Advertisement

ಸಂಪುಟ ವಿಸ್ತರಣೆ ಬಳಿಕ ರಾಜ್ಯ ಸರ್ಕಾರ ಪತನ

11:08 PM Jan 19, 2020 | Team Udayavani |

ಬಾಗಲಕೋಟೆ: ಸಂಪುಟ ವಿಸ್ತರಣೆ ಬಳಿಕ ಬಿಜೆಪಿ ಸರ್ಕಾರ ಪತನವಾಗಲಿದೆ. ಬಳಿಕ ರಾಜ್ಯದಲ್ಲಿ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತದೆ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಎಸ್‌.ಆರ್‌. ಪಾಟೀಲ ಭವಿಷ್ಯ ನುಡಿದರು.

Advertisement

ಸುದ್ದಿಗಾರರ ಜತೆ ಮಾತನಾಡಿ, ಯಡಿಯೂರಪ್ಪ ರಾಜೀನಾಮೆ ಕುರಿತು ಈಗಾಗಲೇ ಮುನ್ಸೂಚನೆ ನೀಡಿದ್ದಾರೆ. ಅವರ ಪಕ್ಷದವರ ಒತ್ತಡ ಇರುವುದು ಹೇಳಿದ್ದಾರೆ. ಈಗಲೇ ಹೀಗಾಗಿದೆ. ಇನ್ನು ಸಂಪುಟ ವಿಸ್ತರಣೆ ಬಳಿಕ ನೈಜ ಬಣ್ಣ ಬಯಲಾಗುತ್ತದೆ. ಕಾಂಗ್ರೆಸ್‌ನವರು ಬ್ರಿಟಿಷರ ಗುಂಡಿಗೆ ಹೆದರಿಲ್ಲ.

ಇನ್ನು ಇಡಿ ಇಟ್ಟುಕೊಂಡು ಆಟ ಆಡುವ ಬಿಜೆಪಿಗೆ ಹೆದರುತ್ತೇವೆಯೇ? ಬಿಜೆಪಿ ನಮಗೆ ಯಾವ ಲೆಕ್ಕ? ಎಂದರು. ಭಾರತ ಸಾಧು-ಸಂತರು ನೆಲೆಸಿದ ನೆಲ. ಸ್ವಾಮೀಜಿಗಳು, ಧರ್ಮ ಪ್ರಸಾರ, ಜನತೆಯ ಕಲ್ಯಾಣ ಮಾಡುವುದರಲ್ಲಿ ಹೆಚ್ಚು ಮುತುವರ್ಜಿ ವಹಿಸಬೇಕು. ಸಾರ್ವಜನಿಕವಾಗಿ ಇಂತವರನ್ನೇ ಸಚಿವರನ್ನಾಗಿ ಮಾಡಿ ಎಂದು ಹೇಳಿದ್ದನ್ನು ಎಂದೂ ಕೇಳಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next