ್ಟಿ, ಚಿರತೆ ಹಿಡಿಯುವಲ್ಲಿ ನಡೆಸಿದ ಮೊದಲ ಪ್ರಯತ್ನ ವಿಫಲವಾಯಿತು. ಸತತ 9 ಗಂಟೆಗಳ ಅವಿರತ ಕಾರ್ಯಾಚರಣೆ ಬಳಿಕ ಎರಡನೇ ಪ್ರಯತ್ನದಲ್ಲಿ ಚಿರತೆಯನ್ನು ಖೆಡ್ಡಾಕ್ಕೆ ಬೀಳಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾದರು.

Advertisement

Udayavani is now on Telegram. Click here to join our channel and stay updated with the latest news.

Next