Advertisement

ಹೆಣ್ಣು ಮಕ್ಕಳ ಮೇಲಿನ ಶೋಷಣೆ ನಿಂತಿಲ್ಲ

04:17 PM Nov 12, 2018 | |

ಹೂವಿನಹಡಗಲಿ: ಹೆಣ್ಣು ಈ ಸಮಾಜದ ಕಣ್ಣು. ಕೇವಲ ಅಡುಗೆ ಮನೆಗೆ ಸೀಮಿತವಾಗದೆ ಪ್ರತಿಯೊಂದು ಕ್ಷೇತ್ರದಲ್ಲಿ ತನ್ನನ್ನು ತಾನು ತೋಡಗಿಸಿಕೊಂಡು ನಿಸ್ವಾರ್ಥದಿಂದ ಕೆಲಸದಲ್ಲಿ ತೊಡಗುವಳು. ಶಿಕ್ಷಣ, ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಹೆಣ್ಣು ಮಕ್ಕಳ ಮೇಲಿನ ಶೋಷಣೆ ಮಾತ್ರ ನಿಂತಿಲ್ಲ ಎಂದು ಜಿಲ್ಲಾ ಲೇಖಕಿಯರ ಸಂಘದ ಸದಸ್ಯೆ, ಬಳ್ಳಾರಿ ಸಾಹಿತಿ ಎನ್‌.ಡಿ. ವೆಂಕಮ್ಮ ಹೇಳಿದರು.

Advertisement

ತಾಲೂಕಿನ ಸೋಗಿ ಗ್ರಾಮದಲ್ಲಿ ದೇವಗೊಂಡನಹಳ್ಳಿ ಪಾಟೀಲ್‌ ಪ್ರಕಾಶನ ಹಾಗೂ ಬಳ್ಳಾರಿ ಜಿಲ್ಲಾ ಕರ್ನಾಟಕ ಲೇಖಕಿಯರ ಸಂಘದ ಸಹಯೋಗದಲ್ಲಿ ದಿವ್ಯಜ್ಯೋತಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಹಾಲಪ್ಪ ಚಿಗಟೇರಿ ಇಟ್ಟಗಿ ಅವರು ರಚಿಸಿದ “ಹಾಚಿ ವಚನಗಳು’ (ಕವನ ಸಂಕಲನ), ಡಾ| ಅಂಜನಾ ಕೃಷ್ಣಪ್ಪ ಸಂಪಾದಕತ್ವದ “ಬಿಸಿಲು ಮಲ್ಲಿಗೆ’ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಿಳೆಯರು ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿ ಕೊಡುಗೆ ನೀಡಿದ್ದಾರೆ . ಸಮಾಜದಲ್ಲಿ ಸರಿಯಾದ ಸ್ಥಾನಮಾನಗಳು ಮಹಿಳೆಯರಿಗೆ ಸಿಗುತ್ತಿಲ್ಲ. ಎಲ್ಲರಿಗೂ ಸಮಾನ ಅವಕಾಶಗಳು ಸಿಗಬೇಕು. ಮಹಿಳೆಯರ ಹಕ್ಕು ಮತ್ತು ರಕ್ಷಣೆಗಾಗಿ ಪ್ರತಿಯೊಬ್ಬರೂ ಹೋರಾಡಬೇಕು ಎಂದರು. 

ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ನಯನ ಮಲ್ಲಿನಾಥ, ಕಾವ್ಯವನ್ನು ರಚಿಸಬೇಕಾದರೆ ಯಾವುದೆ ವಿಷಯ ವಸ್ತುವನ್ನು ಆಸ್ವಾದಿಸಿ, ಆನಂದಿಸಿದಾಗ ಮಾತ್ರ ಅದನ್ನು ಬರೆಯಲು ಸಾಧ್ಯ. ಭಾವನೆ, ನೋವುಗಳನ್ನು ನಾವು ಹೇಳಲಾಗದೆ ಅದನ್ನು ನಮ್ಮಲ್ಲಿಯೇ ಅದನ್ನು ನುಂಗಿಕೊಳ್ಳುತ್ತೇವೆ. ಆದರೆ, ಅದನ್ನು ಬರಹದ ಮೂಲಕವಾದರೂ ಹೊರಹಾಕಬೇಕು. ಅದು ಕಾವ್ಯವಾಗಿ ಮಾರ್ಪಡುತ್ತದೆ ಎಂದು ಹೇಳಿದರು.

