Advertisement

ವಿಕಲಚೇತನರಲ್ಲಿದೆ ಅಸಾಮಾನ್ಯ ಪ್ರತಿಭೆ

12:00 PM Sep 29, 2019 | Suhan S |

ರಾಣಿಬೆನ್ನೂರ: ವಿಕಲಚೇತನರನ್ನು ಕೀಳರಿಮೆಯಿಂದ ಕಾಣಬಾರದು. ಸಾಮಾನ್ಯ ಮನುಷ್ಯರಿಗಿಂತ ಅಸಾಮಾನ್ಯ ಪ್ರತಿಭೆ ಹೊಂದಿರುವ ಅವರು ಅವಕಾಶದ ಜತೆಗೆ ಸ್ಪೂರ್ತಿ, ಸಹಕಾರ ನೀಡಿ ಅವರೂ ಸಮಾಜದಲ್ಲಿ ಮುಂದೆ ಬರಲು ಸಹಕಾರಿಯಾಗುತ್ತದೆ ಎಂದು ಹಿರಿಯ ನ್ಯಾಯಾಧೀಶ ಬಿ.ಬಿ. ಪ್ರಮೋದ ಹೇಳಿದರು.

Advertisement

ಶನಿವಾರ ಸ್ಥಳೀಯ ಮಾರುತಿ ನಗರದಲ್ಲಿ ಸೇವಾ ಅಂಧರ ಸಂಸ್ಥೆ ಹಾಗೂ ಶ್ರೀ ರೇಣುಕಾ ಎಲ್ಲಮ್ಮ ಕಿವುಡ ಮತ್ತು ಮೂಕ ಮಕ್ಕಳ ವಸತಿ ಶಾಲೆ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಆಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಕಿವುಡ ಮಕ್ಕಳ ದಿನಾಚರಣೆ, ಉಜ್ವಲ ಮಹಿಳೆ ಮತ್ತು ಮಕ್ಕಳ ಸಾಗಾಣಿಕೆ ತಡೆಗಟ್ಟುವ ಕಾರ್ಯಕ್ರಮ ಹಾಗೂ ಕಾನೂನು ಅರಿವು ನೆರವು ಹಾಗೂ ಜಾಗೃತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಕಾನೂನಿನ ಮುಂದೆ ಎಲ್ಲರೂ ಸಮಾನರು. ಕಾನೂನಿನ ಬಗ್ಗೆ ಗೌರವಯುತವಾಗಿ ನಡೆದುಕೊಳ್ಳಬೇಕು. ಕಾನೂನು ಉಲ್ಲಂಘನೆಯಾಗದಂತೆ ನಡೆದುಕೊಂಡು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ನ್ಯಾಯಾ ಧೀಶ ಪಿ. ಶಿವರಾಜ ಕಾನೂನಿನ ಬಗ್ಗೆ ಮತ್ತು ಮಕ್ಕಳ ಸಾಗಾಣಿಕೆ ತಡೆಗಟ್ಟುವಿಕೆ ಕುರಿತು ಮಾಹಿತಿ ನೀಡಿದರು. ನಂದಿಗುಡಿಯ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು ಕಾರ್ಯಕ್ರಮದ ಸಾನ್ನಿಧ್ಯವಹಿಸಿದ್ದರು. ಸೇವಾ ಸಂಸ್ಥೆಯ ಕಾರ್ಯದರ್ಶಿ ರೇಣುಕಾ ಶಿವಕುಮಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಕೀಲರ ಸಂಘದ ಅಧ್ಯಕ್ಷ ಎಂ.ಬಿ.ಗೌಡಪ್ಪಗೌಡ್ರ, ಎಸ್‌.ಎನ್‌ ಕೊಪ್ಪದ, ದೈಹಿಕ ಕ್ಷೇತ್ರ ಶಿಕ್ಷಣಾ ಧಿಕಾರಿ ಎ.ಬಿ. ಚಂದ್ರಶೇಖರ, ಶಿವಾನಂದ ಕಾಬಾಡೆ ಜೆ.ಜೆ.ಗವ್ವನವರ, ನಿತ್ಯಾನಂದ ಕುಂದಾಪುರ, ಸಂಸ್ಥೆಯ ಕಾರ್ಯದರ್ಶಿ ಎಚ್‌. ಆರ್‌. ಶಿವಕುಮಾರ, ಅಯ್ಯಂಗಾರ, ಕುಮಾರ ಮಡಿವಾಳರ, ಕೋಟ್ರೇಶ ಸಂಗಮೇಶ್ವರದ, ಶಿವರಾಜ ಗಂಗಣ್ಣನವರ, ಸೌಮ್ಯ ಎಸ್‌.ಆರ್‌. ನೇತ್ರಾವತಿ, ದೀಪಾ ಮತ್ತಿತರರು ಇದ್ದರು.

ಇದೇ ಸಂದರ್ಭದಲ್ಲಿ ನೇತ್ರಾವತಿ ಜಿ.ಎಂ. ಮತ್ತು ಶೈಲಾ ಕೆರೂಡಿ, ನಾರಾಯಣ ಹೆದ್ದೇರಿ ಮತ್ತಿತರರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ಶಾಲಾ ಸಮವಸ್ತ್ರಗಳನ್ನು ವಿತರಿಸಲಾಯಿತು. ಆನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಇದಕ್ಕೂ ಮುನ್ನ ಕೆಇಬಿ ಗಣಪತಿ ದೇವಸ್ಥಾನದಿಂದ ಮಕ್ಕಳ ಜಾಗೃತಿ ಜಾಥಾ ಮೆರವಣಿಗೆಗೆ ಶಹರ ಸಿಪಿಐ ಲಿಂಗನಗೌಡ ನೆಗಳೂರು ಚಾಲನೆ ನೀಡಿದರು. ನಗರದ ಪ್ರಮುಖ ಬೀದಿಗಳಲ್ಲಿ ಜಾಥಾವು ಸಂಚರಿಸಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next