ಬೆಂಗಳೂರು: ಇತ್ತೀಚೆಗೆ ಚಿನ್ನದ ವ್ಯಾಪಾರಿಗೆ ನಕಲಿ ನೋಟುಗಳನ್ನು ನೀಡಿ ಒಂದು ಕೆ.ಜೆ ತೂಕದ ಚಿನ್ನದ ಗಟ್ಟಿ ಪಡೆದು ವಂಚಿಸಿದ್ದ ಮೂವರು ಆರೋಪಿಗಳನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ.
ಮೈಸೂರು ಮೂಲದ ವಿನೋದ್ ಜೈನ್ (45), ಹೇಮಂತ್ (33) ಮತ್ತು ಹರೀಶ್ ಕುಮಾರ್(31) ಬಂಧಿತರು. ಇವರಿಂದ 32 ಲಕ್ಷ ರೂ. ಮೌಲ್ಯದ ಒಂದು ಕೆ.ಜಿ. ತೂಕದ ಚಿನ್ನದ ಗಟ್ಟಿ, ಪ್ರಿಂಟರ್, ಕಂಪ್ಯೂಟರ್ ಮತ್ತು ಸ್ಕ್ಯಾನಿಂಗ್ ಮಷಿನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಮೂವರು ನಕಲಿ ನೋಟುಗಳು ಮತ್ತು ಚೆಕ್‌ಗಳನ್ನು ಸಿದ್ಧಪಡಿಸುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಆರೋಪಿಗಳ ಪೈಕಿ ವಿನೋದ್ ಜೈನ್ ಎಂಬಾತ ಏ.24ರಂದು ನಗರ್ತಪೇಟೆಯ ಚಿನ್ನದ ವ್ಯಾಪಾರಿ ದಿನೇಶ್ ಕುಮಾರ್‌ಗೆ ಕರೆ ಮಾಡಿ ಚಿಕ್ಕಮಗಳೂರಿನ ಜುಗರಾಜ್ ಎಂದು ಪರಿಚಯಸಿಕೊಂಡಿದ್ದ. ಮಗಳ ಮದುವೆಗೆ ಒಂದು ಕೆ.ಜಿ. ತೂಕದ ಚಿನ್ನದ ಗಟ್ಟಿ ಬೇಕಿದೆ ಎಂದು ತಿಳಿಸಿದ್ದ. ಬಳಿಕ ಮತ್ತೂಮ್ಮೆ ಕರೆ ಮಾಡಿ ಮದುವೆ ಕೆಲಸದೊತ್ತಡದಲ್ಲಿದ್ದೇನೆ ಅಂಗಡಿಗೆ ಬರಲು ಸಾಧ್ಯವಿಲ್ಲ. ನನ್ನ ಸಹಾಯಕನನ್ನು ಕಳುಹಿಸಿಕೊಡುತ್ತೇನೆ ಆತನ ಬಳಿ ಚಿನ್ನದ ಗಟ್ಟಿ ಕೊಟ್ಟು ಹಣ ಪಡೆಯುವಂತೆ ಸೂಚಿಸಿ, ಕಾರಿನ ನಂಬರ್ ಕೂಡ ಕೊಟ್ಟಿದ್ದ.
ಇದನ್ನು ನಂಬಿದ ದಿನೇಶ್ ಕುಮಾರ್ ಏ.24ರ ರಾತ್ರಿ 10 ಗಂಟೆ ಸುಮಾರಿಗೆ ಶಿಕ್ಷಕರ ಭವನದ ಬಳಿ ಬಂದಿದ್ದರು. ಇದೇ ವೇಳೆ ಕಾರಿನಲ್ಲಿ ಬಂದ ಹೇಮಂತ್ ಎಂಬಾತ ದಿನೇಶ್‌ಗೆ ನಕಲಿ ನೋಟುಗಳನ್ನು ಕೊಟ್ಟು ಚಿನ್ನದ ಗಟ್ಟಿ ಪಡೆದುಕೊಂಡಿದ್ದ. ದಿನೇಶ್ ಕುಮಾರ್ ಮನೆಗೆ ಬಂದು ನೋಟುಗಳನ್ನು ಪರಿಶೀಲಿಸಿದಾಗ ಅವು ನಕಲಿ ಎಂಬುದು ತಿಳಿದಿದೆ. ಕೂಡಲೇ ಅವರು ಅಲಸೂರು ಗೇಟ್ ಠಾಣೆಗೆ ದೂರು ನೀಡಿದ್ದರು.