ಕಾರವಾರದ ವಿದ್ಯುತ್‌ ಉತ್ಪಾದನಾ ಘಟಕ ಕೈಗಾದ ಜಿ. ಶಿವಕುಮಾರ ಮಾತನಾಡಿ, ಸಾಹಿತಿ ತನ್ನ ಅಂತರಾಳದ ರೂಪಕ್ಕೆ ಬರಹದ ಮೇರಗನ್ನು ನೀಡಿದಾಗ ಅದು ಕವನ ಕಾವ್ಯವಾಗುತ್ತದೆ. ಪುಸ್ತಕದ ಶೀರ್ಷಿಕೆ ಅದರ ವಿಷಯ ವಸ್ತುವನ್ನು ಹೇಳುವಂತಿರಬೇಕು. ಅದು ಆಕರ್ಷಣೆಯಾಗಿ ಇದ್ದರೆ ಮಾತ್ರ ಪುಸ್ತಕವನ್ನು ಓದುವ ಕೊಂಡುಕೊಳ್ಳುವ ಮನೋಭಾವ ಉಂಟಾಗುತ್ತದೆ ಎಂದರು.

Advertisement

 ವಚನಗಳು ಜೀವಾಮೃತ ವಿಚಾರಧಾರೆಗಳನ್ನು ಕಡಿಮೆ ಪದದಲ್ಲಿ ವಿಸ್ತಾರವಾದ ವಿಚಾರಧಾರೆಗಳನ್ನು ಹೇಳುತ್ತವೆ. ಹಾಚಿಯವರು ತಮ್ಮ ವಚನಗಳಲ್ಲಿ ಪ್ರತಿ ಸಂದರ್ಭದಲ್ಲಿ ದೇವರನ್ನು ನೆನೆಯುತ್ತಾರೆ. ನಾವೆಲ್ಲರೂ ದುಃಖ ಬಂದಾಗ ಮಾತ್ರ ನೆನೆಯುತ್ತೆವೆ ಎಂದು ಹೇಳಿದರು. ಡಾ| ಅಂಜನಾ ಕೃಷ್ಣಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯರಾದ ಎಂ ವೀಣಾ ಪರಮೇಶ್ವರಪ್ಪ ಉದ್ಘಾಟಿಸಿದರು.

ಚನ್ನವೀರನಗೌಡ ಪಾಟೀಲ್‌, ಶಿವಲೀಲಾ ಅರವಿಂದ ಕೃತಿಗಳ ಬಗ್ಗೆ ಮಾತನಾಡಿದರು. ಸರೋಜಾ ಬ್ಯಾಟನ್‌ಹಾಳ್‌, ಎಂ.ಎಸ್‌. ಹಿಮರಾಜ್‌, ಬಿ.ಮಹಾಂತೇಶ್‌, ಶಿಕ್ಷರಾದ ಸದ್ಗುಣಾ, ಮಂಜುನಾಥ ಪಟ್ಟೇದ್‌, ಸಾಹಿತಿ ಕೌಸಲ್ಯ ದೇವೆಂದ್ರನಾಯ್ಕ ಇದ್ದರು. ಮಾತನಾಡಿದರು. ಸಂಗೀತ ಶಿಕ್ಷಕ ಯುವರಾಜಗೌಡ ಮತ್ತು ತಂಡ ಪ್ರಾರ್ಥಿಸಿದರು. ಶಿಕ್ಷಕಿ ಯಶೋಧ ಸ್ವಾಗತಿಸಿದರು. ಮುಖ್ಯಗುರು ಹಾಲೇಶ ಹಕ್ಕಂಡಿ, ಸಾಹಿತಿ ಹಾಲಪ್ಪ ಚಿಗಟೇರಿ ನಿರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next