Advertisement
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿನ ಹನುಮಾನ್ ನಗರದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದ ಪೌರ ಕಾರ್ಮಿಕರ ಮೇಲೆ ಸ್ಥಳೀಯರು ಈಚೆಗೆ ಹಲ್ಲೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ಪಾಲಿಕೆ ಆರೋಗ್ಯಾಧಿಕಾರಿ, ಇಂಜಿನಿಯರ್‌ಗಳು ಇರಬೇಕಿತ್ತು.
ಪಪಂಗಳಲ್ಲಿ ಸುಮಾರು 52 ಸಾವಿರ ಪೌರಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಜುಲೈ ತಿಂಗಳಲ್ಲಿ ಮುಖ್ಯಮಂತ್ರಿಗಳು ಸಭೆ ಕರೆದು ಕೈಗೊಂಡ ನಿರ್ಣಯದಂತೆ 15300 ಪೌರ ಕಾರ್ಮಿಕರನ್ನು ನೇರಪಾವತಿಯಡಿ ನೇಮಕ ಮಾಡಿಕೊಳ್ಳಲಾಯಿತು. ಇದೀಗ ಉಳಿದ ಹುದ್ದೆಗಳನ್ನು ಸಹ ಡಿಸೆಂಬರ್ ತಿಂಗಳೊಳಗೆ ಭರ್ತಿ ಮಾಡಿಕೊಳ್ಳುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ಲೋಡರ್, ಚಾಲಕರು, ಕ್ಲೀನರ್‌ಗಳನ್ನು ಸಹ ಗುತ್ತಿಗೆ ಪದ್ದತಿಯಿಂದ ನೇರ ಪಾವತಿಯಡಿ ನೇಮಕ ಮಾಡಿಕೊಳ್ಳಲಾಗುವುದು. ಅದಕ್ಕಾಗಿ ತಜ್ಞರು ನೀಡಿದ್ದ ಸಮೀಕ್ಷಾ ವರದಿಗಳನ್ನು ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದವರು ಭರವಸೆ ನೀಡಿದರು.
Related Articles
Advertisement
ಪೌರ ಕಾರ್ಮಿಕರಿಗೆ ಪ್ರತಿ ತಿಂಗಳು ವೇತನವಾದ ಬಳಿಕ ಪಿಎಫ್ ಸೇರಿ ಎಲ್ಲ ಮಾಹಿತಿಯುಳ್ಳ ಪೇ ಸ್ಲಿಪ್ ನೀಡುವಂತೆಯೂ ಸಂಬಂಧಪಟ್ಟ ಅಧಿ ಕಾರಿಗಳಿಗೆ ಸೂಚಿಸಲಾಗಿದೆ ಎಂದವರು ವಿವರಿಸಿದರು. ಇದಕ್ಕೂ ಮುನ್ನ ನಗರದ ಶ್ರೀರಾಂಪುರ ಕಾಲೋನಿಯಲ್ಲಿ ಹಲ್ಲೆಗೊಳಗಾದವರನ್ನು ಭೇಟಿಯಾದ ಶಿವಣ್ಣ ಅವರು, ಪರಾಮರ್ಶಿಸಿ ಸಾಂತ್ವನ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಡಿಸಿ ಪವನ್ ಕುಮಾರ್ ಮಾಲಪಾಟಿ, ಪಾಲಿಕೆ ಆಯುಕ್ತ ಎಸ್.ಎನ್. ರುದ್ರೇಶ್, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್. ಹನುಮಂತಪ್ಪ, ಹೆಚ್ಚುವರಿ ಎಸ್‌ಪಿ ಇತರರಿದ್ದರು.