Advertisement
ಮಣಿಪಾಲ ಮಾಹೆ ವಿ.ವಿ.ಯ ತಣ್ತೀಶಾಸ್ತ್ರ ವಿಭಾಗದಲ್ಲಿ ತಣ್ತೀಶಾಸ್ತ್ರ ವಿಭಾಗ ಮತ್ತು ಶ್ರೀ ಸುಬ್ರಹ್ಮಣ್ಯ ಮಠದ ವೇದವ್ಯಾಸ ಸಂಶೋಧನ ಕೇಂದ್ರದಿಂದ ಸೋಮವಾರ ಆಯೋಜನೆಗೊಂಡ ‘ಮಹಾಭಾರತ ಮತ್ತು ಅದರ ತಣ್ತೀಶಾಸ್ತ್ರೀಯ ದೃಷ್ಟಿ’ ಕುರಿತು ಮಾತನಾಡಿದ ಅವರು, ಪ್ರಜ್ಞೆಗೆ ಚಲನೆ ಇಲ್ಲ. ಅದು ಅನೇಕರನ್ನು ನೋಡಿ ಅವರನ್ನು ಅನುಕರಿಸುವ ಮೂಲಕ ಬೆಳೆಯುತ್ತದೆ ಎಂದರು.
ಲೋಕವನ್ನು ಹೇಗೆ ಇದೆಯೋ ಹಾಗೆ ನೋಡುವ ಮನೋಧರ್ಮವನ್ನು ಮಹಾಭಾರತದ ತಿಳಿವಳಿಕೆ ಬೆಳೆಸುತ್ತದೆ. ದರ್ಶನವೆಂದರೂ ಇದೇ ಅರ್ಥ. ಮಹಾಭಾರತದ ಆಶಯವೂ ಇದೇ ಆಗಿದೆ. ಆದರೆ ಅದು ನಮಗೆ ಒಪ್ಪಿತವಾಗದೆ ದುರಂತವಾಗಿ ಕಂಡುಬರುತ್ತದೆ. ಇತಿಹಾಸಕಾರನಿಗೆ ಹಾಗೆ ಕಾಣುವುದಿಲ್ಲ. ಇತಿಹಾಸವೆಂದರೆ ಮರುಕಳಿಸುವುದು. ನನ್ನಲ್ಲಿಗೆ ಬಾ ಎಂಬ ಕೃಷ್ಣನ ಸಂದೇಶ ಮರುಕಳಿಕೆ ಇಲ್ಲದ ಸ್ಥಳವನ್ನು ಸೂಚಿಸುತ್ತದೆ. ಸಂವೇದನಶೀಲನಾದವನು ಮಾತ್ರ ಸಮುದಾಯದ ಅನುಭವಗಳನ್ನು ಕಾಣುವ ಮೂಲಕ ನೋಡುತ್ತಾನೆ. ಇದು ಅದುವರೆಗಿನ ಅನುಭವಗಳಿಂದ ಪಾರಾಗುವ ಮಾರ್ಗವೂ ಹೌದು ಎಂದು ತಿಳಿಸಿದರು. ಪೂರ್ವಿಕರು ಬಹಳ ಕಷ್ಟಪಟ್ಟು ರಚಿಸಿದ ಪ್ರಾಚೀನ ಗ್ರಂಥಗಳ ಸಂಶೋಧನೆ, ವಿಮರ್ಶೆ ನಡೆಯುವ ಮೂಲಕ ಆ ಜ್ಞಾನ ಪರಂಪರೆಯನ್ನು ಮುಂದುವರಿಸುವುದು ಬಹಳ ಅಗತ್ಯವಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು ಹೇಳಿದರು.
Related Articles
ಭಾರತೀಯತೆ ಅರ್ಥ ಮಾಡಿಕೊಳ್ಳುವುದು ಕಷ್ಟ
ಮಹಾಭಾರತ ಸಂಪಾದಿತ ಕೃತಿಯಲ್ಲಿ ಸುಪ್ತಂಕರರು ಮಹಾಭಾರತಕ್ಕೆ ಅತ್ಯುನ್ನತ ಸ್ಥಾನ ಕೊಟ್ಟ ಮಧ್ವಾಚಾರ್ಯರ ಹೆಸರನ್ನು ಉಲ್ಲೇಖೀಸಲಿಲ್ಲವಾದರೂ ಅವರ ಉಪನ್ಯಾಸ ಮಾಲಿಕೆಗಳ ಪ್ರಕಟನೆಯ ಮುನ್ನುಡಿಯಲ್ಲಿ, ‘ಮಹಾಭಾರತದ ಸಂಪೂರ್ಣ ಅರ್ಥ ದೇವತೆಗಳಿಗೂ ಆಗದು’ ಎಂಬ ಮಧ್ವಾಚಾರ್ಯರ ಮಾತನ್ನು ಉಲ್ಲೇಖೀಸಿದ್ದಾರೆ. ಸಂಕಯ್ಯ ಭಾಗವತರು ಹಾಲು ವಿಷವಾದರೆ ಬದುಕುವುದು ಹೇಗೆಂಬ ಹಾಡನ್ನು ಹಾಡಿ ‘ನಾನೂ ಉದರ ಶೂಲೆಯಿಂದ ಸಾಯು ತ್ತೇನೆ’ ಎನ್ನುತ್ತಿದ್ದರು. ಹಾಗೆಯೇ ಸತ್ತರು. ಭಾರತೀ ಯತೆಯನ್ನು ಅರ್ಥ ಮಾಡಿಕೊಳ್ಳುವುದು ಬಲು ಕಷ್ಟ ಎನ್ನುವುದಕ್ಕೆ ಮಹಾಭಾರತವೇ ಸಾಕ್ಷಿ.
ಕ್ರಿಯಾಪದ ಮೊದಲೋ? ನಾಮಪದ ಮೊದಲೋ?
ಕ್ರಿಯಾಪದ ಮೊದಲೋ ನಾಮಪದ ಮೊದಲೋಎಂಬ ಪ್ರಶ್ನೆ ಮೀಮಾಂಸಕರಲ್ಲಿದೆ. ಮೀಮಾಂಸ ಕರು ಕ್ರಿಯಾಪದವೇ ಮೊದಲು ಎಂದರು. ವೇದಾಂತಿಗಳು ನಾಮಪದವೇ ಮೊದಲು ಎನ್ನಲು ದೇವರ ಮಾತಾದ ‘ಅಹಂ ಬ್ರಹ್ಮಾಸ್ಮಿ’ ಯನ್ನು ಉದಾಹರಿಸಿದರು ಎಂದು ತೋಳ್ಪಾಡಿ ಅವರು ಹೇಳಿದರು.
Advertisement