ವಂಚಿಸಿದವ 10 ವರ್ಷಗಳ ಸ್ನೇಹಿತ: ಆರೋಪಿ ವಿನೋದ್ ಜೈನ್ ಮತ್ತು ದೂರುದಾರ ದಿನೇಶ್ ಕುಮಾರ್ 10 ವರ್ಷಗಳ ಹಿಂದೆ ಮೈಸೂರಿನ ಕೈಗಾರಿಕೆಯೊಂದರಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಕಳೆದ ವರ್ಷ ದಿನೇಶ್ ನಗರಕ್ಕೆ ಬಂದು ನೆಲೆಸಿದ್ದಾರೆ. ಮೈಸೂರಿನಲ್ಲಿಯೇ ಉಳಿದುಕೊಂಡಿದ್ದ ವಿನೋದ್ ಜೈನ್ ಚಿನ್ನದ ವ್ಯಾಪಾರದಲ್ಲಿ ನಷ್ಟ ಹೊಂದಿ, 20 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದ. ಇದನ್ನು ತೀರಿಸಲು ಸಾಧ್ಯವಾಗದೆ ಹೇಮಂತ್ ಮತ್ತು ಹರೀಶ್ ಜತೆ ಸೇರಿ ಈ ವಂಚನೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ರಸೀದಿ ಇಲ್ಲದೆ ಚಿನ್ನ ಕೊಟ್ಟಿದ್ದೇಕೆ?: ಚಿನ್ನದ ವ್ಯಾಪಾರಿ ದಿನೇಶ್ ಕುಮಾರ್ ರಸೀದಿ ಇಲ್ಲದೇ, ಗ್ರಾಹಕನನ್ನು ಮಳಿಗೆಗೆ ಕರೆಸಿಕೊಳ್ಳದೇ ಲಕ್ಷಾಂತರ ರೂ.ಮೌಲ್ಯದ ಚಿನ್ನದ ಗಟ್ಟಿಯನ್ನು ಮಾರಾಟ ಮಾಡಿರುವ ಬಗ್ಗೆ ತನಿಖೆ ನಡೆ ಯುತ್ತಿದೆ. ಈ ಸಂಬಂಧ ಮಾಹಿತಿ ನೀಡುವಂತೆ ದಿನೇಶ್‌ಗೆ ಸೂಚಿಸಿದ್ದೇವೆ ಎಂದು ಡಿಸಿಪಿ ಚಂದ್ರಗುಪ್ತಾ ತಿಳಿಸಿದರು.
ಕುಕೃತ್ಯಕ್ಕೆ ನಕಲಿ ಸಿಮ್ ಬಳಕೆ
ಬಂಧಿತರು ಈ ವಂಚನೆಗಾಗಿಯೇ ನಕಲಿ ಸಿಮ್ ಕಾರ್ಡ್ ಮತ್ತು ಮೊಬೈಲ್ ಖರೀದಿ ಸಿದ್ದರು. ಇದೇ ನಂಬರ್‌ನಿಂದ ದಿನೇಶ್ ಕುಮಾರ್‌ಗೆ ಕರೆ ಮಾಡಿದ್ದಾರೆ. ದರೋಡೆ ಮಾಡಿದ ಬಳಿಕ ಮೈಸೂರಿಗೆ ಹೋಗುವಾಗ ಮಾರ್ಗ ಮಧ್ಯೆ ಮೊಬೈಲ್ ಎಸೆದು ಪರಾರಿ ಯಾಗಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳ ಮೊಬೈಲ್ ಕರೆಗಳನ್ನು ವಿಶ್ವೇಷಿಸಿ ದೊರೆತ ಸಾûಾ$Âಧಾರಗಳ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.